ಕವನ: ಓ ಕಲ್ಯಾಣಿಯೇ

0
461

ಓ ಕಲ್ಯಾಣಿಯೇ

ಓ ಕಲ್ಯಾಣಿಯೇ..
ಓ ಪುಷ್ಕರಣಿಯೇ…
ಧನ್ವಂತರಿಯ ಕ್ಷೇತ್ರದಲಿ
ಶ್ರೀ ವೈದ್ಯನಾಥನ ಬಳಿಯಲಿ

ಪಾಂಡವ ಸುತ ಭೀಮಸೇನನ ಗದೆಯ ಸ್ಪರ್ಶ ತಾಕಲು ಚಿಮ್ಮಿ ಭುವಿಯಿಂದ ಹೊರಬಂದ ಸಕಲ ರೋಗ ನಿವಾರಕ ಜೀವ ಸಂಜೀವಿನಿ.

ಪುರಾತನ ಕಾಲದೊಳು ಹೊಮ್ಮಿದ ಸೆಲೆ ಭವಿಷತ್ ಕಾಲದೊಳು ರೋಗ ನಿರೋಧಕ ಶಕ್ತಿಯೊಳು ಪರಿಹರಿಸುತಲಿ
ನಂಬಿ ಬರುವ ಭಕ್ತರ ಜೀವಸೆಲೆಯಾಗಿಹುದು

ಇರುವುದು ನಿನ್ನೊಳು ಅಮೃತದ ದಿವ್ಯಔಷಧ ಶಕ್ತಿ ಹದಿನೆಂಟು ಬಗೆಯ ವೈದ್ಯ ಲೋಕದ ರೋಗ ನಿವಾರಕ ಶಕ್ತಿ.ನಂಬಿ ಬರುವ ಭಕ್ತರು ಪರಿಹಾರ ಕಾಣುತಲಿ ನಿನ್ನಯ ಶಕ್ತಿ.

ನಾಡಿನೆಲ್ಲೆಡೆ ಪಸರಿಸಿಹುದು ಧನ್ವಂತರಿ ಕ್ಷೇತ್ರದ ಖ್ಯಾತ
ಸಕಲ ಸದ್ಬಕ್ತ ಜನ ಆಗಮಿಸುತಿಹುದು ಜೀವಸೆಲೆಯ ಶಕ್ತಿಗುಣದ ಪವಾಡ ಸದೃಶ ಶಕ್ತಿ

ಭಕ್ತರ ಪಾಲಿಗೆ ನೀನು ದೇವತೆಯೇ ಪರಿಹರಿಸಿಕೊಳ್ಳುತಿಹರು ಪವಿತ್ರ ಜಲವ ಸೇವಿಸುತಲಿ ರೋಗ ರುಜಿನಗಳನು.ಬರೀ ಮಾನವಗೆ ಮಾತ್ರವಲ್ಲದೆ ಸಕಲ ಜಾನುವಾರುಗಳಿಗೆ ಪವಿತ್ರ ತೀರ್ಥದ ಪಾವಿತ್ರ್ಯ

ವಾಸಿಯಾಗುವುದು ತೀರ್ಥವ ಕುಡಿದು ಜನರ ಜಾನುವಾರುಗಳಿಗೆ ಸಕಲ ರೋಗಬಾಧೆಯು
ಅರೋಗ್ಯ ಒಂದಿದ್ದರೆ ಏನನ್ನೂ ಸಂಪಾದಿಸಬಹುದು ಎಂದು ಹೇಳಿಕೊಟ್ಟೆ ನೀನು ನಿನ್ನ ಪಾವಿತ್ರ್ಯವ

ಸಕಲ ಜನಕೆ ರೋಗ ಪರಿಹರಿಪ ಭಕ್ತ ಜನರ ಪಾಲಿನ ದೇವತೆ ನೀನು. ಭಕ್ತಿ ಭಾವದಿ ನೆರೆದವರ
ಪಾಲಿನ ಧನ್ವಂತರಿ ಯಾಗಿ
ಕೊಕ್ಕಡ ಕ್ಷೇತ್ರದಲಿ ನೆಲೆ ನಿಂತಿಹ
ಪವಿತ್ರ ಜಲತತ್ವ ಮಾತೆ
ಧನ್ಯಳಾದೆ ನಾನು ಧನ್ಯಳಾದೆ


ಬಬಿತಾ. ಆರ್. ಕೊಲ್ಲಾಜೆ
ಕೊಕ್ಕಡ-574198
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