ಮೂಡಲಗಿ -ತಾಲೂಕಿನ ಸರ್ಕಾರಿ ಶಾಸಕರ ಮಾದರಿ ಶಾಲೆ,ಗುರ್ಲಾಪೂರದಲ್ಲಿ “ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಶನ್” ಕಾರ್ಯಕ್ರಮ ಶಿಸ್ತು ಬದ್ದವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು,ಸರ್ವ ಸದಸ್ಯರು, ಮೂಡಲಗಿ ಪುರಸಭೆ ಸದಸ್ಯರು, ಖಾನಟ್ಟಿ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಮುಖಂಡರು, ಶಿಕ್ಷಕರು, ಮಕ್ಕಳು ಅಡುಗೆ ಸಿಬ್ಬಂದಿಯವರು ಭಾರತ ಸರ್ಕಾರ ವಯಸ್ಕ ಶಿಕ್ಷಣ ಸಾಕ್ಷರತಾ ಮಿಶನ್ ಅಡಿಯಲ್ಲಿ ಪ್ರಾರಂಭವಾದ ವಿನೂತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಗಂಡು ಮಕ್ಕಳಿಗೆ ಶರ್ಟ್, ಪ್ಯಾಂಟ್, ಶ್ವೇಟರ್ ಮತ್ತು ಬೆಲ್ಟ್ ಹಾಗೂ ಹೆಣ್ಣು ಮಕ್ಕಳಿಗೆ ಶರ್ಟ, ಸ್ಕರ್ಟ್, ಶ್ವೇಟರ್, ಬೆಲ್ಟ್ ಪ್ರತ್ಯೇಕ ಸಮವಸ್ತ್ರ ಸೌಲಭ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಕೂಡಿಕೊಂಡ ಕೊಡುವ ಯೋಜನೆ ಆಗಿದೆ ಎಂದು ಬಿ.ವಾಯ.ಮೋಮಿನ ತಿಳಿಸಿದರು.
ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಮುಖ್ಯೋಪಾಧ್ಯಾಯರಾದ ಜಿ.ಆರ್.ಪತ್ತಾರ ಮಕ್ಕಳಿಗೆ ಮನವರಿಕೆ ಮಾಡಿದರು.