spot_img
spot_img

ಕವನ : ಭವ್ಯ ಭಾರತ

Must Read

spot_img
- Advertisement -

ಭವ್ಯ ಭಾರತ

ಇದೋ ನಮ್ಮ ಭಾರತ
ಪುಣ್ಯ ಭೂಮಿ ಭಾರತ
ವೇಷ ಭಾಷೆ ಬೇರೆ ಆದರೂ
ಕಣ ಕಣದಲಿ ದೇಶ ಭಕ್ತಿ ಉಸಿರು.

ಹಿಮಾಲಯದ ಶಿಖರದಿಂದ
ಕನ್ಯಾಕುಮಾರಿ ಕಡಲ ತಡಿಯ ಚಂದ
ಋಷಿ ವರ್ಯರ ಹೊತ್ತ ದಿವ್ಯ ನಾಡು
ನದಿನದಗಳ ಚೆಲುವ ಬೀಡು.

- Advertisement -

ವೀರ ಶೂರರು ಜನ್ಮ ವೆತ್ತು
ದೇಶಕಾಗಿ ಜೀವ ತೆತ್ತು
ಮಾನವೀಯತೆಯ ಸಾರಿ
ಸಮನ್ವಯತೆಯ ಬೇರು ಹೀರಿ.

ವ್ಯಾಸ ವಿವೇಕ ಕುವೆಂಪು
ಕಾಳಿದಾಸ ಕನಕದಾಸರ ಕಂಪು
ತಾಯ ಮಡಿಲಲಿ ಮಂದಹಾಸ
ವೇದ ಉಪನಿಷತ್ತುಗಳ ಪ್ರಭಾಸ.

ನ್ಯಾಯ ಸಮಾನತೆಯ ಒಂದು ಗೂಡಿಸಿ
ವರ್ಗ ಬೇಧವ ಅಳಿಸಿ
ಇದೋ ಭವ್ಯ ಭಾರತ
ಸೌಹಾರ್ದತೆಯ ಸಾರುತ.

- Advertisement -

ಸನಾತನ ಧರ್ಮ ಸಂಸ್ಕೃತಿ
ನಿತ್ಯ ವಿನೂತನ ಸಂತತಿ
ಜಗಕೆ ಬೆಳಕು ಬೀರುವಂತೆ
ಕಾಯಕ ಸಿರಿಯ ಅರಳುವಂತೆ.

ಸಿಂಧು ಕಣಿವೆಯಲಿ ಬೆಳೆದು
ಗಂಗ ಕದಂಬ ರಾಷ್ಟ್ರಕೂಟರ ಮೈದಳೆದು
ಪಾವನ ಚರಣ ಕಮಲದಿ
ವಿಶ್ವ ಚೇತನಕೆ ಆದಿ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿನ ಅನುಕೂಲಕ್ಕಿಂತ ಸವಾಲುಗಳೇ ಹೆಚ್ಚು- ಸುದರ್ಶನ್ ಚೆನ್ನಂಗಿಹಳ್ಳಿ

ತುಮಕೂರು: ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿಹೊಂದಿದ್ದು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ ಅನುಕೂಲಗಳಿಗಿಂತ ಸವಾಲುಗಳು ಹೆಚ್ಚಾಗಿವೆ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ...
- Advertisement -

More Articles Like This

- Advertisement -
close
error: Content is protected !!
Join WhatsApp Group