spot_img
spot_img

ರಾಷ್ಟ್ರೀಯ ತಂತ್ರಜ್ಞಾನ ದಿನ- NATIONAL TECHNOLOGY DAY (MAY 11)

Must Read

spot_img
- Advertisement -

ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.

1999 ರಲ್ಲಿ ಮೇ 11 ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಘೋಷಿಸಿದಾಗ ಭಾರತದ ಜನರು ಅಭಿನಂದನೆ ಸಲ್ಲಿಸಿದರು. ಹಿಂದಿನ ವರ್ಷ ಆ ದಿನದಂದು ಕ್ಷೇತ್ರದಲ್ಲಿ ಅವರ ದೊಡ್ಡ ಸಾಧನೆಗಳನ್ನು ಅನುಸರಿಸಿದರು.

ಮೇ 11, 1998 ರಂದು, ಆಪರೇಷನ್ ಶಕ್ತಿ ಅಡಿಯಲ್ಲಿ ದೇಶವು ಭಾರತೀಯ ಸೇನೆಯ ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಮೂರು ಯಶಸ್ವಿ ಪರಮಾಣು ಪರೀಕ್ಷೆಗಳನ್ನು ನಡೆಸಿತು. ಮೇ 13 ರಂದು ಡಾ. ಎಪಿಜೆ ಅಬ್ದುಲ್ ಕಲಾಂ ನೇತೃತ್ವದಲ್ಲಿ ಎರಡು ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು, ಇದು ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರಗಳ ಎಲೈಟ್ ಕ್ಲಬ್‌ನ ಅಧಿಕೃತ ಸದಸ್ಯರನ್ನಾಗಿ ಮಾಡಿದೆ.ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಾಧಿಸಿದ್ದು ಇಷ್ಟೇ ಅಲ್ಲ. ಅದೇ ದಿನ, ಅವರು ತಮ್ಮ ಮೊದಲ ಸ್ವದೇಶಿ ವಿಮಾನವಾದ ಹಂಸ-3 ಅನ್ನು ಸಹ ಪರೀಕ್ಷಿಸಿದರು ಮತ್ತು ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೇ 11ನ್ನು ದೇಶಕ್ಕೆ ಮಹತ್ವದ ಸಾಧನೆಯ ದಿನವೆಂದು ಘೋಷಿಸಿದರು ಮತ್ತು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಮೊದಲ ಬಾರಿಗೆ ಮೇ 11, 1999 ರಂದು ಆಚರಿಸಲಾಯಿತು.

- Advertisement -

ಒಂದು ಜೀವಜಾತಿಯಿಂದ ಉಪಕರಣಗಳು ಹಾಗೂ ಕುಶಲಕರ್ಮಗಳ ಬಳಕೆ ಮತ್ತು ಜ್ಞಾನಕ್ಕೆ ಸಂಬಂಧಿಸಿರುವ, ಮತ್ತು ಒಂದು ಜೀವಜಾತಿಯ ಪರಿಸರವನ್ನು ನಿಯಂತ್ರಿಸಲು ಹಾಗೂ ಅದಕ್ಕೆ ಹೊಂದಿಕೊಳ್ಳಲು ಜೀವಜಾತಿಯ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆಂಬುದನ್ನು ತಿಳಿಸುವ ಒಂದು ವಿಶಾಲವಾದ ಪರಿಕಲ್ಪನೆಯಾಗಿದೆ. ಆದರೆ, ಒಂದು ನಿಖರವಾದ ವ್ಯಾಖ್ಯಾನ ಸಾಧ್ಯವಿಲ್ಲ; ”

ಭಾರತದ ಬೆಳವಣಿಗೆಗಳಲ್ಲಿ ಮುಖ್ಯವಾದ ಬೆಳವಣಿಗೆ ಎಂದರೆ ತಂತ್ರಜ್ಞಾನದ ಬೆಳವಣಿಗೆ.  ತಂತ್ರಜ್ಞಾನ ಎಂದರೆ ಉಪಕರಣಗಳ ಜ್ಞಾನದ, ತಂತ್ರಗಳ ಯಂತ್ರಗಳ ಸಹಾಯದಿಂದ ಹೊಸ ಸಮಸ್ಯೆಗಳ ಪರಿಹಾರ ಮತು ಮೊದಲೆ ಅಸ್ತಿತ್ವದಲ್ಲಿರುವ ಪರಿಣಾಮಳನ್ನು ಸುಧಾರಿಸಿ ಒಂದು ಗುರಿ ಸಾಧಿಸುವುದು. ತಂತ್ರಜ್ಞಾನದಿಂದ ಇಂದು ಅನೇಕ ಕ್ಷೇತ್ರಗಳಲ್ಲಿ ಕಾಣಬಹುದು. ಉದಹರಣೆಗೆ ಇಂದು ಶಾಲಾ ಕಾಲೇಜುಗಳಲ್ಲಿ ಪಾಠ ಮಾಡುವ ರೀತಿ ಬದಲಾಗಿದೆ.

