spot_img
spot_img

ವ್ಯಾಜ್ಯಗಳನ್ನು ಆದಷ್ಟೂ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ- ನ್ಯಾ.ಮೂ. ನಾಯಕ

Must Read

spot_img
- Advertisement -

ಸಿಂದಗಿ: ಯಾವುದೋ ಒಂದು ಕಾರಣಕ್ಕೆ ಸಣ್ಣ ಪುಟ್ಟ ವ್ಯಾಜ್ಯಗಳು ಕೋರ್ಟ ಮೆಟ್ಟಿಲು ಹತ್ತಲು ಕಾರಣವಾಗಿ ವೈಷಮ್ಯಗಳು ಹುಟ್ಟಿಕೊಂಡಿರುತ್ತವೆ ಅವನ್ನು ಸ್ಪಲ್ಪ ಸಮಯದಲ್ಲಿ ಇತ್ಯರ್ಥಗೊಳಿಸಿಕೊಳ್ಳಬೇಕು ಏಕೆಂದರೆ ವ್ಯಾಜ್ಯಗಳು ಇತ್ಯರ್ಥವಾಗುವುದರೊಳಗೆ ಗೆದ್ದವನು ಸೋತು ಹೋಗುತ್ತಾನೆ. ಸೋತವನು ಸತ್ತೇ ಹೋಗುತ್ತಾನೆ ಅದಕ್ಕೆ ಗ್ರಾಮೀಣ ಭಾಗದಲ್ಲಿಯೇ ಹಿರಿಯರಿಂದ ನ್ಯಾಯ ಪಂಚಾಯತಗಳ ಮೂಲಕ ತಮ್ಮಷ್ಟಕ್ಕೆ ತಾವೇ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸುಖಮಯ ಜೀವನ ನಡೆಸಿ ಎನ್ನುತ್ತ ನನ್ನ ವ್ಯಾಪ್ತಿಯಲ್ಲಿ 816 ಪ್ರಕರಣಗಳು ಸೇರಿದಂತೆ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 2849 ಪ್ರಕರಣಗಳು ಇತ್ಯರ್ಥವಾಗಿವೆ ಎಂದು  ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಧೀಶ ಆಯ್.ಪಿ.ನಾಯಕ ತಿಳಿಸಿದರು.

 Mಪಟ್ಟಣದ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಅರಿವು ನೆರವು ಸೇವಾ ಸಮಿತಿ ವತಿಯಿಂದ  ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಮಾತನಾಡಿ, ಚೆಕ್ ಬೌನ್ಸ ಪ್ರಕರಣ, ಬ್ಯಾಂಕ ಸಾಲ ವಸೂಲಾತಿ ಪ್ರಕರಣ, ಸಿವಿಲ್ ವ್ಯಾಜ್ಯಗಳು, ವೈವಾಹಿಕ ವಿವಾಹಗಳು, ಆಸ್ತಿ ಇಬ್ಬಾಗ, ಖರೀದಿ ಕರಾರು ಪತ್ರ, ಕ್ರಿಮಿನಲ್ ಪ್ರಕರಣಗಳು, ಲಘು ಅಪಘಾತಗಳಂಥ ರಾಜಿಯಾಗಬಹುದಾದ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಗಿದೆ. ಈ  ಪ್ರಕರಣಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುವಂಥ ಪ್ರಕರಣ ಮತ್ತು ಬ್ಯಾಂಕುಗಳು ಗ್ರಾಹಕರ ಮೇಲೆ ಸಾಲದ ಹೊರೆಯಾದಾಗ ಅವರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಸಾಲಗಾರರಿಗೆ ಅನುಕೂಲವಾಗುವಂತೆ ಒಂದೇ ಬಾರಿಗೆ ಹಣ ಮರುಪಾವತಿ ಮಾಡುವಂತೆ ಮನವೊಲಿಸುವದು ಸೇರಿದಂತೆ ಲಘು ಪ್ರಕರಣಗಳಲ್ಲಿ ಕಕ್ಷಿದಾರರನ್ನು ಮನವೊಲಿಸಿ ರಾಜಿ ಮೂಲಕ ಇತ್ಯರ್ಥ ಪಡಿಸಿಕೊಂಡಿದ್ದಾರೆ ಎಂದರು.

