- Advertisement -
ಮೂಡಲಗಿ – ತಾಲೂಕಿನ ಕುಲಗೋಡ ಗ್ರಾಮದ ನಾಯಕ ಸ್ಟುಡೆಂಟ್ ಫೆಡರೇಶನ್ ನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಉನ್ನತಿ ಸತೀಶ ಕುಂಬಾರ ಇವಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾಳೆ.
ಸಂಸ್ಥೆಯ ಅಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎ ಆರ್ ಪುಡಲಕಟ್ಟಿ ಮತ್ತು ಪ್ರಧಾನ ಗುರುಗಳು, ಸಿಬ್ಬಂದಿ ವರ್ಗದವರು ಬಾಲಕಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.