spot_img
spot_img

ಪ್ರಿಯಾಂಕ ಖರ್ಗೆಗೆ ನೋಟಿಸ್; ಪ್ರತಿಕ್ರಿಯೆಗೆ ಮಲ್ಲಿಕಾರ್ಜುನ ಖರ್ಗೆ ನಕಾರ

Must Read

ಬೀದರ – ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಬಗ್ಗೆ ಹಾಗೂ ಪ್ರಿಯಾಂಕ ಖರ್ಗೆಯವರಿಗೆ ಸಿಐಡಿ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು.

ಜಿಲ್ಲೆಯ ಭಾಲ್ಕಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಸದ್ಯ ಸಿಐಡಿ ಹಗರಣದ ತನಿಖೆ ಮಾಡುತ್ತಿದೆ‌. ಈ ಬಗ್ಗೆ ನಾನು ಮಾತಮಾಡಿ ತನಿಖೆ ಮೇಲೆ ಪರಿಣಾಮ ಬೀರುವಂಥ ಕೆಲಸ ಮಾಡುವುದಿಲ್ಲ. ಅವರು ಪ್ರಿಯಾಂಕ ಖರ್ಗೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಿಯಾಂಕ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ನಮ್ಮ ಪಕ್ಷವೂ ಉತ್ತರ ಕೊಟ್ಟಿದೆ. ಇನ್ನೂ ಉತ್ತರ ಕೊಡುತ್ತಿದ್ದಾರೆ ಎಂದರು.

ಅಜಾನ್ ವರ್ಸಸ್ ಸುಪ್ರಭಾತ ದಂಗಲ್ ವಿಚಾರದ ಬಗ್ಗೆ ಮಾತನಾಡಿದ ಅವರು, 2023 ಸಾರ್ವತ್ರಿಕ ಚುನಾವಣೆ ಹಾಗೂ 2024 ರ ಲೋಕಸಭಾ ಚುನಾವಣೆಯ ದೃಷಿಯಿಂದ ಈ ಲೌಡ್ ಸ್ಪೀಕರ್ ದಂಗಲ್ ನಡೆಯುತ್ತಿದೆ. ಇಲ್ಲಿಯವರೆಗೆ ಇವರು ಎಲ್ಲಿಗೆ ಹೋಗಿದ್ದರು ಎಂದು ಕೇಳಿದರು.

ಹನುಮಾನ್ ಚಾಲೀಸಾ ಆಗಲಿ, ರಾಮ ಭಕ್ತರೆ ಆಗಲಿ ಎಲ್ಲಿಗೆ ಹೋಗಿದ್ದರು. ಈ ವಿಷಯದಲ್ಲಿ ನಾವು ಶೋಷಿತರ ಪರವಾಗಿ ನಿಲ್ಲುತ್ತೇವೆ.ಯಾರಿಗೆ ಅನ್ಯಾಯವಾಗುತ್ತೊ ಅವರ ಪರ ನಿಲ್ಲುತ್ತೇವೆ.ಮುಸ್ಲಿಂರಿಗೆ ಅನ್ಯಾಯವಾದರೆ ನಾವು ಮಾತನಾಡೋದು ತಪ್ಪಾ ? ದಲಿತರು, ಲಿಂಗಾಯತರು, ರೈತರು, ಹಿಂದುಳಿದ ಜನಾಂಗದ ಮೇಲೆ ಅನ್ಯಾಯವಾದರೆ ನಾವು ಮಾತನಾಡೋದು ತಪ್ಪಾ ಎಂದು ಪ್ರಶ್ನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!