ಕವನ : ಶುಭೋದಯ

0
131

ಶುಭೋದಯ

ಚಂದನವನದ
ಶುಭೋದಯದಲಿ
ಮೂಡಿಬಂದಿರಿ ನೀವು
ಅಗಾಧ ವ್ಯಕ್ತಿತ್ವದ
ಮೇರುಪರ್ವತದ ನಿಲುವಿನಲಿ
ವಚನದಾರ್ಶನಿಕರಾಗಿ
ಎಲ್ಲರ ಮನ ಮುಟ್ಟಿದಿರಿ
ಇಂದು

ತಿಳಿಹೇಳಿದಿರಿ ಔಷಧಿ
ಆರೋಗ್ಯ ಕೃಷಿಯ ಕುರಿತು
ಮನನಮಾಡಿಸಿದಿರಿ
ವಚನಸಾರದ ಒಳಾರ್ಥಗಳ
ಹೆಮ್ಮೆಯಿಂದ ಹಂಚಿಕೊಂಡಿರಿ
ಅಕ್ಕನ ಅರಿವಿನ ಉಪನ್ಯಾಸಗಳ
ಅದಕ್ಕಾಗಿ ದುಡಿವವರ ಹೆಸರುಗಳ

ಕವಿಯಾಗಿ ಕುವೆಂಪು ಅವರ
ನೆನಪಿಸುತ್ತಾ
ನಿಸರ್ಗಪ್ರೇಮಿಯಾಗಿ
ಪ್ರಾಣಿ -ಪಕ್ಷಿ ಸಂಕುಲವನ್ನು
ಪ್ರೀತಿಸುವುದ ಅರುಹಿದಿರಿ

ಭಾವುಕರಾದಿರಿ
ಅವ್ವನ ಮಾತೃ ಹೃದಯವನ್ನು
ತಂದೆಯ ಕಳಕಳಿಯ
ನೆನೆದು
ಅಭಿಮಾನದಿಂದ ಹೇಳಿದಿರಿ
ಧರ್ಮಪತ್ನಿಯ
ಸಹಕಾರ ಮನೋಭಾವವ

ಮೂಡಿಬಂದಿರಿ
ಶುಭೋದಯದಲಿ ಇಂದು
ನಮ್ಮೆಲ್ಲರ ಹೆಮ್ಮೆಯ
ಮಾರ್ಗದರ್ಶಕರಾಗಿ
ಬುದ್ಧ -ಬಸವ – ಅಂಬೇಡ್ಕರರ
ಶರಣತತ್ವದ ನಿಜವಾದ ಹರಿಕಾರರಾಗಿ

ಸುಧಾ ಪಾಟೀಲ
ಬೆಳಗಾವಿ