ತಂತ್ರಜ್ಞಾನದ ಬಳಕೆಯಿಂದ ಮಕ್ಕಳಿಗೆ ಪಾಠ ಕಲಿಯಲು ಸುಲಭವಾಗಿದೆ. ತಂತ್ರಜ್ಞಾನ ಬೋಧನೆ ಮತ್ತು ಕಲಿಕೆ ಎರಡನ್ನು ಬೆಂಬಲಿಸಲು ಬಳಸಲಾಗುತ್ತದೆ. ತರಗತಿಗಳಲ್ಲಿ ಕಂಪ್ಯೂಟರ್ ಜೊತೆ ಡಿಜಿಟಲ್ ಕಲಿಕೆಯನ್ನು ಪರಿಚಯಿಸಲಾಗಿದೆ. ಇಂತಹ ಸೌಲಭ್ಯಗಳು ವಿದ್ಯಾರ್ಥಿಗಳ ಭಾಗವಹಿಸಿಕೆ ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ.

- Advertisement -

ಆನ್ಲೈನ್ ಕಲಿಕೆಯ ತುಂಬಾ ಅವಕಾಶಗಳು ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಇತರ ತಂತ್ರಜ್ಞಾನಗಳ ಬಳಕೆಯಿಂದ ಕಲಿಕೆಯ ಉತ್ಪಾದಕತೆಯನ್ನು ಹೆಚ್ಚಿಸಬಹುದು. ತಂತ್ರಜ್ಞಾನದ ಬಳಕೆಯಿಂದ ಇಂದು ಸಂವಹನ ಅತ್ಯಂತ ಸುಲಭವಾಗಿದೆ. ಮೊಬೈಲ್, ದೂರವಾಣಿಯಂತಹ ಅನನ್ಯ ಸಾಧನಗಳನ್ನು ಪರಿಚಯಿಸಲಾಗಿದೆ.

ಇವುಗಳ ಸಹಾಯದಿಂದ ಜನರು ಎಷ್ಟೂ ದೂರದಲ್ಲಿದ್ದರೂ ಒಬ್ಬರನ್ನೊಬ್ಬರು ಸಂಪರ್ಕ ಮಾಡಲು ಸುಲಭವಾಗಿದೆ, ಫೋಟೋಗಳನ್ನು,, ವೀಡಿಯೊಗಳನ್ನು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳ ಮೂಲಕ ಹಂಚಿಕೊಳ್ಳ ಬಹುದಾಗಿದೆ.

ಚಲನಚಿತ್ರ ಸಂಕೀರ್ಣತೆಯ ಅಭಿವೃದ್ಧಿ ನಿರಂತರ ತಾಂತ್ರಿಕ ವಿಕಸನ ಪ್ರೇರೇಪಣೆಯಿಂದಾಗಿದೆ. ಚಲನಚಿತ್ರ ಇತಿಹಾಸದಲ್ಲಿ ಧ್ವನಿ ರೆಕಾರ್ಡಿಂಗ್ ನಿಂದ ಹಿಡಿದು, ಕ್ಯಾಮೆರಾಗಳವರೆಗೆ, ತಂತ್ರಜ್ಞಾನದ ಕೈವಾಡವಿದೆ. ತಂತ್ರಜ್ಞಾನದ ಬಳಕೆಯಿಂದ ವ್ಯವಸಾಯಕ್ಕೆ ಬಹಳ ಉಪಯೋಗಗಳು ದೊರಕಿವೆ. ತಂತ್ರಜ್ಞಾನ ಕೃಷಿ ಉದ್ಯಮ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದೆ.

ತಂತ್ರಜ್ಞಾನ ಸಮಾಜ ಮತ್ತು ಅದರ ಸುತ್ತಮುತ್ತಲು ಅನೇಕ ರೀತಿಯಲ್ಲಿ ಪ್ರಭಾವ ಬೀರಿದೆ.

ಜೈ ಜವಾನ್
ಜೈ ಕಿಸಾನ್
ಜೈ ವಿಜ್ಞಾನ………..
ತಂತ್ರಜ್ಞಾನ ದಿನದ ಶುಭಾಶಯಗಳು !


ಮಲ್ಲಿಕಾರ್ಜುನ ಚಿಕ್ಕಮಠ
ಧಾರವಾಡ

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group