ಮೂಡಲಗಿ:- ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 2023-24 ರ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಶೇ%90ಕ್ಕಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ/ನಿಯರಿಗೆ ಗೋಕಾಕ ಜೆಸಿಐ ಸಂಸ್ಥೆಯಿಂದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ. ಜೂ,16 ರಂದು ಗೋಕಾಕ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಭಾರತ ಸಂಸ್ಥೆಯ ಸಂಯೋಜಕರಾದ ವಿಷ್ಣು ಲಾತೂರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಇದೆ ಮೊದಲಬಾರಿಗೆ ಜ್ಯೂನಿಯರ ಚೇಂಬರ್ ಇಂಟರ್ ನ್ಯಾಶನಲ್ ಇಂಡಿಯಾ ಸಂಸ್ಥೆ (ಜೆಸಿಐ)ಯಿಂದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಗೋಕಾಕ ಚನ್ನಬಸವೇಶ್ವರ ವಿದ್ಯಾಪೀಠ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಶೇ 90 ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಭಾಗವಹಿಸಬೇಕು ಶ್ರೀಗಳು,ಗುರು ಹಿರಿಯರು,ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ಕೆಇಎಸ್ ಅಧಿಕಾರಿ ತಹಶಿಲ್ದಾರ ಮೋಹನ ಕುಮಾರ ಭಷ್ಮೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡುವ ಬಗ್ಗೆ ಜೊತೆಗೆ ಸಂವಾದ ನಡೆಸುವವರು ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ವರ್ಷವಿಡೀ ವಿವಿಧ ರಂಗಗಳಲ್ಲಿ ಜೆಸಿಐ ಸಂಸ್ಥೆಯು ಸಾಮಾಜಿಕ ಕಾರ್ಯಗಳೊಂದಿಗೆ ಕೆಲಸ ಮಾಡುತ್ತ ಬಂದಿದೆ.5 ನೆಯ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಗೆ ತಮ್ಮ ಅಂಕಪಟ್ಟಿ ಝರಾಕ್ಸ್ ಪ್ರತಿಯೊಂದಿಗೆ ಭಾವಚಿತ್ರ ಆಂಟಿಸಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ನಮ್ಮ ಸಂಸ್ಥೆಗೆ ಅರ್ಜಿ ಸಲ್ಲಿಸಿರಿ.ಅರ್ಜಿ ಸಲ್ಲಿಸಲು ಜೂನ,12ಕ್ಕೆ ಕೊನೆಯ ದಿನವಾಗಿರುತದೆ. ಖುದ್ದಾಗಿ ಅಥವಾ ನೇರವಾಗಿ ನಮ್ಮ ಕಛೇರಿಗೆ ಬಂದು ಅರ್ಜಿ ಕೂಡಾ ಸಲ್ಲಿಸಬಹುದು ಮತ್ತು ಅಂಚೆ ಮೂಲಕ ಅರ್ಜಿ ಸಲ್ಲಿಸಿದವರು ಕಾರ್ಯಕ್ರಮ ದಿವಸ ಬೆಳಗ್ಗೆ 8 ಗಂಟೆಗೆ ನಮ್ಮ ಸಂಸ್ಥೆಯ ಕಛೇರಿಯ ಕಾರ್ಯಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ಗೋಕಾಕ ಜೆಸಿಐ ಅಧ್ಯಕ್ಷ ಸುಮನ ಜಾಧವ ತಿಳಿಸಿದರು.
ಜೆಸಿಐ ಸಂಸ್ಥೆಯ ಎಸ್.ಪಿ.ಉಳ್ಳಾಗಡ್ಡಿ, ಎಸ್.ಆರ್.ಹವಾಲ್ದಾರ್, ಆರ್.ಎಸ್.ಮಾಳೋದ ಇನ್ನೂ ಅನೇಕರು ಉಪಸ್ಥಿತರಿದ್ದರು.