spot_img
spot_img

ಸಾವಳಗಿಯ ಶ್ರೀ. ಮ. ನಿ. ಪ್ರ. ಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳ ೪೪ ನೇ ಪುಣ್ಯಾರಾಧನೆ

Must Read

- Advertisement -

ಧರ್ಮ ಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ ೧೪ ನೆಯ ಜಗದ್ಗುರುಗಳಾಗಿ ಬಂದ ಶಿವಯೋಗಿ ಸಿದ್ದರಾಮೇಶ್ವರರು ಸಾಹಿತ್ಯ, ಶಿಕ್ಷಣ ಪ್ರೇಮಿಗಳು. ಆಧುನಿಕ ಕೃಷಿಕರಾಗಿ ಭಕ್ತ ಜನ ಹೃದಯ ಸಿಂಹಾಸನ ರೂಢರಾಗಿ, ಮೂಲ ಜಗದ್ಗುರು ಶಿವಲಿಂಗೇಶ್ವರರ ಕೀರ್ತಿ ವಾರ್ತೆಯನ್ನು ಬೆಳಗಿದವರು. ಮೃತ್ಯುಂಜಯ ಶಿವಯೋಗಿಗಳ ಕೃಪಾಶೀರ್ವಾದ ಮತ್ತು ಶಿವಲಿಂಗೇಶ್ವರ ಭಕ್ತರ ಭಾಗ್ಯವಾಗಿ ೧೯೫೩ನೇ ಜನವರಿ ೨೨ ರಂದು ಸಾವಳಗಿಯ ಶ್ರೀ ಪೀಠದ ಜಗದ್ಗುರುಳಾಗಿ ಬಂದವರು.

ಇವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದ ಪೂಜ್ಯರ ೪೪ನೇ ಪುಣ್ಯರಾಧನೆ ಮತ್ತು ಗಣರಾಧನೆ ಸಮಾರಂಭವನ್ನು ದಿನಾಂಕ ೦೫ ಮೇ ೨೦೨೩ ರಂದು ಬೆಳಗಿನಿಂದ ರಾತ್ರಿಯವರೆಗೆ ದಿನಪೂರ್ತಿ ಸರಳ ಸುಂದರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾರುದ್ರಾಭಿಷೇಕ ಬೆಳಗ್ಗೆ ೧೦ ಗಂಟೆಗೆ ಮಹಾಪೂಜೆ ಹಾಗೂ ಬೆಳಗ್ಗೆಯಿಂದ ರಾತ್ರಿವರೆಗೆ ಮಹಾದಾಸೋಹ ಇರುತ್ತದೆ. ಸಂಜೆ ೭ ಗಂಟೆಗೆ, ಶೂನ್ಯ ಸಿಂಹಾಸನಾದೀಶ್ವರ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳವರು ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

- Advertisement -

ಜ್ಞಾನ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ, ಹಿರಿಯ ಪತ್ರಕರ್ತರಾದ ಡಾ.  ಸರೂಜ್ ಕಾಟಕರ್ ಬೆಳಗಾವಿ ಹಾಗೂ ಖ್ಯಾತ ನ್ಯಾಯವಾದಿ ಸಾಹಿತಿ ರವೀಂದ್ರ ತೋಟಿಗೇರ್ ಬೆಳಗಾವಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  

ಆಕಾಶವಾಣಿ ದೂರದರ್ಶನ ಕಲಾವಿದರಾದ ಗದುಗಿನ ಶ್ರೀ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ (ಕಡಣಿ) ಇವರಿಂದ ಕಥಾ ಕೀರ್ತನೆ ಹಾಗೂ ಸುಪ್ರಸಿದ್ಧ ಸಂಗೀತ ಕಲಾವಿದರಾದ ವಿದ್ವಾನ್ ಶಿವಕುಮಾರ ಗವಾಯಿಗಳು ಚಿಕ್ಕಹೆಸರೂರ, ಧಾರವಾಡ, ‘ಗಾನ ಭೂಷಣ’ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗದುಗಿನ ವೀರೇಶ್ವರ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ಎರ್ಪಡಿಸಲಾಗಿದೆ. ಇವರಿಗೆ ವಿಜಯ ದೊಡ್ಡಣ್ಣವರ ಗೋಕಾಕ್ ಇವರು ತಬಲಾಸಾಥ ನೀಡಲಿದ್ದಾರೆ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೋಹಿಣಿ ಬಂಗಾರಿ ಬೆಳಗಾವಿ ಇವರು ನಡೆಸಿಕೊಡಲಿದ್ದಾರೆ. ನಿವೃತ್ತ ಶಿಕ್ಷಕ ಬಾಲಶೇಖರ ಬಂದಿ, ಮೂಡಲಗಿ ಇವರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.

ಶ್ರೀಮದ್ ಜಗದ್ಗುರು ಶಿವಲಿಂಗೇಶ್ವರ ಸಂಸ್ಥಾನ ಮಠದ ಶಾಖಾಮಠಗಳಾದ ಖಾನಾಪುರ, ಸಾವಳಗಿ, ಮುತ್ನಾಳ, ನಂದಗಾವ, ಅವರಗೋಳ, ಗುಡಿಕ್ಯಾತರ, ಕೋಟಬಾಗಿ, ಹಿಡಕಲ್ ಡ್ಯಾಮ್, ಹುಕ್ಕೇರಿ, ಗುಡುಸ, ಖಾನಟ್ಟಿ, ಅವರಾದಿ, ಮೂಡಲಗಿ, ಚಿಕ್ಕೋಡಿ, ಗೋಕಾಕ ಮತ್ತು ನಾಡಿನ ವಿವಿಧಡೆಯ ಭಕ್ತರು ಭಾಗವಹಿಸಿ ವೈವಿಧ್ಯಮಯವಾದ ಸೇವೆಯನ್ನು ಸಲ್ಲಿಸಲಿದ್ದಾರೆ ಎಂದು ಸಾವಳಗಿ ಶಿವಲಿಂಗೇಶ್ವರ ಸಂಸ್ಥಾನ ಮಹಾಪೀಠದಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group