ಮೂಡಲಗಿ:-ಪಟ್ಟಣದ ಎಸ್ ಎಸ್ ಆರ್ ಪ್ರೌಢ ಶಾಲೆಯಲ್ಲಿ ಶ್ರೀ ಗಣೇಶೋತ್ಸವದ ನಿಮಿತ್ತವಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ “ರಂಗೋಲಿ ಸ್ಪರ್ಧೆ” ಜರುಗಿತು.
ಅತ್ಯಂತ ಸುಂದರವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೈಚಳಕದಿಂದ ಮೂಡಿ ಬಂದ ವಿವಿಧ ರಂಗೋಲಿ ಚಿತ್ರಗಳು ಗಮನಸೆಳೆದವು.
ಈ ರಂಗೋಲಿ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯರಾದ ಲಕ್ಷ್ಮೀ ಕಮತ ಪ್ರಥಮ, ಪ್ರೇರಣಾ ಖಾನಾಪುರ ದ್ವಿತೀಯ ಹಾಗೂ ಪ್ರೀತಿ ಕಲಾಲ ತೃತಿಯ ಬಹುಮಾನ ಪಡೆದರು.
9ನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿ ಬಂಡಿವಡ್ಡರ ಪ್ರಥಮ, ಆಕಾಶ ಮೂಡಲಗಿ ದ್ವಿತೀಯ ಹಾಗೂ ಸೃಷ್ಟಿ ಪೂಜೇರಿ ತೃತಿಯ ಬಹುಮಾನ ಪಡೆದರು.
10ನೇ ತರಗತಿಯ ವಿದ್ಯಾರ್ಥಿಗಳಾದ ಭರ್ಮಪ್ಪ ದಂಡಿನವರ ಪ್ರಥಮ, ಸಂಗೀತಾ ದಳವಾಯಿ ದ್ವಿತೀಯ ಹಾಗೂ ಭವ್ಯ ಖೋತ ತೃತೀಯ ಬಹುಮಾನಗಳನ್ನು ಪಡೆದರು.
ಎಸ್. ಎಸ್. ಕುರಣೆ, ಆರ್. ಎ.ಹೊಸಟ್ಟಿ, ಬಿ.ಕೆ.ಕಾಡಪ್ಪಗೋಳ, ಚಂದ್ರು ಮೊಟೆಪ್ಪಗೋಳ, ರಮೇಶ ಬಿರಾದಾರ, ಎಸ್.ಎಸ್.ಗಲಗಲಿ, ರಾಮಪ್ಪ ಕಳಸನ್ನವರ, ಹೇಮಾ ಢವಳೇಶ್ವರ, ವೀಣಾ ಸರಿಕರ, ಜ್ಯೋತಿ ಬಂಡಿವಡ್ಡರ, ಕವಿತಾ ಮೇಡಮ್ ಉಪಸ್ಥಿತರಿದ್ದರು.