(ಗುರು ಕುಮಾರ ಪಂಚಾಕ್ಷರಿ ಪುಟ್ಟರಾಜರ ಕುರಿತು ರಚಿಸಿದ ಸ್ವರಚಿತ ಕವನಗಳು ಮಾತ್ರ)
ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಅರ್ಪಿಸುವ, ಹಾನಗಲ್ ಗುರು ಕುಮಾರ ಮಹಾಸ್ವಾಮಿಗಳ, ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ, ಪದ್ಮಭೂಷಣ ಡಾ. ಪಂ. ಪುಟ್ಟರಾಜ ಶಿವಯೋಗಿ ಕವಿ ಗವಾಯಿಗಳವರ ಕುರಿತಾಗಿ ರಚಿಸಿದ ಕಲೆಗೆ ಕಣ್ಣಿತ್ತ ಪೂಜ್ಯರು ೧೩ ನೆಯ ರಾಜ್ಯ ಮಟ್ಟದ ಕವಿಗೋಷ್ಠಿಯು, ದಿನಾಂಕ ೧೨ ಮೇ ೨೦೨೪ ರವಿವಾರ ಬೆಳಗ್ಗೆ ೧೧ ಗಂಟೆಗೆ, ದಾವಣಗೆರೆಯ ಬಾಡ ಕ್ರಾಸ್‌ನಲ್ಲಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.
ಪೂಜ್ಯತ್ರಯರ ಕುರಿತಾಗಿ ರಚಿಸಿದ ಸ್ವರಚಿತ ಕವನ ವಾಚನ ಮಾಡಲು ಆಸಕ್ತ ಕವಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಪೂಜ್ಯತ್ರಯರಲ್ಲಿ ಯಾರಾದರೂ ಒಬ್ಬರನ್ನು ಕುರಿತು ರಚಿಸಿದ ಸ್ವರಚಿತ ಕವನ ಮಾತ್ರ ವಾಚಿಸಲು ಅವಕಾಶವಿರುತ್ತದೆ. ತಾವು ವಾಚಿಸಲಿರುವ ಒಂದು ಅಥವಾ ಮೂರು ಕವನಗಳನ್ನು ಕಳಿಸಿಕೊಟ್ಟು ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಆಯ್ಕೆಯಾದ ಕವನಗಳ ಕವಿಗಳನ್ನು ಮಾತ್ರ ಅಹ್ವಾನಿಸಲಾಗುವುದು.
ಭಾಗವಹಿಸಿದ ಕವಿಗಳಿಗೆ ಅಭಿನಂದನಾ ಪತ್ರ, ಪುಸ್ತಕ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.
ದೂರದ ಊರುಗಳಿಂದ ಬರುವ ಕವಿಗಳಿಗೆ ಊಟ ಮತ್ತು ಸಾಮೂಹಿಕ ವಸತಿ ಒದಗಿಸಲಾಗುವುದು. ಭಾಗವಹಿಸಲು ಆಸಕ್ತರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ತಿಳಿಸಿ, ಗುಣಮಟ್ಟದ ಒಂದು ಭಾವಚಿತ್ರದೊಂದಿಗೆ, ಶ್ರೀಮತಿ ವಾಣಿ ಬಸವರಾಜ ಕವಿಯತ್ರಿ, ಆಂಗ್ಲ ಭಾಷಾ ಉಪನ್ಯಾಸಕಿ ದಾವಣಗೆರೆ ಇವರ ೯೯೦೨೦೫೨೧೨೧ / ೯೮೮೬೭೧೭೭೩೨ ವಾಟ್ಸಾಪ್ ನಂಬರಗೆ ಕಳಿಸಿಕೊಡಬಹುದು.
ಕರೆಗಳನ್ನು ಸ್ವೀಕರಿಸುವುದಿಲ್ಲ. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ೩೦ ಏಪ್ರಿಲ್ ೨೦೨೩. ಆಗಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಗೀತ ಶಿಕ್ಷಕ ಶಿವಬಸಯ್ಯ ಪಂ. ಚರಂತಿಮಠ ದಾವಣಗೆರೆ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.