spot_img
spot_img

ಧರ್ಮಟ್ಟಿಯಲ್ಲಿ ಏ.17 ರಿಂದ ವಿಜ್ಞಾನ ಬೇಸಿಗೆ ಶಿಬಿರ- ಬಸವರಾಜ ಭಜಂತ್ರಿ

Must Read

- Advertisement -

ಮೂಡಲಗಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಯಿಂದ  ಮೂಡಲಗಿ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಶ್ರಯದಲ್ಲಿ ತಾಲೂಕಿನ ಧರ್ಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಏ.೧೭ ರಿಂದ ೧೯ರವರೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಜ್ಞಾನ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಭಜಂತ್ರಿ ತಿಳಿಸಿದ್ದರು.

ರವಿವಾರಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಬಗ್ಗೆ ಮಾಹಿತಿ ನೀಡಿದ ಅವರು, ಏ.17 ರಂದು ಮುಂಜಾನೆ ಧ್ವಜಾರೋಹಣ, ಯೋಗಾಸನ ಹಾಗೂ 10ಕ್ಕೆ ಜರುಗುವ ಸಮಾರಂಭವನ್ನು ಸುಣಧೋಳಿಯ ಶಿವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಬಿಇಒ ಅಜೀತ ಮನ್ನಿಕೇರಿ ಅಧ್ಯಕ್ಷತೆ ವಹಿಸುವರು. ಖಾನಟ್ಟಿ ಪ್ರೌಢ ಶಾಲೆಯ “ನೈರ್ಮಲ್ಯ ಹಾಗೂ ಆರೋಗ್ಯ” ಅಂತರ್ಜಾಲ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳು ಉದ್ಘಾಟಿಸುವರು.

ಏ.17, 18, 19 ರಂದು ಉಪನ್ಯಾಸಕರಿಂದ ವಿವಿಧ ಚಿಂತನ ಗೋಷ್ಠಿ ಜರುಗಲಿವೆ. ಏ.19 ರಂದು ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಬಸವರಾಜ ಭಜಂತ್ರಿ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ.ಲಕ್ಷ್ಮಣ ಚೌರಿ, ಪ್ರಾಚಾರ್ಯ ಜಯಾನಂದ ಮಾದರ ಬಡ್ಡಿ ಸೆಂಟ್ರಲ್ ಶಾಲೆಯ ಅಧ್ಯಕ್ಷ ಚನ್ನಬಸು ಬಡ್ಡಿ ಮತ್ತು  ಪ್ರಾಚಾರ್ಯ ಸಾಜು ರಾಜನ್ ಭಾಗವಹಿಸುವರು ಎಂದರು.

- Advertisement -

ಪ್ರತಿಕಾಗೋಷ್ಠಿಯಲ್ಲಿ ವಿಜ್ಞಾನ ಸಮಿತಿ ಉಪಾಧ್ಯಕ್ಷ ಡಾ. ಮಹಾದೇವ ಪೋತರಾಜ, ಸಹಕಾರ್ಯದರ್ಶಿ ರಾಜಶ್ರೀ ನಾಯಿಕ ಮತ್ತು ಕಾರ್ಯಕಾರಣಿ ಸದಸ್ಯೆ ಸರಳಾ ಬಾಂಡೆ ಉಪಸ್ಥಿತರಿದ್ದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group