spot_img
spot_img

ಗೃಹಲಕ್ಷ್ಮೀ ಯೋಜನೆ ಸದುಪಯೋಗವಾಗಲಿ; ಪಿಡಿಒ ವಿಶ್ವನಾಥ ಅಭಿಮತ

Must Read

spot_img
- Advertisement -

ಸಿಂದಗಿ: ಸಂಕಷ್ಟದಲ್ಲಿ ಜೀವನ ಕಳೆಯುತ್ತಿರುವ ಕುಟುಂಬದ ಕಣ್ಣೀರು ಒರೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಗ್ರಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ ತಾಯಂದಿರು ಗ್ರಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿವೃದ್ಧಿ ಅಧಿಕಾರಿ ವಿಶ್ವನಾಥ ದೊಡಮನಿ ಹೇಳಿದರು.

ತಾಲೂಕಿನ ನಾಗಾವಿ ಬಿಕೆ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡ ಗೃಹಲಕ್ಷಿ ಯೋಜನೆ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಮಕ್ಕಳು ಬಡತನದಿಂದ ಶಿಕ್ಷಣ ಬಿಟ್ಟು ಹೋಟಲ್‍ಗಳಲ್ಲಿ ಕೆಲಸ ಮಾಡುತ್ತಿರುವುದು ಸರ್ವೇ ಸಾಮಾನ್ಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳ ಆರೋಗ್ಯಕ್ಕಾಗಿ ಆಹಾರಕ್ಕಾಗಿ ಈ ಯೋಜನೆ ಉಪಯೋಗವಾಗಬೇಕು ಹೊರತು ಅನಾವಶ್ಯವಾಗಿ ದುಡ್ಡು ಹಾಳು ಆಗಬಾರದು ಎಂದು ತಿಳಿ ಹೇಳಿದ ಅವರು ಇನ್ನೂ ಅರ್ಜಿ ಹಾಕದ ಗ್ರಹಿಣಿಯರು ತಮ್ಮ ಮೂಲ ಆಧಾರ ಪ್ರತಿಗಳನ್ನು ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಮತ್ತು ಬ್ಯಾಂಕಿನಲ್ಲಿ ಆಧಾರ ಲಿಂಕ್ ಆಗಿದೆ ಇಲ್ಲ ಎನ್ನುವದನ್ನು ಪರಿಶೀಲಿಸಬೇಕು ಎಂದರು.

ವಿಶೇಷವಾಗಿ ರೈತ ಮಹಿಳೆಯರು ಗ್ರಹಲಕ್ಷ್ಮೀ ಯೋಜನೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 

- Advertisement -

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಕಾಸಿಮ್ ಮಂದೆವಾಲಿ, ನಿಂಗಣ್ಣ ಬಿರಾದಾರ, ವಾಯ್ ಜಿ ಪಾಟೀಲ್ ಅಂಗನವಾಡಿ ಆಶಾ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಇದ್ದರು.

ಮೋರಟಗಿ, ಯರಗಲ್, ಗಬಸಾವಳಗಿ, ಬಗಲೂರ , ಕಕ್ಕಳಮೇಲಿ, ಮಲಘಾಣ, ಗುತ್ತರಗಿ, ಗ್ರಾಮ ಪಂಚಯತಿಗಳಲ್ಲಿ ಗ್ರಹಲಕ್ಷ್ಮೀ ಯೋಜನೆಯ ಅದ್ದೂರಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

- Advertisement -
- Advertisement -

Latest News

ಸಾಯಿ ಸೇವಾ ಸಮಿತಿ ವಾರ್ಷಿಕೋತ್ಸವದ ಕಾರ್ಯಕ್ರಮ

ಮೂಡಲಗಿ: -ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೮ ನೆಯ ವಾರ್ಷಿಕೋತ್ಸವದ ಸಮಾರಂಭವು ಎಪ್ರಿಲ್,೦೬-೨೦೨೫ ರಂದು ಮುಂಜಾನೆ,೪-೪೫ಕ್ಕೆ ಸುಪ್ರಭಾತದೊಂದಿಗೆ ಕಾರ್ಯಕ್ರಮ...
- Advertisement -

More Articles Like This

- Advertisement -
close
error: Content is protected !!
Join WhatsApp Group