ಕವನ : ಓ ಬಾಪು

0
578

ಓ ಬಾಪು

ಜಗದ ಬೆಳಕೇ
ಸದ್ದಿಲ್ಲದಂತೆ ಸರಿದು
ಸರಹದ್ದಿಗೂ ಮೀರಿ
ದಿನಕರ ಮಬ್ಬಿಗೆ ಸರಿಸಿ
ಕೊನೆಯ ಉಸಿರೆಳೆದಿದೆ.

ಮಹಾತ್ಮನೆಂಬ ವ್ಯಕ್ತಿತ್ವ
ಸತ್ಯ ಪಥದ ಸಾಕಾರ ಮೂರ್ತಿ
ವ್ಯತಿರಿಕ್ತದಿ ನಂದಿದೆ
ಪರಿತ್ಯಾಗಿಯಾಗಿ ನಡೆದು
ಕರುಣೆ
ಹೇಳ ಹೆಸರಿಲ್ಲದಂತಾಗಿದೆ.

ಭಾರತದ ದಿವ್ಯ ಜ್ಯೋತಿ
ಸ್ವಾತಂತ್ರ್ಯದ ಹರಿಕಾರ
ಚಳವಳಿಯ ನೇತಾರ
ನಿನಗೆ ಹತ್ಯೆಯ ಬಳುವಳಿ
ಏಕಿಂತಹ ಘೋರ.

ವಿಶ್ವ ಶಾಂತಿಗೆ
ರಕ್ತದೋಕುಳಿ ಹರಿಸಿ
ಬೆರಗು ಮೂಡಿಸಿದಾತನಿಗೆ
ಚಿರನಿದ್ರೆಯ ಬಾಗಿನವೇ
ಕಳವಳಕಾರಿ ಸುದ್ದಿಯ ನೇಮ.

ಓ ಬಾಪು
ನಿನಗಾರು ಸರಿಸಾಟಿ
ಉಪವಾಸದ ನಡಿಗೆ
ಸರಳ ಸುವಿಚಾರದ ವ್ಯಕ್ತಿಗೆ
ದುರುಳತನದಿ ಹರಿತವೇ.

ಮತ್ತೊಮ್ಮೆ ಬಂದು ಬಿಡು
ಮತ್ತಿನ ಜನಕೆ ಪಾಠ ಕಲಿಸಿ
ಮುತ್ತಿನ ಮಾತನು ತಿಳಿಸಿ
ಬೇಜವಾಬ್ದಾರಿ ತನಕೆ ನೀರಿಳಿಸಿ
ಭಾರತದ ಭವ್ಯತೆಗೆ ಝೇಂಕರಿಸಿ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರ