spot_img
spot_img

ರೈತರ ಹೋರಾಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ

Must Read

- Advertisement -

ಸಿಂದಗಿ: ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ಮತ್ತು ಬಳಗಾನೂರ ಏತ ನೀರಾವರಿ ಯೋಜನೆ ಕೈಗೊಂಡು ರೈತರ ನೀರಿನ ಬವಣೆ ನೀಗಿಸುವಂತೆ ಆಗ್ರಹಿಸಿ ಕ್ಷೇತ್ರದ ತಾಂಬಾ ಗ್ರಾಮದಲ್ಲಿ ಕಳೆದ 48 ದಿನಗಳಿಂದ ರೈತರು ನಡೆಸುತ್ತಿರುವ ಅರೆಬೆತ್ತಲೆ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿರಾಗಲಿ, ನೀರಾವರಿ ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡಿ ವಿವರಣೆ ನೀಡಬಹುದಿತ್ತು ಆದರೆ ಈ ಹೋರಾಟದ ಕಡೆ ನಿಗಾ ವಹಿಸದಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸ್ವ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಭಾಗದ ಚಟ್ಟರಕಿ, ಹಚ್ಯಾಳ, ಕೆಂಗಿನಾಳ, ತಾಂಬಾ, ತಡವಲಗಾ, ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ಗುತ್ತಿ ಬಸವಣ್ಣಾ ಕಾಲುವೆಯಿಂದ ಕಳೆದ 4 ತಿಂಗಳಿಂದ 8 ಮೋಟಾರ ಪಂಪಸೆಟ್ಟು ಕೆಟ್ಟು ಹೋಗಿದ್ದರಿಂದ ನೀರಿಲ್ಲದೇ ರೈತರು ಬೆಳೆದ ಸುಮಾರು 3ರಿಂದ 4 ಕೋಟಿ ಬೆಳೆಗಳು ಹಾಳಾಗಿದ್ದು ಇದಕ್ಕೆ ಯಾರು ಹೊಣೆ ಹೊರುತ್ತಾರೆ ಎನ್ನುವುದು ರೈತರಿಗೆ ಯಕ್ಷ ಪ್ರಶ್ನೆಯಾಗಿದೆ ಇದರ ಬಗ್ಗೆ ಕಾಂಗ್ರೆಸ್ ಪಕ್ಷ ಹಲವಾರು ಬಾರಿ ಮನವಿ ಮಾಡಿಕೊಂಡಿದೆ ಆದರೆ ಶಾಸಕ ಭೂಸನೂರ ಅವರು ಕಳೆದ 4 ತಿಂಗಳ ಹಿಂದೆ ಹೊಸ 8 ಮೋಟಾರ ಖರೀದಿಗೆ ಹಣ ಮಂಜೂರಾಗಿದೆ ಟೆಂಡರ ಪ್ರಕ್ರಿಯೆಯಲ್ಲಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.

ಹೋರಾಟ ಸೂಕ್ತ:

ಗುತ್ತಿ ಬಸವಣ್ಣ ಏತ ನೀರಾವರಿಯ 1 ಕಿ.ಮೀ ನಿಂದ 145 ಕಿ ಮೀ. ವರೆಗೆ ಇರುವ ಹಳ್ಳಿಯ ಜಮೀನುಗಳಿಗೆ ಸರಿಯಾದ ನೀರು ಹರಿದು ಬರುತ್ತಿಲ್ಲ ಅದಕ್ಕೆ ಸುಮಾರು 13೦೦ ಎಕರೆ ಸ್ಥಳಾವಕಾಶವಿರುವ ಬಳಗಾನೂರ ಕರೆಯಿಂದ ಪೈಪಲೈನ್ ಮೂಲಕ ಶಾಶ್ವತ ನೀರು ಕಾಣ ಬಹುದು ಆ ಕಾರಣಕ್ಕೆ ಬಳಗಾನೂರ ಏತ ನೀರಾವರಿ ಯೋಜನೆ ಸೂಕ್ತವಾದ ಬೇಡಿಕೆಯಾಗಿದೆ ಹೊಸ ಯೋಜನೆ ಮಂಜೂರಾತಿ ನೀಡಿದರೆ ಸರಕಾರಕ್ಕೆ ಯಾವುದೇ ಹೊರೆ ಬೀಳದು ಎಂದರು.

