spot_img
spot_img

ವೈದ್ಯರ ನಡಿಗೆ ಹಳ್ಳಿಗಳ ಕಡೆಗೆ ವಿಶೇಷ ಕಾರ್ಯಕ್ರಮಕ್ಕೆ ಸಂಸದ ಈರಣ್ಣ ಕಡಾಡಿ ಚಾಲನೆ

Must Read

spot_img
- Advertisement -

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣದಿಂದ ಸರ್ಕಾರ ” ವೈದ್ಯರ ನಡಿಗೆ ಹಳ್ಳಿಯ ಕಡೆಗೆ ” ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ಮೇ 24 ರಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು, ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗುವುದು.

ಹೀಗೆ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗಳಲ್ಲಿ ಕರೋನಾ ಸೋಂಕು ದೃಢಪಟ್ಟರೆ ಅವರನ್ನು ಜನರಿಂದ ಬೇರ್ಪಡಿಸಿ ನಾಗನೂರ ಪಟ್ಟಣದಲ್ಲಿ ಪ್ರಾರಂಭಿಸಲಾದ ಕರೋನಾ ಆರೈಕೆ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು. ಹೀಗೆ ಮಾಡುವುದರಿಂದ ಕರೋನಾ ಸರಪಳಿಯನ್ನು ತುಂಡರಿಸಿದಂತಾಗುತ್ತದೆ. ಆದ ಕಾರಣ ಗ್ರಾಮದ ಎಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಒಳಪಡಬೇಕೆಂದು ವಿನಂತಿಸಿದರು.

- Advertisement -
ತುಕ್ಕಾನಟ್ಟಿ ಗ್ರಾಮದ ಕೋವಿಡ್-19 ಟಾಸ್ಕ್ ಪೋರ್ಸ ಸಮಿತಿ ಸಭೆಯಲ್ಲಿ ಮಾತನಾಡುತ್ತಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ. ತಹಶೀಲ್ದಾರ ಮೋಹನ್ ಭಸ್ಮೆ, ಡಾ. ಮುತ್ತಣ್ಣ ಕೊಪ್ಪದ ಇದ್ದರು.

ಸೋಂಕಿನ ನಂತರ ಜನರು ನಿರ್ಲಕ್ಷ ವಹಿಸಿದ ಕಾರಣದಿಂದಾಗಿ ಸಾವಿನ ಪ್ರಮಾಣಗಳು ಹೆಚ್ಚಾಗುತ್ತಿದ್ದು ಪ್ರಾರಂಭದಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ವಹಿಸಿ ಚಿಕಿತ್ಸೆ ಪಡೆದರೆ ಸಾಕಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಹೀಗಾಗಿ ಈ ಬಗ್ಗೆ ಗ್ರಾಮದ ಜನರಲ್ಲಿ ವೈದ್ಯರು, ಎ.ಎನ್.ಎಮ್, ಆಶಾ, ಅಂಗನವಾಡಿ ಕಾರ್ಯಯರ್ತರು ಜಾಗೃತಿ ಮೂಡಿಸಲು ಸೂಚಿಸಿದರು.

ತಹಶೀಲ್ದಾರ ಮೋಹನ್ ಭಸ್ಮೆ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೂಡ್, ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ, ಪಿಡಿಒ ವೀರಭದ್ರ ಗುಂಡಿ, ಟಾಸ್ಕ್ ಪೋರ್ಸ ಸಮಿತಿ ಸದಸ್ಯರು, ಸೇರಿದಂತೆ ಪ್ರಮುಖರಾದ ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಪ್ಪಗೊಳ, ಪುಂಡಲಿಕ ಅರಭಾಂವಿ, ಅಜ್ಜಪ್ಪ ಮನ್ನಿಕೇರಿ, ಸತ್ಯಪ್ಪ ಮಲ್ಲಾಪೂರ, ಭರಮಣ್ಣ ಉಪ್ಪಾರ, ಕೃಷ್ಣಪ್ಪ ಗದಾಡಿ, ಉಪಸ್ಥಿತರಿದ್ದರು.

- Advertisement -

“ತುಕ್ಕಾನಟ್ಟಿ ಗ್ರಾಮದಲ್ಲಿ ಕರೋನಾ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಸ್ವತಃ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾಗವಹಿಸಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇದೇ ಸಂದರ್ಭದಲ್ಲಿ ವೈದ್ಯರು, ಎ.ಎನ್.ಎಮ್, ಆಶಾ, ಅಂಗನವಾಡಿ ಕಾರ್ಯಯರ್ತರಿಗೆ ನಾವು ನಿಮ್ಮ ಜೊತೆಗಿದ್ದೇವೆ ಯಾರು ಆತಂಕಕೊಳ್ಳಗಾಗದೆ ಧೈರ್ಯದಿಂದ ಕೆಲಸ ಮಾಡುವಂತೆ ಹೇಳಿದರು. ಇವರ ಕಾರ್ಯಕ್ಕೆ ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.”

- Advertisement -
- Advertisement -

Latest News

ಗುಬ್ಬೆವಾಡ  ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ

ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group