Homeಕವನಕವನ : ಮಧುರ ಭಾವದ ಒಡತಿ

ಕವನ : ಮಧುರ ಭಾವದ ಒಡತಿ

spot_img

ಮಧುರ ಭಾವದ ಒಡತಿ

ಮಲಗು ನನ್ನಯ ಗೆಳತಿ
ಮಧುರ ಭಾವದ ಒಡತಿ
ಹಸಿರು ಚಿಗುರಿನ ಪ್ರೀತಿ
ಸತ್ಯ ಸಮತೆ ಶಾಂತಿ

ಬಿಳಿಯ ಮೋಡದ ಮಧ್ಯೆ
ಬರುವ ಐರಾವತವು
ಕನಸುಗಳ ಮೂಟೆ
ಒಲವ ಸ್ನೇಹ

ತಿಳಿಗೊಳದ ತಾವರೆ
ಗಿಡ ಪೊದರ ಹಕ್ಕಿ
ಭಾವ ಗೀತೆಯ ಇಂಚರ
ಸುಳಿಗಾಳಿಯ ಸ್ವರವು

ನಗೆ ನಲುಮೆ ಸಗ್ಗ
ಹೆಣೆದ ಅಕ್ಷರ ಹಗ್ಗ
ದೂರ ಪಯಣದ ಕಗ್ಗ
ಬಾಳ ಬಟ್ಟೆಯ ಮಗ್ಗ

*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

RELATED ARTICLES

Most Popular

error: Content is protected !!
Join WhatsApp Group