ಸಿಂದಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್‌ಜಿ ಬಣ) ತಾಲೂಕ ಶಾಖೆ ಸಿಂದಗಿ ವತಿಯಿಂದ ಮುಂಬರುವ ಏಪ್ರಿಲ್ ೧೪ನೇ ರಂದು ವಿಶ್ವ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ ಸಿ ಮಯೂರ ಹೇಳಿದರು.
ಶುಕ್ರವಾರ ಪಟ್ಟಣದ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪ್ರತಿ ವರ್ಷ ಒಂದಿಲ್ಲ ಒಂದು ಚುನಾವಣೆಗಳು ಬಂದು ಜಯಂತ್ಯುತ್ಸವ ಸರಳವಾಗಿ ಆಚರಿಸಿದ್ದು ಈ ವರ್ಷ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದ್ದು. ಸತತ ೫ ದಿನಗಳ ಕಾಲ ಅಂದರೆ ಏಪ್ರಿಲ್ ೧೦ ರಿಂದ ೧೪ನೇ ವರೆಗೆ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಡಾ.ಬಾಬಾಸಾಹೇಬರ ಬಗ್ಗೆ ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಎಪ್ರಿಲ್ ೧೪ರಂದು ಡಾ.ಬಾಬಾಸಾಹೇಬರ ಪ್ರತಿಮೆಯ ಭವ್ಯವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಜ್ಯದ ಪ್ರತಿಷ್ಠಿತ ಕಲಾ ತಂಡಗಳೊಂದಿಗೆ ಭವ್ಯವಾದ ಭೀಮೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಯಂಕಾಲ ೫:೦೦ ಗಂಟೆಗೆ ಬಹಿರಂಗ ಸಭೆ ನಡೆಸಲಾಗುವುದು. ಮುಂದೆ ಸಾಯಂಕಾಲ ೬ ಗಂಟೆಗೆ ಭಾರತ ಭಾಗ್ಯವಿದಾತ ನಾಟಕ ಪ್ರದರ್ಶನ ನಡೆಸಲಾಗುವುದು ಎಂದರು.
ಈ ಒಂದು ಮಹತ್ವದ ಕಾರ್ಯಕ್ರಮಕ್ಕೆ ಸಿಂದಗಿಯ ಶಾಸಕ ಅಶೋಕ ಎಮ್ ಮನಗೂಳಿ ಹಾಗೂ ಕ.ರಾ.ದ.ಸಂ.ಸ. ಯ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ್ ಮತ್ತು ಜಿಲ್ಲೆಯ ತಾಲೂಕಿನ ವಿವಿಧ ರಾಜಕೀಯ ಪಕ್ಷದ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಅಹಿಂದ ಹೋರಾಟಗಾರರು, ಪ್ರಗತಿಪರ ವಿಚಾರವಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಸುಮಾರು ಹತ್ತು ಸಾವಿರ ಜನ ಸಂಖ್ಯೆ ಸೇರುವ ನಿರೀಕ್ಷೆ ಇದೆ, ಡಾ.ಅಂಬೇಡ್ಕರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಧರ್ಮಸ್ಥಳದಲ್ಲಿ ನಡೆದ ಬಾಲಕಿ ಸೌಜನ್ಯ ಅವಳ ಹತ್ಯೆಯಾಗಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಯೂಟ್ಯೂಬ ಚಲನ ಶಮೀರ ಎಂ.ಡಿ ಅವರಿಗೆ ಜೀವ ಬೆದರಿಕೆ ಹಾಕುವಂತ ಕೃತ್ಯಗಳು ನಡೆಯುತ್ತಿದ್ದು ಸರಕಾರ ಅವರಿಗೆ ಭದ್ರತೆ ನೀಡಬೇಕು
ವೈ ಸಿ ಮಯೂರ
ಜಿಲ್ಲಾ ಸಂಚಾಲಕರು
ದಲಿತ ಸಂಘರ್ಷ ಸಮಿತಿ
ಕರ್ನಾಟಕ ರಣಧೀರ ಪಡೆಯ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ್ ಮಣಿಗೇರಿ ಮಾತನಾಡಿ, ಏ. ೧೦ ರಂದಿ ೧೪ರ ವರೆಗೆ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಡಾ. ಅಂಬೇಡ್ಕರರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ರಣಧಿರ ಪಡೆ ಸಂಘಟನೆಯಿಂದ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ತಾಲೂಕ ಸಂಚಾಲಕ ಶರಣು ಚಲವಾದಿ, ಕ.ರಾ.ದ.ಸಂ.ಸ. ತಾಲೂಕ ಸಂ.ಸಂಚಾಲಕ ನೀಲಕಂಠ ಹೊಸಮನಿ, ಸಂ.ಸಂಚಾಲಕ ಶಿವಪುತ್ರ ಮೇಲಿನಮನಿ, ಸಂ.ಸಂಚಾಲಕ ಪರಶುರಾಮ್ ಬ್ಯಾಕೋಡ, ತಾಲ್ಲೂಕ ಖಜಾಂಚಿ ಜೈ ಭೀಮ ಕುಚಬಾಳ, ದಲಿತ ಯುವ ಮುಖಂಡ ಸಚೀನ ಚೌರ ಸೇರಿದಂತೆ ಇನ್ನಿತರರು ಇದ್ದರು.