spot_img
spot_img

ಸಿಂದಗಿ : ಗೃಹಲಕ್ಷ್ಮೀ ಯೋಜನೆಗೆ ಚಾಲನೆ

Must Read

- Advertisement -

ಸಿಂದಗಿ: ರಾಷ್ಟ್ರೀಯ ನಾಯಕ ರಾಹುಲ ಗಾಂಧಿಯವರ ನೇತೃತ್ವದಲ್ಲಿ ಚಾಲನೆಗೊಂಡ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯು ಇಡೀ ದೇಶಾದ್ಯಂತ ಇತಿಹಾಸ ಸೃಷ್ಟಿಸಿದೆ ಕರ್ನಾಟಕ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದುಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.   

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಶಿಶು ಕಲ್ಯಾಣ ಅಭಿವೃದ್ಧಿ ಯೋಜನೆ ಮತ್ತು ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಹಿಂದಿನ ಸರಕಾರದ ವೈಫಲ್ಯದಿಂದ ದಿನ ಬಳಕೆ ವಸ್ತುಗಳ ಬೆಲೆ ಗಗನಕೇರಿದ್ದರಿಂದ ಇಂದು ಹಣದುಬ್ಬರದಿಂದ ತೊಳಲಾಡಿ ಹೆಣ್ಣು ಮಕ್ಕಳು ಸಂಸಾರ ನಡೆಸುವುದು ದುಸ್ತರವಾಗಿದ್ದು ಆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಪೂರೈಸಿದ ಕೀರ್ತಿ ಕರ್ನಾಟಕ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಸಿಂದಗಿ ಮತಕ್ಷೆತ್ರದಲ್ಲಿ 46 ಸಾವಿರ ಬಿಪಿಎಲ್ ಕಾರ್ಡ್ ಫಲಾನುಭವಿಗಳಲ್ಲಿ 38 ಸಾವಿರ ಕಾರ್ಡುಗಳು ನೊಂದಣಿಯಾಗಿ ಪ್ರತಿಶತ 83 ರಷ್ಟು ಜನರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಇನ್ನುಳಿದ ಕಾರ್ಡುದಾರರು ನೊಂದಣಿ ಪಡೆದುಕೊಂಡು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಹಿಂದಿನ ಬಿಜೆಪಿ ಸರಕಾರ 4 ಕೆಜಿ ಅಕ್ಕಿ ನೀಡುತ್ತಿತ್ತು ನಮ್ಮ ಸರಕಾರದಲ್ಲಿ ಅನ್ನಬಾಗ್ಯ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ 10 ಕೆ. ಜಿ ನೀಡುವ ವಾಗ್ದಾನ ಮಾಡಿದಂತೆ 5 ಕೆ ಜಿ ಅಕ್ಕಿ ಹಾಗೂ ಪ್ರತಿಯೊಬ್ಬರಿಗೂ ರೂ. 170 ಹಣ ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಅಲ್ಲದೆ ರಾಜ್ಯದಲ್ಲಿ 4 ಲಕ್ಷ 82 ಸಾವಿರ ಕುಟುಂಬಗಳಿಗೆ ಗೃಹಜ್ಯೋತಿ ಲಾಭ ತಟ್ಟಿದೆ. ಶಕ್ತಿ ಯೋಜನೆಯಿಂದ ಎಲ್ಲ ಮಹಿಳೆಯರಿಗೆ ಅನುಕೂಲವಾಗಿದೆ. 5 ನೇ ಗ್ಯಾರಂಟಿಯಾದ ಪದವಿಧರ ಯುವಕರಿಗೆ ಉತ್ತೇಜನಕ್ಕಾಗಿ ರೂ 3 ಸಾವಿರಗಳನ್ನು ಇನ್ನೂ 2 ತಿಂಗಳಲ್ಲಿ ಜಾರಿಗೆ ತರುತ್ತದೆ ಜನತೆ ನಮ್ಮ ಮೇಲಿಟ್ಟ ಭರವಸೆಯಂತೆ ನಡೆದುಕೊಂಡಿದೆ ಎಂದರು.

- Advertisement -

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರದ ಈ ಯೋಜನೆಯನ್ನು ಅನುಷ್ಠಾನ ಗೊಳಿಸುವುದರ ಸ್ವಾವಲಂಬನೆಯ ಮೂಲಕ ಮಹಿಳಾ ರೂಪಿಸುತ್ತಿದೆ ಕಾರಣ ಬಿಪಿಎಲ್ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಮಾಜಿ ಜಿಪಂ ಉಪಾದ್ಯಕ್ಷ ಮಲ್ಲಣ್ಣ ಸಾಲಿ, ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ತಾಪಂ ಕಾರ್ಯನಿವಾಹಕ ಅಧಿಕಾರಿ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕಾಂಗ್ರೆಸ್ ಬ್ಲಾಕ್ ಸಮೀತಿ ಅದ್ಯಕ್ಷ ಸುರೇಶ ಪೂಜಾರಿ, ಮಾಜಿ ಅಧ್ಯಕ್ಷರಾದ ಹಣಮಂತ ಸುಣಗಾರ, ಬಾಷಾಸಾಬ ತಾಂಬೋಳಿ, ಸದಸ್ಯರಾದ ಹಾಸೀಂ ಆಳಂದ, ಸಂದೀಪ ಚೌರ, ಗೊಲ್ಲಾಳ ಬಂಕಲಗಿ, ಬಸವರಾಜ ಯರನಾಳ, ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ವಿಶ್ವನಾಥ ಕಮತಗಿ, ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಸಿಂದಗಿ ಮತಕ್ಷೇತ್ರದ ಫಲಾನುಭವಿಗಳು ಹಾಗೂ ಮಹಿಳೆಯರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

- Advertisement -

ಶಿಶು ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಜಗಳೂರ ಸ್ವಾಗತಿಸಿದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group