spot_img
spot_img

ನ.20 ರಂದು ‘ನೃತ್ಯಧಾರ’ ಸಾಂಸ್ಕೃತಿಕ ಕಾರ್ಯಕ್ರಮ

Must Read

- Advertisement -

ಬೆಂಗಳೂರು – ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಇದೇ ಭಾನುವಾರ ನ.20 ರಂದು  ಬೆಳಿಗ್ಗೆ 10.00ಗಂಟೆಗೆ ನೃತ್ಯಧಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರನ ಸೇವಾಸದನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

 ಕಾರ್ಯಕ್ರಮಕ್ಕೆ ಮುಖ ಅತಿಥಿಗಳಾಗಿ ಸಂಸ್ಕೃತಿ ಚಿಂತಕ- ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಖ್ಯಾತ ಮಕ್ಕಳ ಸಾಹಿತಿ – ಹಿಲ್ ರಾಕ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಿದೇರ್ಶಕ ಬಾಲ ಸುಬ್ರಹ್ಮಣ್ಯ (ಮತ್ತೂರು ಸುಬ್ಬಣ್ಣ) ಭಾಗವಹಿಸಿಲಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ನ ನಿರ್ದೇಶಕಿ ವಿದುಷಿ ಸೀತಾ ನಂದಕುಮಾರ್‍ ರವರಲ್ಲಿ ತರಬೇತುಗೊಂಡ ಯುವ ವಿದ್ಯಾರ್ಥಿ ಸಮೂಹವು ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸುವರು. 

ಗಾಯನದಲ್ಲಿ ವಿದ್ವಾನ್ ವಿನಯ್ ಮಾನ್ಯ , ನಟುವಾಂಗದಲ್ಲಿ ವಿದುಷಿ ಸೀತಾ ನಂದಕುಮಾರ್ , ಮೃದಂಗಂನಲ್ಲಿ ವಿದ್ವಾನ್ ಕಾರ್ತಿಕ್ ವೈಧಾರ್ತಿ, ಕೊಳಲು: ವಿದ್ವಾನ್ ದೀಪಕ್ ಹೆಬ್ಬಾರ್ , ರಿದಂಪ್ಯಾಡ್‍ನಲ್ಲಿ ಮಿಥುನ್ ಶಕ್ತಿ ಸಹಕರಿಸಲಿದ್ದಾರೆ. 

ವಿದುಷಿ ಸೀತಾ ನಂದಕುಮಾರ್ ಕಿರುಪರಿಚಯ:

ಸೀತಾ ನಂದಕುಮಾರ್ ಸಾಂಸ್ಕೃತಿಕ ಪರಿಸರದಲ್ಲಿ ಬೆಳದು ಬಂದ ಬಹುಮುಖ ಪ್ರತಿಭಾವಂತೆ, ಕಿರಿಯ ವಯಸಿನ್ನಲ್ಲೆ ಲಂಡನ್ ಭಾರತೀಯ ವಿದ್ಯಾ ಭವನದಲ್ಲಿ ಗುರು ಪ್ರಕಾಶ್ ಯಡಗುಡ್ಡೆರಿಂದ ನೃತ್ಯ ತರಬೇತಿ, ಲಂಡನ್‍ನ ಮೌಂಟ್ ಬ್ಯಾಟೆನ್ ಹಾಲ್‍ನಲ್ಲಿ ಭರತನಾಟ್ಯ ರಂಗಪ್ರವೇಶ ನಿರ್ವಹಿಸಿದ ಹೆಗ್ಗಳಿಕೆ , ಪ್ರಖ್ಯಾತ ನೃತ್ಯ ಗುರುಗಳಾದ ವಿ.ಚಿತ್ರಾ ವಿಶ್ವೇಶರನ್ ,ಡಾ.ಸರಸ್ವತಿ ಸುಂದರೇಷನ್ , ವಿಜಯ ಮಾರ್ತಾಂಡ ರವರುಗಳಲ್ಲಿ ನೃತ್ಯಾಭ್ಯಾಸ ಮಾಡಿರುತ್ತಾರೆ , ಚೆನ್ನೈ ನಲ್ಲಿ ಹಿರಿಯ ಗಾಯಕ ಡಾ. ಎಂ. ಬಾಲಮುರಳಿಕೃಷ್ಣ ರವರಿಂದ ‘ಯುವ ಕಲಾ ವಿಪಂಚೀ’ ಪುರಸ್ಕೃತರು. ಪ್ರಸ್ತುತ ಡಾ.ಶೋಭಾ ಶಶಿಕುಮಾರ್ ಮಾರ್ಗದರ್ಶನದಲ್ಲಿ ನಾಟ್ಯಶಾಸ್ತ್ರ ಮತ್ತು ಕರಣಗಳನ್ನು ಅಧ್ಯಯನ ಮಾಡುತ್ತ , 2009ರಲ್ಲಿ ಸುಧಾಮೂರ್ತಿರವರಿಂದ ಶುಭಾರಂಭಗೊಂಡ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ನ ಮೂಲಕ ಅನೇಕ ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತಿದ್ದಾರೆ.

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group