spot_img
spot_img

ಅತ್ಯಾಚಾರ ಯತ್ನಕ್ಕೆ ಅತ್ಯಾಚಾರದ ಶಿಕ್ಷೆ ಕೊಡಲಾಗದು – ನ್ಯಾಯವಾದಿ ಚೌಕಾಶಿ

Must Read

spot_img
- Advertisement -

ಮೂಡಲಗಿ – ಇತ್ತೀಚೆಗೆ  ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಅತ್ಯಾಚಾರ ಕುರಿತಂತೆ ಹೇಳಿದ ಹೇಳಿಕೆಯೊಂದು ದೇಶಾದ್ಯಂತ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.

ಸ್ತನ ಮುಟ್ಟುವುದು, ಪೈಜಾಮ ಹಿಡಿದು ಎಳೆಯುವುದು ಅತ್ಯಾಚಾರವಲ್ಲ ಎಂಬುದೇ ಅವರ ಮಾತಿನ ಎಳೆ. ಅದರ ಬಗ್ಗೆ ಅನೇಕ ಜನರು ವಿವಿಧ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮಹಿಳಾ ಸಂಘಟನೆಯ ಮುಖ್ಯಸ್ಥೆಯೊಬ್ಬರು ನ್ಯಾಯಮೂರ್ತಿಗಳ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವಿಷಯದ ಬಗ್ಗೆ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ತಮ್ಮ ಅಭಿಪ್ರಾಯ ಹೀಗೆ ವ್ಯಕ್ತಪಡಿಸಿದ್ದಾರೆ

ಬಹಳಷ್ಟು ಜನ ಈ ವಿಷಯದ ಕುರಿತು ಚರ್ಚಿಸುತ್ತಿದ್ದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ಸಂಪೂರ್ಣ ತೀರ್ಪು ಓದದೆ ಒಂದೆರಡು ಸಾಲಿನ ಆಧಾರದಲ್ಲಿ ನಿರ್ಧಾರಕ್ಕೆ ಬರುವುದು ತಪ್ಪು.ನ್ಯಾಯಾಲಯಗಳು ಯಾವುದೆ ಪ್ರಕರಣ ಇತ್ಯರ್ಥವಾಗ ಬೇಕಾದರೆ ಎರಡು ರೀತಿಯ ಪ್ರಶ್ನೆಗಳನ್ನು ಅವಲಂಬಿಸಿರುತ್ತವೆ.

- Advertisement -

1) Question of Fact,
ಘಟನೆ ಅಥವಾ ವಿದ್ಯಮಾನ ಆಧಾರಿತ ಪ್ರಶ್ನೆಗಳು.              2) Question of Law
ಕಾನೂನು ಆಧಾರಿತ ಪ್ರಶ್ನೆಗಳು.

ಅತ್ಯಾಚಾರ ಹಾಗೂ ಅತ್ಯಾಚಾರ ಯತ್ನ ಎರಡು ಬೇರೆ ಬೇರೆಯ ಅಪರಾಧಗಳು. ಸರ್ಕಾರಿ ವಕೀಲರು ಅತ್ಯಾಚಾರ ಎಂದು ವಾದಿಸಿದಾಗ ನ್ಯಾಯಾಲಯ ವಾಸ್ತವಾಂಶಗಳ ಆಧಾರದಲ್ಲಿ ಇದು ಅತ್ಯಾಚಾರ ಅಲ್ಲ ಅತ್ಯಾಚಾರ ಯತ್ನ ಅಂತ ತಿಳಿಸಿದೆ.

ಒಬ್ಬ ವ್ಯಕ್ತಿ ಆರೋಪ ಎಸಗಿದ್ದಾನೊ ಇಲ್ಲವೊ ಎನ್ನುವುದು ವಾಸ್ತವಾಂಶ, ವಿದ್ಯಮಾನ, ಘಟನೆ ಇವುಗಳ ಮೂಲಕ ನಿರ್ಧರಿಸಿದರೆ. ಯಾವ ಅಪರಾಧಕ್ಕೆ ಯಾವ ಶಿಕ್ಷೆ ನೀಡಬೇಕು ಎನ್ನುವುದಕ್ಕೆ ಕಾನೂನು ಉತ್ತರಿಸುತ್ತದೆ.

- Advertisement -

ಮೇಲಿನ ವಿಷಯದಲ್ಲಿ ನ್ಯಾಯಾಲಯದ ಆರೋಪಿ ನಿರಪರಾಧಿ ಅಂತ ಹೇಳಿಲ್ಲ ಬದಲಿಗೆ ಇದು ಅತ್ಯಾಚಾರ ಅಲ್ಲ, ಅತ್ಯಾಚಾರ ಯತ್ನ ಅಥವಾ ಲೈಂಗಿಕ ದೌರ್ಜನ್ಯ ಮಾತ್ರ. ಆಪರಾಧಿಗೆ ಅತ್ಯಾಚಾರ ಯತ್ನಕ್ಕೆ ಇರುವ ಶಿಕ್ಷೆಯನ್ನ ನೀಡ ಬೇಕೆ ಹೊರತು ಅತ್ಯಾಚಾರಕ್ಕೆ ನೀಡಲಾಗುವ ಶಿಕ್ಷೆಯನ್ನಲ್ಲ ಎಂಬ ಅರ್ಥ.

ಉದಾಹರಣೆಗೆ: ಕೊಲೆಯತ್ನಕ್ಕೆ ಹಾಗೂ ಕೊಲೆಗೆ ಬೇರೆ ಬೇರೆಯ ರೀತಿಯ ಶಿಕ್ಷೆಗಳಿವೆ. ಈ ಪ್ರಕರಣ ಕೊಲೆಯತ್ನ ಇದ್ದಂತೆ. ಕೊಲೆಯ ಯತ್ನಕ್ಕೆ ಕೊಲೆಗಾರನಿಗೆ ನೀಡುವ ಶಿಕ್ಷೆಯನ್ನ ನೀಡಲಾಗುವುದಿಲ್ಲ. ಬದಲಿಗೆ ಕೊಲೆ ಯತ್ನದ ಶಿಕ್ಷೆ ನೀಡಲಾಗುತ್ತದೆ.

ಈ ಪ್ರಕರಣ ಕೂಡ ಹಾಗೆ ಅದು ಅತ್ಯಾಚಾರ ಅಲ್ಲ ಅತ್ಯಾಚಾರಕ್ಕೆ ಯತ್ನ, ಹೀಗಾಗಿ ಅತ್ಯಾಚಾರ ಯತ್ನಕ್ಕೆ ನೀಡಲಾಗುವ ಶಿಕ್ಷೆ ನೀಡಲಾಗಿದೆ.

ಸಂಪೂರ್ಣ ತೀರ್ಪು ಓದದೆ ನಿರ್ಧಾರಕ್ಕೆ ಬರುವುದು ತಪ್ಪು.

ಕೃಷಿಕ ಮಲ್ಲಿಕಾರ್ಜುನ ಚೌಕಶಿ, ವಕೀಲರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಡೈರಿ ಹಾಲಿನ ಬಳಕೆ ಮಾನವರಿಗೆ ಹೇಳಿಸಿದ್ದಲ್ಲ

ಅತಿಯಾದರೆ ಅಮೃತವೂ ವಿಷ ಹಾಲು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಬಹುತೇಕರಿಗೆ ಹಾಲು ಅಂದರೆ ಪ್ರಾಣ. ನಮ್ಮ ದೈನೇಸಿ ಬದುಕಿನಲ್ಲಿ ಆಹಾರದ ಭಾಗವಾಗಿ ಹಾಲು ಒಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group