- Advertisement -

ಉಡಾಫೆ ಉತ್ತರ; ಕಳೆದ 48 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಭೇಟಿ ನೀಡಿದ ಶಾಸಕ ರಮೇಶ ಭೂಸನೂರ ಅವರು ನೀವು ನಿಂಬೆ, ದ್ರಾಕ್ಷಿ, ಕಬ್ಬು ಬೆಳೆಯುತ್ತಿದ್ದೀರಿ ನಾವೇನು ನಿಮಗೆ ಇದೇ ಬೆಳೆ ಬೆಳೆಯಬೇಕು ಎಂದು ಹೇಳಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದು ಇವರಿಗೆ ರೈತರ ಮೇಲಿನ ಕಾಳಜಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಮಾತಿಗೆ ತಪ್ಪಿದ ಸರಕಾರ:

ಕಳೆದ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್‍ಟಿ ಪ್ರಮಾಣ ಪತ್ರ 8 ದಿನಗಳಲ್ಲಿ ನೀಡುತ್ತೇವೆ ಮತ್ತು ತೋಟಗಾರಿಕೆ ವಿವಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿ ಮತ ಗಿಟ್ಟಿಸಿಕೊಂಡು ಯಾವದೋ ಒಂದು ಎಸ್ ಟಿ ಪ್ರಮಾಣ ಪತ್ರ ತೋರಿಸಿ ಜನರಲ್ಲಿ ಮಂಕು ಬೂದಿ ಎರಚಿ ಅನ್ಯಾಯ ಮಾಡಿದ್ದು ಶಾಸಕ ರಮೇಶ ಭೂಸನೂರ ಅವರು ಕೂಡಾ ಮುಖ್ಯಮಂತ್ರಿಗಳನ್ನು ಕರೆಯಿಸಿ 25 ಜನರಿಗೆ ಸ್ಥಳದಲ್ಲಿಯೇ ಎಸ್‍ಟಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಹಲವಾರು ಬಾರಿ ಪತ್ರಿಕಾ ಹೇಳಿಕೆ ಕೊಟ್ಟು 2 ತಿಂಗಳಾದರು ಯಾವುದೇ ಪ್ರಯೋಜನೆ ಕಂಡಿಲ್ಲ. ಅಲ್ಲದೆ ಆಲಮೇಲ ತೋಟಗಾರಿಕೆ ವಿವಿಯ ಬಗ್ಗೆ ಸದನದಲ್ಲಿ ಒಂದು ಚಕಾರೆ ಶಬ್ದ ಎತ್ತದೇ ವಿನಾಕಾರಣ ಸುಳ್ಳು ಭರವಸೆ ನೀಡಿ ಸಾಗ ಹಾಕುವುದನ್ನು ಬಿಟ್ಟು ಸರಕಾರ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಕಾಮಗಾರಿ ನೆನೆಗುದಿಗೆ ಶಾಸಕರೇ ಕಾರಣ:

