Homeಸುದ್ದಿಗಳುಉಪನೋಂದಣಿ ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ, ವಕೀಲರ ಸಂಘದಿಂದ ಪ್ರತಿಭಟನೆ

ಉಪನೋಂದಣಿ ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ, ವಕೀಲರ ಸಂಘದಿಂದ ಪ್ರತಿಭಟನೆ

ಬೀದರ – ಭ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಉಪನೊಂದಣಿ ಅಧಿಕಾರಿ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿ ವರ್ಗಾವಣೆಗೆ ಆಗ್ರಹಿಸಿದರುು.

ತಾಲ್ಲೂಕಿನ ವಕೀಲರ ಸಂಘದಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ ಚೀಲವಂತ ಮಾತನಾಡಿ, ಇಂಥ ಭ್ರಷ್ಟ ಅಧಿಕಾರಿ ಹುಮನಾಬಾದಗೆ ಬಂದಿರುವುದು ಇದೇ ಮೊದಲು.ಇಂಥ ಅಧಿಕಾರಿಯನ್ನು ತಕ್ಷಣದಿಂದಲೇ ವರ್ಗವಾಣೆಗೊಳಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಾ ಹಲಮಡಗಿ, ಪ್ರಧಾನ ಕಾರ್ಯದರ್ಶಿ ಹರೀಶ ಜಿ.ಅಗಡಿ, ಪ್ರಮುಖರಾದ ಸತೀಶ ರಾಂಪೂರೆ, ಪ್ರಭಾಕರ ನಾಗರಾಳೆ, ಅಶೋಕ ವರ್ಮಾ ಮತ್ತಿತರರು ಮಾತನಾಡಿದರು.

RELATED ARTICLES

Most Popular

error: Content is protected !!
Join WhatsApp Group