ಸಿಂದಗಿ – ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ ಎಂದು ಸಾರಂಗ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇವರು ಹಮ್ಮಿಕೊಂಡ 86ನೇ ಶಿವ ಜಯಂತಿ ಪ್ರಯುಕ್ತ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ.ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎಂದರು.
ಈ ಸಂದರ್ಭದಲ್ಲಿ ರಾಜೀವನ ಬ್ರಹ್ಮಕುಮಾರಿ ಪವಿತ್ರಾಜಿ ಕಸಾಪ ಅಧ್ಯಕ್ಷ ರಾಜಶೇಖರ ಕುಚಬಾಳ, ನಾಗರತ್ನ ಮನಗೂಳಿ ಸೀಮಾ ಉಡಚಣ, ವಿಜಯಕುಮಾರ, ತಾನಾಜಿ, ಪಿ ಎಸ್ ಐ ನಿಂಗಣ್ಣ ಪೂಜಾರಿ, ಡಾ. ಚಿಕ್ಕಲಗಿ, ಬಿ ಪಿ ಕರ್ಜಗಿ,ಬಿ ಜಿ ಪಾಟೀಲ ಎಸ್ ಎಸ್ ಪಾಟೀಲ, ಪ್ರಮೀಳಾ ಪಾಟೀಲ ಎಸ್ ಎಸ್ ಎಸ್ ಬುಳ್ಳ, ಎಸ್ ವೈ ಬಿರಾದಾರ,ಸಿದ್ದಲಿಂಗ ಚೌದರಿ, ಶಾಂತಪ್ಪ ರಾಣಾಗೊಳ,ಕೆ ಎಸ್ ಪತ್ತಾರ ಎಂ ಎಂ ದೊಡಮನಿ, ಮಂಜುಳಾ ಹೂಗಾರ, ಮಹಾದೇವಿ,ನಾಗಮ್ಮ, ಐಶ್ವರ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.