ಸಿಂದಗಿ: ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದ್ದು, ಇದರಿಂದ ಮಕ್ಕಳ ಜ್ಞಾನ ವಿಕಾಸವಾಗುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಹೇಳಿದರು.
ತಾಲೂಕಿನ ಗೋಲಗೇರಿಯ ಎಂ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡ ಗೋಲಗೇರಿ ಕ್ಲಸ್ಟರ್ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗೋಲಗೇರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಎನ್.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಮಾನ ಹಾಗೂ ಪಠ್ಯಾಧಾರಿತ ಜ್ಞಾನ ಪರೀಕ್ಷಿಸಲು ಈ ರಸಪ್ರಶ್ನೆ ಕಾರ್ಯಕ್ರಮವು ಉತ್ತೇಜಕವಾಗಿದ್ದು ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗಿಯಾಗಿ ತಮ್ಮ ಸಾಧನೆ ಮೆರೆಯಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೆ.ಎಸ್.ಅಲ್ದಿಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ದಾನಿಗಳಾದ ಶ್ರೀಮತಿ ಎಸ್.ಎಸ್.ಉತ್ನಾಳ, ಎಸ್.ಬಿ.ಕನ್ನೊಳ್ಳಿ, ಎಸ್.ಎಸ್.ಕುಂಬಾರ, ಗ್ರಾ.ಪಂ.ಸದಸ್ಯ ಮೈಬೂಬ್ ಜೋಗೂರ ಸೇರಿದಂತೆ ಗೋಲಗೇರಿ ಕ್ಲಸ್ಟರಿನ ವಿವಿಧ ಶಾಲೆಗಳಿಂದ ನಿವೃತ್ತರಾದ ಶ್ರೀಮತಿ ಬಿ.ವಿ.ಗೋಣಿ, ಎಸ್.ಎಂ.ಪೂಜಾರಿ, ವೈ.ಎನ್.ಗೌಡರ, ಎಸ್.ಎಸ್.ಕುಂಬಾರ, ಎಚ್.ಎ.ಪ್ಯಾಟಿ, ಎಸ್.ಎಲ್.ಭಜಂತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಗೊಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವ್ಹಿ.ಡಿ.ಸಿಂದಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಫ್.ಆರ್. ಕಾಚೂರ್, ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠ, ಸೇರಿದಂತೆ ಗೋಲಗೇರಿ ಕ್ಲಸ್ಟರಿನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಎಸ್.ಕೆ.ಬಿರಾದಾರ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವಿ.ಎಸ್.ಅರಬಳ್ಳಿ ನಿವೃತ್ತ ಶಿಕ್ಷಕಿಯರು ನಡೆದು ಬಂದ ಹಾದಿ ಸ್ಮರಿಸಿದರು. ಶಿಕ್ಷಕ ಬಸಯ್ಯ ಜಾಲವಾದಿಮಠ ನಿರೂಪಿಸಿದರು. ಶಿಕ್ಷಕ ಎನ್.ಎಸ್.ಬಂಥನಾಳ ನಿರೂಪಿಸಿದರು. ಶಿಕ್ಷಕ ಶರಣು ಚಟ್ಟಿ ವಂದಿಸಿದರು.