spot_img
spot_img

ಭ್ರಾತೃತ್ವದ ಸಂಕೇತ ರಕ್ಷಾ ಬಂಧನ

Must Read

spot_img
- Advertisement -

ಸಿಂದಗಿ: ರಕ್ಷಾ ಬಂಧನ ಸಹೋದರಿ ಸಹೋದರನ ಭ್ರಾತೃತ್ವದ ಸಂಕೇತ ಅದನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಹೋಗಬೇಕು ಅಲ್ಲದೆ ಯಾರಿಗೆ ಕಷ್ಟ ಕಾಲ ಬಂದಾಗ ರಕ್ಷಣೆಗೆ ನಿಲ್ಲುವುದು ರಕ್ಷಾ ಬಂಧನದ ಉದ್ದೇಶವಾಗಿದೆ ಸಾಮೂಹಿಕವಾಗಿ ರಕ್ಷಾ ಬಂಧನ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.

ಅವರು ನಗರದ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಜ್ಞಾನಭಾರತಿ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ರಕ್ಷಾಬಂಧನ ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಥೆ ಪ್ರಾರಂಭಿಸುವುದು ಸರಳ ಅದನ್ನು ನಡೆಸಿಕೊಂಡು ಹೋಗುವುದು ಕಷ್ಟಕರ ಸಂಗತಿ. ಭಾರತದ ಸಂಸ್ಕೃತಿ ಉಳಿಯಲು ಕನ್ನಡ ಮಾಧ್ಯಮ ಶಿಕ್ಷಣ ಅತ್ಯವಶ್ಯಕ ಆ ನಿಟ್ಟಿನಲ್ಲಿ ಈ ಸಂಸ್ಥೆ ಪ್ರಯತ್ನಿಸುತ್ತಿರುವ ಕಾರ್ಯಕ್ಕೆ ಸರಕಾರದಿಂದ ಈ ಸಂಸ್ಥೆಗೆ ಅನುದಾನ ಪೂರೈಸಲು ಸಿದ್ಧ ಎಂದ ಅವರು, ಈ ಸಂಸ್ಥೆಗೆ ವೈಯಕ್ತಿಕವಾಗಿ ರೂ. 51,000 ಸಹಾಯ ಧನ ನೀಡುವದಾಗಿ ಘೋಷಿಸಿದರು  

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಿವಾನಂದ ಶಿವಾಚಾರ್ಯರ ವಹಿಸಿಕೊಂಡಿದ್ದರು.

- Advertisement -

ವೃತ್ತ ನಿರೀಕ್ಷಕರಾದ ಡಿ ಹುಲಗಪ್ಪ ಮಾತನಾಡಿ, ಸರಕಾರಿ ಹುದ್ದೆಗಾಗಿ ಶಿಕ್ಷಣ ಪಡೆದುಕೊಳ್ಳದೆ ಜ್ಞಾನಕ್ಕಾಗಿ ವಿದ್ಯೆ ಕಲಿಯಬೇಕು ಜಗತ್ತಿನಲ್ಲಿ ಗಳಿಸಿದ ಎಲ್ಲಾ ವಸ್ತುಗಳನ್ನು ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಮುಂದೆ ಗುರು ಇರಬೇಕು ಹಿಂದೆ ಗುರಿ ಇಟ್ಟುಕೊಂಡು ನಿತ್ಯ ಪರಿಶ್ರಮ ಪಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಚಿಕ್ಕವರಿದ್ದಾಗಲೇ ಗುರಿಯನ್ನು ಹೊಂದಬೇಕು ಆ ಗುರಿಗೆ ಅನುಗುಣವಾಗಿ ಸತತವಾದ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿ ಗುರಿಯನ್ನು ತಲುಪಬೇಕು ವಿದ್ಯಾರ್ಥಿಗಳ ಈ ಪ್ರಯತ್ನ ನಿರಂತರವಾಗಿರಬೇಕು ಎಂದು ಹೇಳಿದರು ಮತ್ತು ಸಿಪಾಯಿ ಹುಲಗಪ್ಪ ಸರ್ ಇವರು ವಿದ್ಯಾರ್ಥಿಗಳಿಗೆ ಸಹಾಯವಾಗಲು ಸಂಸ್ಥೆಗೆ ರೂ. 5001 ರೂಪಾಯಿ ಕಾಣಿಕೆಯನ್ನು ನೀಡಿದರು.

ತಾಲೂಕು ದಂಡಾಧಿಕಾರಿ ಪ್ರದೀಪ ಕುಮಾರ ಹಿರೇಮಠ ಅವರು ಮಾತನಾಡಿ, ಮಕ್ಕಳು ಹಿರಿಯರಿಗೆ ಗೌರವಿಸುವ ಸಂಸ್ಕಾರಯುಕ್ತ ಶಿಕ್ಷಣ ಪಡೆಯಲು ಈ ಸಂಸ್ಥೆ ತುಂಬಾ ಸಹಾಯಕಾರಿಯಾಗಿದೆ ಮತ್ತು ವಿದ್ಯಾರ್ಥಿಗಳು ಇಂತಹ ಸಂಸ್ಕಾರ ಹಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದಿರುವ ನೀವು ಮುಂದೆ ಉನ್ನತ ಹುದ್ದೆ ಅಲಂಕರಿಸಲು ಪ್ರಯತ್ನಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಗುರುಮಾತೆಯರು ರಾಖಿಯನ್ನು ಕಟ್ಟಿ ಅರ್ಥಪೂರ್ಣವಾಗಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು.

- Advertisement -

ಶಿಕ್ಷಕ ಎಸ್.ಎ. ರಾಥೋಡ್ ನಿರೂಪಿಸಿದರು. ಮುಖ್ಯ ಗುರುಗಳಾದ ಜಗದೀಶ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕರಾದ ಸಂತೋಷಕುಮಾರ ಬಿರಾದಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಪಾಲಕ ಪ್ರತಿನಿಧಿಗಳು ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group