ಕವನ : ಮಸಣವಾದ ಪಹಲ್ಗಾಮ್

Must Read

ಮಸಣವಾದ ಪೆಹಲ್ಗಾಮ್

ಮದುವೆಯಾಗಿ
ವಾರವೂ ಕಳೆದಿರಲಿಲ್ಲ
ಹಚ್ಚಿದ ಅರಿಸಿಣ ಅರಿರಲಿಲ್ಲ
ಕಾಶ್ಮೀರ ಪಯಣಕೆ
ಹೊರಟ ದಂಪತಿ

ಅತ್ತ ಮಗ
ಹೆಂಡತಿ ಜೊತೆಗೆ
ರಜೆ ಕಳೆಯಲು
ಹೊರಟರು
ಕಣಿವೆ ನಾಡಿಗೆ

ಅದೆಷ್ಟೋ ಪ್ರವಾಸಿಗಳು
ಕನಸು ಬಯಕೆ ಹೊತ್ತು
ಬಂದರು ಹಸಿರು ತಾಣ
ಕೊಳಗಳ ಪುಟ್ಟ ದೋಣಿ
ಮಂಜುಗಡ್ಡೆ ಮುತ್ತಿಕ್ಕಿತ್ತು

ನೋಡು ನೋಡುವುದರೊಳಗೆ
ಬಂದು ನಿಂತರು ಉಗ್ರಗಾಮಿಗಳು
ಕಂಡ ಕಂಡಲ್ಲಿ ಗುಂಡು
ರಕ್ತ ಸುರಿಸಿದ ರಕ್ಕಸರು

ಚೀರಾಟ ಕೂಗಾಟ ಅಕ್ರ೦ದನ
ಕರುಣೆ ಇಲ್ಲದ ಕಟುಕರು
ಮೂವತ್ತು ಹೆಣ ಉರುಳಿದವು
ಇರಲಿಲ್ಲ ಸೇನೆ ಕಾವಲಿಗೆ
ಮಸಣವಾದ ಪೆಹಲಗಾಮ

ಡಾ. ಶಶಿಕಾಂತ ಪಟ್ಟಣ ಪುಣೆ

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group