- Advertisement -
ಸಿಂದಗಿ: ಇತ್ತಿಚೆಗೆ ಮರಗೂರ ಸಕ್ಕರೆ ಕಾರ್ಖಾನೆಯ ನಿರ್ದೆಶಕರ ಚುನಾವಣೆ ಜರುಗಿತು. ಸಿಂದಗಿ ತಾಲೂಕಿನ ಹೂನಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದರಾಮ ಪಾಟೀಲ ಅವರ ಧರ್ಮಪತ್ನಿ ಸರೋಜಿನಿ ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಯುವ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ, ಕಸಾಪ ಅಧ್ಯಕ್ಷ ಶಿವು ಬಡಾನುರ, ಎಂ.ಬಿ.ಯಡ್ರಾಮಿ, ರಮೇಶ ಯಾಳಗಿ, ಸಂಗನಗೌಡ ಪಾಟೀಲ ಅಗಸಬಾಳ, ದಾನಪ್ಪಗೌಡ ಚೆನ್ನಗೊಂಡ, ಶೇಖರಗೌಡ ಬಿರಾದಾರ ಬ್ಯಾಕೋಡ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಸೇರಿದಂತೆ ಅನೇಕರಿದ್ದರು.