ಕಳೇದ 2019-20ನೇ ಸಾಲಿನ ಆಯವ್ಯಯದಲ್ಲಿ ದಿ.ಎಂ.ಸಿ.ಮನಗೂಳಿ ಅವರು ಕಡಣಿ ಬ್ರಿಡ್ಜ್ ಕಾಮಗಾರಿಗೆ ರೂ 33 ಕೋಟಿ ಮಂಜೂರು ಪಡೆದುಕೊಂಡಿದ್ದಾರೆ ಆದರೆ ಇನ್ನೂವರೆಗೆ ಟೆಂಡರ ಕರೆಯದೆ ವಿಳಂಬ ನೀತಿ ಅನುಸರಿಸಿದ್ದಾರೆ. ಅಲ್ಲದೆ ಆಲಮೇಲ ತಾಲೂಕಿಗೆ ನೂತ ಕಛೇರಿ ಪ್ರಾರಂಭವಾಗಿಲ್ಲ ಈ ವಿಳಂಬಕ್ಕೆ ಶಾಸಕ ರಮೇಶ ಭೂಸನೂರ ಅವರೇ ನೆರ ಹೊಣೆ ಅಲ್ಲದೆ ಅತೀವೃಷ್ಟಿ ಸಂದರ್ಭದಲ್ಲಿ ರಸ್ತೆ, ಮತ್ತು ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ದುರಸ್ತಿಗೆ ರೂ 3 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅದಕ್ಕೆ ಜಿಲ್ಲಾಧಿಕಾರಿಗಳು 88 ಕಾಮಗಾರಿಗಳು ಆಯ್ಕೆ ಮಾಡಿದ್ದು ಅವು ಒಂದು ಕಾಮಗಾರಿಯಾಗದೇ ಹಣ ಎತ್ತಿ ಹಾಕಿದ್ದಾರೆ ಎಂದು ಅಶೋಕ ಮನಗೂಳಿ ಆರೋಪಿಸಿದರು.

- Advertisement -

ಸುಳ್ಳು ಭರವಸೆ:

ಪಟ್ಟಣದಲ್ಲಿ ನಿರ್ಮಾಣಗೊಂಡ ಡಾ. ಅಂಬೇಡ್ಕರ ಭವನಕ್ಕೆ ಶಾಸಕ ರಮೇಶ ಭೂಸನುರ ಅವರು ರೂ 2 ಕೋಟಿ ಅನುದಾನ ನೀಡಿದ್ದೇನೆ ಎಂದು ದಲಿತರಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು ಆದರೆ ನಿಜವಾಗಲು 2015ರಲ್ಲಿ ಶಾಸಕರಾದ ಸಂದರ್ಭದಲ್ಲಿ ರೂ. 50 ಲಕ್ಷ ಅನುದಾನ ನೀಡಿದ್ದು ಸತ್ಯ ಅದರ ಮುಂದಿನ ಭಾಗವಾಗಿ ಎಂ.ಸಿ.ಮನಗೂಳಿ ಅವರು 4-12-2020ರಲ್ಲಿ 1 ಕೋಟಿ ಅನುದಾನ ನೀಡಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಬಾಬು ಜಗಜೀವನರಾಮರ ಭವನ ನಿರ್ಮಾಣವಾಗಿದೆ ಎಂದು ಸುಳ್ಳು ಭರವಸೆ ನೀಡುತ್ತಿರುವುದು ಸತ್ಯಕ್ಕೆ ಸುಳ್ಳನ್ನು ನಂಬುವ ಹಾಗೆ ನಟನೆ ಮಾಡುತ್ತಿದ್ದಾರೆ ಎಂದು ರಾಜಶೇಖರ ಕೂಚಬಾಳ ಸ್ಪಷ್ಟ ಪಡಿಸಿದರು.

ರಾಜೀನಾಮೆಗೆ ಆಗ್ರಹ:

ಕಲಬುರ್ಗಿ ಲೋಕ ಸಭಾ, ಹುಮನಾಬಾದ, ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿ ಗೆಲವು ಪಡೆದ ಶಾಸಕ ರಮೇಶ ಭೂಸನೂರ ಅವರು ಎಸ್ಟಿ ಪ್ರಮಾಣಪತ್ರ ಒದಗಿಸಿಕೊಡುವಲ್ಲಿ ವಿಫಲರಾಗಿದ್ದು ಇದರ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂತೋಷ ಹರನಾಳ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಇಕ್ಬಾಲ ತಲಕಾರಿ, ಮಂಜುನಾಥ ಬಿಜಾಪುರ, ಸುರೇಶ ಪೂಜಾರಿ, ಪರಸುರಾಮ ಕಾಂಬಳೆ, ಎಂ.ಎ.ಖತೀಬ, ಅಮೀತ ರಾಠೋಡ, ನೂರಹಮ್ಮದ ಅತ್ತಾರ, ಭೀಮನಗೌಡ ಬಿರಾದಾರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group