ನಾಗಕೇಸರ ಅಥವಾ ಚಿತ್ತೆ ಬೀಜ.ಶಾಲೆಯ ರಜಾದಿನಗಳಲ್ಲಿ ಪಿರಿಯಡ್ ಗ್ಯಾಪ್ ಅಲ್ಲಿ ನಮ್ಮ ಆಟ ಗಳ ಸಾಲಿನಲ್ಲಿ ಚಿತ್ತೆ ಯಾಗಿ ,ಗೋಲಿ ಯಾಗಿ ,ಹುಲಿಹಸುವಿನ ದಾಳಗಳಾಗಿ,ಪಗಡೆಯ ಕವಡೆಯಾಗಿ ನಮ್ಮ ಆಟದ ಪರಿಕರ ಗಳಲ್ಲಿ ಒಂದು. ನಾಗ ಬನ ಗಳಂತಹ ದೇವರ ಸಾನಿಧ್ಯದಲ್ಲಿ ಈ ಮರಗಳ ಆಯ್ಕೆ ಹೆಚ್ಚು. ಮಲೆನಾಡಿನ ಮರದ ಹಲಗೆಯ ಚಾವಣಿಗೆ ಇದರ ಎಲೆ ಹಾಕಿ ಮಣ್ಣು ಹಾಕಿ ನೆಲಮಾಡಿದರೆ ಗೆದ್ದಲು ಭಯ ಇರುವುದಿಲ್ಲ. ಈಗಲೂ ಹಳೆಯ ಕಾಲದ ಮನೆ ಕೆಡವಿದಾಗ ಈ ಎಲೆಗಳ ಪಳೆಯುಳಿಕೆ ಹಾಗೆ ಇರುವುದು ಕಾಣಬಹುದು. ಇದರ ಎಣ್ಣೆ ಸವರಿದ ಮರದ ಫೀಟೋಪಕರ್ಣ ಹಾಳಾಗುವುದಿಲ್ಲ.
ಇದರ ಕಾಯಿ, ಹೂವಿನ ಕುಸುಮ, ಎಲೆಗಳನ್ನು ಮೆಡಿಸಿನ್ ಗೆ ಉಪಯೋಗಿಸುತ್ತಾರೆ.
- ಹೂವಿನ ಕುಸುಮ ವನ್ನು ಬೆಣ್ಣೆ ಸೇರಿಸಿ ಸೇವಿಸಿದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
- ಕುಸುಮದ ಪುಡಿಯನ್ನು ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
- ಕೇಸರವನ್ನು ತುಪ್ಪ ಸೇರಿಸಿ ಸೇವಿಸಿದರೆ ಬಿಳಿಮುಟ್ಟು ಗುಣವಾಗಿ ದೇಹ ಪುಷ್ಟಿ ಆಗುತ್ತದೆ.
- ಅಂಗಾಲು ಅಂಗೈ ಉರಿಗೆ ನಾಗಸಂಪಿಗೆ ತುಪ್ಪವನ್ನು ಸವರಿ ಕೆಂಡದಲ್ಲಿ ಕಾಯಿಸಿದರೆ ಗುಣವಾಗುತ್ತದೆ.
- ನಾಗಸಂಪಿಗೆ ತುಪ್ಪವನ್ನು ಜಾಯಿಕಾಯಿ ಪುಡಿಸೇರಿಸಿ ಸೇವಿಸಿದರೆ ಬೇದಿ ನಿಲ್ಲುತ್ತದೆ.
- ಇದರ ತುಪ್ಪದ ದೀಪ ಬಾಳಂತಿ ಕೋಣೆಯಲ್ಲಿ ಬೆಳಗಿಸಿ ದರೆ ವಿಷ ಜಂತು ಭಯವಿಲ್ಲ ಮತ್ತು ಶಿಶು ಬಾಳಂತಿಗೆ ಧನುರ್ವಾತ ಬರುವುದಿಲ್ಲ.
- ವಾತರೋಗಕ್ಕೆ ಹೊರಗಡೆ ಹಚ್ಚಿದರೆ ನೋವು ಶಮನವಾಗುತ್ತದೆ.
- ಹೂವಿನ ಕುಸುಮ ವನ್ನು ತುಪ್ಪ ದಲ್ಲಿ ಹುರಿದು ಅನೇಕ ಗಿಡಮೂಲಿಕೆ ಉಪಯೋಗಿಸಿ ನಾನು ತಯಾರಿಸುವ ಔಷಧಿ ವೀರ್ಯ ವೃದ್ಧಿ ಗೆ ಬರುತ್ತದೆ.
ಸುಮನಾ ಮಳಲಗದ್ದೆ.9980182883.