- Advertisement -
ಬಳಲಲಿಲ್ಲ ಭಾವವು
ನಿನ್ನ ಸ್ನೇಹಕೆ
ಪ್ರೀತಿ ಒಲುಮೆಗೆ
ಬರೆದೆ ನೂರು
ಕವನ ಕಾವ್ಯ
ಬರೆದು ಬರೆದು
ಕೈ ಬಳಲಿತು
ಬಳಲಲಿಲ್ಲ ಭಾವವು
ನಗೆಯ ಹೊತ್ತು
ಕಂಡ ಕನಸು
ನಿತ್ಯ ನಡೆದೆನು
ಮೈಲಿ ದೂರ
ನಡೆದು ನಡೆದು
ಕಾಲು ಸವೆದವು
ಸವೆಯಲಿಲ್ಲ ಪಯಣವು
- Advertisement -
ಹಲವು ಬಯಕೆ
ಚಿಗುರೊಡೆದವು
ಮರದ ಬಳ್ಳಿಯ
ಮಧುರ ಗಾನವು
ಹಾಡಿ ಹಾಡಿ
ಧ್ವನಿಯು ಸೋತಿತು
ಸೋಲಲಿಲ್ಲ ಪಕ್ಷಿಯು
—————————————-
ಡಾ. ಶಶಿಕಾಂತ ಪಟ್ಟಣ ರಾಮದುರ್ಗ