ರಾಧಾ ಕೃಷ್ಣ ಪ್ರೇಮ ಕವನಗಳು- Radha Krishna

Must Read

ಕಾದಿಹಳು ರಾಧೆ

ಮಾಧವ ನಿನ್ನ ಕೊಳಲ ನಾದಕೆ
ಮನಸೋತಳು ಬೃಂದಾವನ ಕನ್ನಿಕೆ
ಗೋಪಾಲ ನಿನ್ನ ಮೋಹಕ ರಾಗಕೆ
ಜಗವ ಮರೆತು ನಿಂತಳು ಗೋಪಿಕೆ//

ಪ್ರೇಮದ ಸುಧೆಯ ನೀ ಬೀರಲು
ತನಿಯಿತು ರಾಧೆಯ ಒಡಲು
ಮುರುಳಿ ಮುಕುಂದ ಗೋಪಾಲಕೃಷ್ಣ
ಹೆಂಗಳೆಯರ ಮನಕದ್ದ ಕಳ್ಳ ಕೃಷ್ಣ//

ರಾಧಾ ಕೃಷ್ಣ ನಿಮ್ಮ ಪ್ರೀತಿ ಅಮರ
ನಿಶ್ಕಲ್ಮಶ ಪ್ರೇಮ ಭಾವ ಸುಮಧುರ
ಇವರ ಪ್ರೇಮದೊಡನಾಟ ನೋಡಲು ಸುಂದರ
ಇವರಿರ್ವರ ನೃತ್ಯ ರಮ್ಯ ಮನೋಹರ//

ತುಳಸಿ ಪ್ರಿಯ ನೀನು ಗೋವಿಂದ
ನವಿಲು ಗರಿ ಧರಿಸಿದ ಮುಕುಂದ
ರಾಧಾ ಹೃದಯವಾಸ ಗೋವಿಂದ
ನಿನ್ನ ಹೃದಯದಿ ರಾಧೆ ಇರುವಳು ಮುಕುಂದ//

ತನುಮನದಿ ರಾಧೆಯದೆ ಕನವರಿಕೆ
ಭಾಮಾ ರುಕ್ಮಿಣಿಯರ ವರಿಸಿದಿ ಏಕೆ
ಗೋಕುಲದೆಡೆಗೆ ನಿನ್ನ ಪಯಣ
ಕಾದಿಹಳು ರಾಧೆ ಪ್ರತೀಕ್ಷಣ//


ರಚನೆ ಶ್ರೀಮತಿ ಜ್ಯೋತಿ ಕೋಟಗಿ,
ಶಿಕ್ಷಕಿ, ಸ ಮಾ ಪ್ರಾ ಶಾಲಾ ತಲ್ಲೂರ
ಬೆಳಗಾವಿ ಜಿಲ್ಲೆ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group