ಕವನ : ಶರಣು ಬೆನಕನೆ ಶತ ಶತ ವಂದನೆ

Must Read

ಶರಣು ಬೆನಕನೆ ಶತಶತ ವಂದನೆ

ಪಾರ್ವತಿ ನಂದನ ಮೂಷಕ ವಾಹನ
ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕ
ವಿಘ್ನ ನಿವಾರಕ ಸಂಕಷ್ಟ ಹಾರಕ
ಸಾಧು ವಂದಿತ ತ್ರಿಜಗ ಪೂಜಿತ

ಮೊರದಗಲದ ಕಿವಿಯವನೆ ಭಕ್ತರ ಪೊರೆವನೆ
ಪ್ರಣವಸ್ವರೂಪನೆ ಮುನಿಜನ ಪ್ರಿಯನೆ
ಅನುದಿನವು ನಿನ್ನ ಸ್ಮರಣೆ ಭಕ್ತಿಯ ಆರಾಧನೆ
ಆದಿಯಲಿ ನಿನ್ನ ಅರ್ಚನೆ ಸಕಲ ಸುರರಿಂಗೆ ಮಾಧವನೆ

ಕರುಣಾಸಾಗರ ಲಂಬೋದರ ಲಕುಮಿಕರ
ಪಾಶಾಂಕುಶಧರ ನಿನ್ನಯ ಶಕ್ತಿ ಅಪಾರ
ಮಂಗಳ ಮೂರುತಿ ವಿದ್ಯಾ ಅಧಿಪತಿ
ತ್ರಿಲೋಕದಲಿ ತುಂಬಿದೆ ನಿನ್ನಯ ಕೀರುತಿ

ಭಕ್ತ ವತ್ಸಲ ನಿನಗೆ ಭಾವಾರ್ಚನೆ ದೂಮ್ರವರ್ಣನೆ ನಿನಗೆ ದೀಪಾರ್ಚನೆ
ಗಂಗಾಧರಪುತ್ರ ನಿನಗೆ ಗಂಧಾರ್ಚನೆ ಪಾರ್ವತಿ ಸುತನೆ ನಿನಗೆ ಪುಷ್ಪಾರ್ಚನೆ
ಮಹಿಮಾನ್ವಿತನೆ ನಿನಗೆ ಸವಿ ಮೋದಕ ನಿವೇದನೆ
ವಿವೇಕದಾತನೆ ಶರಣು ಬೆನಕನೆ ನಿನಗೆ ಶತ ಶತ ವಂದನೆ

ಬರುವುದು ಭಾದ್ರಪದ ಶುಕ್ಲ ಚೌತಿಯಂದು ನಿನ್ನ ಹಬ್ಬ
ತರುವುದು ನಾಡಿಗೆಲ್ಲ ಹೊಸ ಹರ್ಷ ಪ್ರತಿ ವರ್ಷ
ಶರಣು ಸಜ್ಜನರ ಮೊರೆ ಕೇಳಿ ಹರಸು ಹರುಷವ
ಹರಿಸಿ ಮರೆಸು ಬವಣೆಗಳನ್ನ ಅರಳಿಸು ಭಾವನೆಗಳನ್ನ

ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ

 

 

 

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...

More Articles Like This

error: Content is protected !!
Join WhatsApp Group