spot_img
spot_img

ಕವನ: ಹಂಗ ನೆಂಪಾತ್ರಿ

Must Read

- Advertisement -

ಹಂಗ ನೆಂಪಾತ್ರಿ

ಆಹಾ ಎನ್ ಚಳಿ ಅಂತೀರಿ

ನಿಮ್ಮೂರಲ್ಲೂ ಇದೇನಾ ರೀ

ಸುತ್ಕೊಂಡ ಮಲ್ಗಿದ್ರೆ ಸಾಕ್ರಿ

- Advertisement -

ಗೊರಕಿ ಚಾಲೂನ  ನೋಡ್ರಿ

ಹಂಗ ವಿಚಾರ ಮಾಡ್ತಿದ್ದೆ

ನಾವ್  ಸನ್ನಾವ್ರಿದ್ದಾಗಾ

- Advertisement -

ಎನ್ ಚೆಂದಿತ್ತು ಚಳಿಗಾಲಾ

ಒಂದೊಂದೇ ನೆನಪ್ ಆಗ್ತೈತ್ರಿ

ಅಜ್ಜಿ ಸೀರಿ ಅಜ್ಜನ ದೋತರ

ಬೆಚ್ಚನೆಯ ಗೂಡು ಆಗಿದ್ದು

ಮನಿ ಹಿಂದ ಮುಂದ ಎಲ್ಲಾರು

ಕೂಡಿ ಬೆಂಕಿ ಕಾಯಿಸೋರು

ಬೆಂಕಿ ಮುಂದ ನಿಂತ ನಾಕ ಮಂದಿ

ಹಾಡೋರು ಇನ್ನಾಕೈದ ಮಂದಿ

ಅದ ನೋಡಿ ಹಲ್ಲ ಕಿಸಿಯೋರು ಬೈಸ್ಕೋಳೋರು ಉಳ್ಳಾಡೋರು

ನಸಿಕಿನ್ಯಾಗ ಎದ್ದು ಕಣ್ಣುಜ್ಜತಾ ಗುಬ್ಬಿ ಹೊಡಿಯೋಕ ಹೋಗೋರು

ಕೈಗ ಸಿಕ್ಕಿದ್ದ ಬೆಂಕಿಗ ಹಾಕಿ

ಉರಿ ಹಚ್ಚಿ ಮತ್ತೆ ಕೂಗೋರು

ಅವ್ವಾ ಕಟ್ಟೋ ಕುಂಚಗಿ ಕುಲಾಯಿ

ಜಿಗವ್ವ ದೊಡವ್ವ ಎಲ್ಲಾ ಸೇರಿ 

ಹೊಲದ ಕೌದಿ ನೆನಪೆಲ್ಲಾ

ಕಣ್ಮುಂದ ಕಟ್ಟೀದಂಗೈತಿ

ರಾತ್ರಿ ಅವ್ವಗ ನನ್ ಕಡೆ ತಿರ್ಗು

ನನ್ ಕಡೆ ತಿರ್ಗು ಅಂತಾ ಜಗ್ಗಾಡೋದು

ಸುಸ್ತಾದವ್ವ ಮಲ್ಕೋರೊ ನಿಮ್

ಬ್ಯಾನಿ ಬರ್ಲಿ ಅಂತ ಬಯ್ಯೋದು

ಆದ್ರೂ  ಬಿಡದ ಅಡ್ರಾಸಿ 

ಅಪ್ಕೋಳೊ ನಮ್ಮವ್ವಾ 

ಜಗ್ಗಿ ಜಗ್ಗಿ ಎಳದ ಹೊದಸಿ

ತಲೆಸವ್ರಿ ಮಲ್ಗಿಸೋ  ನನ್ನಪ್ಪ

ಎನ್ರಾ ಹೇಳ್ರಿ ಕೌದಿ ಹೊದ್ದು

ಮಲ್ಗಿದಾಗ ಸಿಕ್ಕೊ ನೆಮ್ಮದಿ

ಈ ಸೋಕಿ ರಗ್ಗದಾಗ ಇಲ್ಲ ಬಿಡ್ರಿ

ಸಣ್ಣಾವ್ರಾಗೆ ಇದ್ದಿದ್ರ ಬಾಳ ಚೆಂದ ಇತ್ತ್ರಿ

ಕೌದಿ ಬಗ್ಗೆ ಹೇಳ್ತಾ ಹೋದ್ರ

ಹೊತ್ತ ಹೊಂಡತದೇನೋ

ಇದ್ದಿದ್ದ ಹೊತ್ಕೊಂಡ ಮಲ್ಗೋದ

ಇಲ್ದಿದ್ರ ಕೌದಿ ನಾವ್ ಹೊಲಿಬೇಕ್ಕಾಕ್ಕೇತ್ರಿ

ಅಷ್ಟ ಟೇಮ್ ನಮ್ಗೆಲ್ಲೈತ್ರಿ

ಬರೀ ಓಡೋದಾಗೇತಿ 

ನಮ್ಗ ಸಿಕ್ಕ ಆ ಬಾಲ್ಯಾ ನಮ್ಮ

ಮಕ್ಕಳಿಗಿಲ್ದಂಗಾತು ಅದ ಬೇಜಾರ ನೋಡ್ರಿ

ಊರಿಂದ ಬರೋವಾಗಾ

ಅವ್ವಾ ಕಳಿಸಿದ್ದ ಕೌದಿ ನೋಡಿ

ಹೊತ್ಕೊಳ್ಳೋಕ ತಗೊನ್ನಿರಿ

ಇದೆಲ್ಲಾ ಹಂಗೆ ನೆಂಪಾತ್ರಿ

ನಿಮ್ಗೂ ನೆಂಪಾದ್ರ ನಕ್ಕ ಬಿಡ್ರಿ

ಇಲ್ಲಾಂದ್ರ ಸುಮ್ಕ ಮಲ್ಗಿಬಿಡ್ರಿ

ಓದಿ ಖುಷಿಯಾದ್ರ ನಮ್ಗೂ ತಿಳ್ಸ್ರಿ

ಸಾಕ್ ಬಿಡ್ವಾ ಅಂತ ಬೈಬ್ಯಾಡ್ರಿ


ಜ್ಯೋತಿ ಕೋಟಗಿ ಬೈಲಹೊಂಗಲ

ಬಿ ಆರ್ ಪಿ ಚ ಕಿತ್ತೂರು

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group