ಅಸಹಾಯಕರಿಗೆ ನ್ಯಾಯ ದೊರಕುವುದು ಸುಲಭದ ಮಾತಲ್ಲ:  

ಗಂಡ-ಹೆಂಡತಿಯ ಸಂಸಾರದ ನಡುವೆ ಲೋಪವಾಗಿ ಜೀವನಾಂಶಕ್ಕಾಗಿ ಕೋರ್ಟು ಮೇಟ್ಟಿಲೇರಿದ್ದಾಗಿದೆ ಜೀವನಾಂಶಕ್ಕೆ ಆಧಾರವಾಗಿ ಪ್ರತಿತಿಂಗಳು ಜೀವನಾಂಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಕ್ಕೆ ಕಣ್ಣಿಲ್ಲ ಎನ್ನುವಂತೆ ರೊಕ್ಕ ಮತ್ತು ಸೊಕ್ಕಿದ್ದವರಿಗೆ  ನ್ಯಾಯ ಸಹಜವಾಗಿಯೇ ದೊರುಕುತ್ತದೆ ಅಸಹಾಯಕರಿಗೆ ನ್ಯಾಯ ದೊರಕುವುದು ಸುಲಭದ ಮಾತಲ್ಲ ಆ ಕಾರಣಕ್ಕೆ  ಜೀವನಕ್ಕೆ ಹಣ ನೀಡಿದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಇಂತಹ ಕಷ್ಟ ಮತ್ಯಾವ ಹೆಣ್ಣಿಗೂ ಬರದಿರಲಿ ಎಂದು ಬಾವುಕಳಾಗಿ ಕಣ್ಣೊರಿಸಿಕೊಂಡರೆ ಇನ್ನೂ ಕೆಲವರು ನ್ಯಾಯಾಲಯಕ್ಕೆ ಅಲೆದು ಅಲೆದು ಸುಸ್ತಾಗಿದ್ದೇವೆ ಕೇಸು ಹಾಕಿದವನು ಮೆಲ್ನೋಟಕ್ಕೆ ನಾ ಅದನ್ನು ಬಿಡುದಿಲ್ಲ ಎಂದು ಹೇಳುತ್ತಾನೆ ನಾನು ಜಿದ್ದು ಸಾಧಿಸಿದರೆ ಇದ್ದದ್ದೆಲ್ಲ ಕಳಕೊಂಡು ಬೀದಿಗೆ ಬರಬೇಕಾಗುತ್ತದೆ ಅದಕ್ಕೆ ಹಿಂದೆ ಸರಿಯುತ್ತಿದ್ದೇವೆ ಎಂದು ಮತಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿತ್ತು.   

- Advertisement -

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಅವರು 663 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯದೀಶ ಹರೀಶ ಜಾಧವ ಅವರ ನ್ಯಾಯಾಲಯದಲ್ಲಿ 545 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮಹಾಂತೇಶ ಭೂಸಗೋಳ ಅವರ ನ್ಯಾಯಾಲಯದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಕರಣದಲ್ಲಿ ಒಟ್ಟು ರೂ 54 ಲಕ್ಷ ಸಾಲಕ್ಕೆ ರೂ. 17 ಲಕ್ಷಗಳಿಗೆ ರಾಜಿ ಸಂಧಾನ ಮಾಡಿಸಲಾಗಿದೆ. ಅಲ್ಲದೆ 658 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಿಳಿಸಿದರು. 

- Advertisement -

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ, ಆರ್.ವೈ. ಮೊಗಲಾಯಿ, ಮಲಘಾನ, ದಾನಪ್ಪಗೌಡ ಚೆನ್ನಗೊಂಡ, ಕುಮಾರ ಕುಂಬಾರ, ಎಂ.ಎಸ್.ಪಾಟೀಲ ಕೊರಳ್ಳಿ ಸೇರಿದಂತೆ ಹಲವಾರು ವಕೀಲರು ರಾಜಿ ಸಂಧಾನ ಪ್ರಕರಣಗಳಲ್ಲಿ ಬಾಗಿಯಾಗಿ ಇತ್ಯರ್ಥಗೊಳಿಸಲು ಸಹಕರಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group