ಇನ್ನು ಮುಂದೆ ಮೂಡಲಗಿ ಸಂತೆ ಮಂಗಳವಾರ; ಮೊದಲಿನ ವೈಭವ ಬರುವುದೆ ?

Must Read

ಮೂಡಲಗಿ – ಪ್ರತಿ ರವಿವಾರ ಜರುಗುತ್ತಿದ್ದ ಮೂಡಲಗಿ ನಗರದ ವಾರದ ಸಂತೆ ಇನ್ನು ಮುಂದೆ ಮಂಗಳವಾರ ಜರುಗುತ್ತದೆ.

ಇದೇ ದಿ. ೩೧ ರಿಂದ ಮಂಗಳವಾರದ ಸಂತೆ ಆರಂಭವಾಗಲಿದೆ ಎಂಬುದಾಗಿ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

ಶತಮಾನದಿಂದ ರವಿವಾರ ದಿನ ಸಂತೆ ನಡೆಸುತ್ತಿದ್ದ ಮೂಡಲಗಿ ಗ್ರಾಮದಲ್ಲಿ ” ಶನಿವಾರ ಚಿಂತಿ, ರವಿವಾರ ಸಂತಿ, ಸೋಮಾರ ನಿಶ್ಚಿಂತಿ ” ಎಂಬ ಮಾತು ಪ್ರಚಲಿತ ವಾಗಿತ್ತು. ಯಾಕೆಂದರೆ ಮೂಡಲಗಿಯ ದನಗಳ ಸಂತೆ ಕರ್ನಾಟಕ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಲ್ಲೂ ಪ್ರಸಿದ್ಧವಾಗಿತ್ತು. ಶನಿವಾರದಿಂದಲೇ ಇಲ್ಲಿನ ಸಂತೆಯ ತಯಾರಿ ಜರುಗುತ್ತಿತ್ತು. ರವಿವಾರ ಅತ್ಯಂತ ಜನನಿಬಿಡತೆಯಿಂದ ರವಿವಾರ ಸಂತೆ ಜರುಗುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ಜನರೆಲ್ಲ ಮೂಡಲಗಿಗೇ ಆಗಮಿಸಿ ಸಂತೆ ಮಾಡಿಕೊಂಡು ಹೋಗುತ್ತಿದ್ದರು ಹೀಗಾಗಿ ಇಲ್ಲಿಯ ಸಂತೆ ತುಂಬಾ ರಶ್ ಆಗಿರುತ್ತಿತ್ತು.

ದನಗಳ ಪೇಟೆಯಂತೂ ತುಂಬಾ ಪ್ರಸಿದ್ಧ. ನೂರಾರು ಕಿಲೋಮೀಟರ್ ದೂರದ ಊರಿನಿಂದ ದನಗಳನ್ನು ಹೊಡೆದುಕೊಂಡು ಬಂದ ಜನರು ಇಲ್ಲಿ ವ್ಯಾಪಾರ ಮುಗಿಸಿಕೊಂಡು ಹೋಗುತ್ತಿದ್ದರು. ರೈತರಿಗೂ ಕೂಡ ಮೂಡಲಗಿ ದನಗಳ ಪೇಟೆ ತುಂಬಾ ಅನುಕೂಲಕರವಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ನೆರೆಯ ಎಲ್ಲಾ ಗ್ರಾಮಗಳಲ್ಲಿ ಕೂಡ ವಾರದ ಸಂತೆ, ದನಗಳ ಸಂತೆ ನಡೆದು ಮೂಡಲಗಿ ಸಂತೆಯ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಅಲ್ಲದೆ ಕೊರೋನಾ ಮಹಾಮಾರಿಯ ಕಾರಣ ಕಳೆದ ವರ್ಷದಿಂದ ರವಿವಾರದ ಸಂತೆ ನಡೆಯದೆ ಇಲ್ಲಿನ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದಂತಾಗಿತ್ತು.

ಊರ ಪ್ರಮುಖರ ನಿರ್ಧಾರದಂತೆ ಇಂದು ಮೂಡಲಗಿಯ ರವಿವಾರದ ಸಂತೆ ರದ್ದಾಗಿದ್ದು ಅದು ಮಂಗಳವಾರ ನಡೆಯಲಿದೆ. ಈ ದಿನವಾದರೂ ಮೂಡಲಗಿಯ ಸಂತೆಗೆ ಮೊದಲಿನ ವೈಭವ ಮರುಕಳಿಸುವುದೇ ಎಂಬುದನ್ನು ಕಾದು ನೋಡಬೇಕು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group