ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಮೃಣಾಲ್ ಹೆಬ್ಬಾಳ್ಕರ ಅವರ ಪ್ರಚಾರ ಜೋರಾಗಿ ನಡೆಯುತ್ತಿದೆ.ಆದರೆ ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಿದ್ದು ಏಕೆ? ಎಂದು ಅವರು ಕೇಳುತ್ತಿದ್ದಾರೆ.
ಶಿವಮೊಗ್ಗದಿಂದ ಜನರನ್ನು ತಂದು ಬೆಳಗಾವಿಯಲ್ಲಿ ಪ್ರಚಾರ ಮಾಡಿಸಿದರೆ ಹೇಗೆ ? ಬೇರೆ ಜಿಲ್ಲೆಯಿಂದ ಬಂದ ನಾಯಕರ ಮಾತು ನಾವು ಕೇಳಬೇಕಾ ? ಬೆಳಗಾವಿ ಜಿಲ್ಲೆಯ ನಾಯಕರು ಅಸಮರ್ಥರಾ ಎಂದು ಅನಿಸುತ್ತದೆ ಎಂದು ಅವರು ನುಡಿದು, ಸ್ಥಳೀಯರು ಸ್ವಾಭಿಮಾನಿ ಕಾರ್ಯಕರ್ತರು ಇದ್ದಾರೆ. ನೀವು ಭದ್ರಾವತಿಯಿಂದ ಕರೆದುಕೊಂಡು ಬಂದರೆ ಇಲ್ಲಿಯ ಕಾರ್ಯಕರ್ತರಿಗೆ ಅಸಮಾದಾನ ಆಗುವುದಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ ಅಕ್ಕನವರು ಇತ್ತ ಗಮನ ಹರಿಸಿರಿ. ಬೆಳಗಾವಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ಗುರು ಗಂಗಣ್ಣವರ ಹೇಳಿದ್ದಾರೆ.
ಆದರೆ ಇಂಥ ಪರಿಸ್ಥಿತಿ ಪಕ್ಷದ ಗೆಲುವಿಗೆ ಮುಳುವಾಗಬಹುದು. ಅಷ್ಟಕ್ಕೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾರದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ ? ಯಾಕೆ ಅಂಥ ಪರಿಸ್ಥಿತಿ ಬಂದಿತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಸತೀಶ ಜಾರಕಿಹೊಳಿಯವರೇ ಇದ್ದಾರೆ. ಅವರು ಕೇವಲ ತಮ್ಮ ಪುತ್ರಿಯನ್ನು ಗೆಲ್ಲಿಸುವತ್ತ ಗಮನಹರಿಸಿದ್ದಾರೆಯೆ ? ಎಂಬ ಪ್ರಶ್ನೆ ಜಿಲ್ಲೆಯಾದ್ಯಂತ ಓಡಾಡುತ್ತಿದೆ. ಆದರೆ ಪ್ರಾಮಾಣಿಕ ಕಾರ್ಯಕರ್ತರ ಅಳಲನ್ನು ಯಾರು ಕೇಳಬೇಕು ? ಇವರು ಬರೀ ದುಡಿಯುವುದಕ್ಕೆ ಅಷ್ಟೇ ಇದ್ದಾರಾ ? ಎಂಬ ಪ್ರಶ್ನೆಯನ್ನು ಸರ್ವ ಕಾರ್ಯಕರ್ತರ ಪ್ರತಿನಿಧಿಯಾಗಿ ಗುರು ಗಂಗಣ್ಣವರ ಕೇಳಿದ್ದಾರೆ ಎನ್ನಬಹುದು. ಈ ಬಗ್ಗೆ ಹೈಕಮಾಂಡ್ ಯಾವ ನಿರ್ಧಾರ ತಾಳುತ್ತದೆಯೋ ಕಾದು ನೋಡಬೇಕು.
ವರದಿ : ಉಮೇಶ ಬೆಳಕೂಡ, ಮೂಡಲಗಿ