ಲಯನ್ಸ್ ಕ್ಲಬ್ ಪರಿವಾರಾದ ೧೦೦ನೇ ಅನ್ನದಾಸೋಹ
ಮೂಡಲಗಿ: ‘ಯಾವುದೇ ಫಲಾಪೇಕ್ಷೆ ಬಯಸದೆ ನಿಸ್ವಾರ್ಥದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯೆನಿಸುತ್ತದೆ’ ಎಂದು ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮಿಗಳು ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ ೧೦೦ನೇ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಸಿದವರಿಗೆ ಅನ್ನ ಹಾಕುವ ದಾಸೋಹ ಸೇವೆಯು ಪವಿತ್ರ ಸೇವೆಯಾಗಿದೆ ಎಂದರು.
ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಮನೋಜ ಮಾನೇಕ ಮಾತನಾಡಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನ್ನದಾಸೋಹವನ್ನು ನಡೆಸಿಕೊಂಡು ಬಂದಿರುವ ಮೂಡಲಗಿ ಲಯನ್ಸ್ ಕ್ಲಬ್‌ನ ಸಮಾಜ ಸೇವೆಯು ಮಾನವೀಯತೆಯನ್ನು ಬಿಂಬಿಸುತ್ತದೆ. ಇದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಅತಿಥಿಯಾಗಿ ರಕ್ಷಾ ಮನೋಜ ಮಾನೇಕ, ಲಯನ್ಸ್ ಕ್ಲಬ್ ಕ್ಯಾಬಿನೆಟ್ ಜಂಟಿ ಖಜಾಂಚಿ ಪ್ರಕಾಶ ಕುಲಕರ್ಣಿ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ, ಖಾಜಾಂಚಿ ಕೃಷ್ಣಾ ಕೆಂಪಸತ್ತಿ, ಅನ್ನ ದಾನಿಗಳಾಧ ಪುಲಕೇಶ ಸೋನವಾಲಕರ ಅತಿಥಿಯಾಗಿ ಭಾಗವಹಸಿದ್ದರು.
ಶ್ರೀಶೈಲ್ ಲೋಕನ್ನವರ, ಡಾ. ಎಸ್.ಎಸ್. ಪಾಟೀಲ, ಎನ್.ಟಿ. ಪಿರೋಜಿ, ಈರಣ್ಣ ಕೊಣ್ಣೂರ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಶಿವಾನಂದ ಕಿತ್ತೂರ, ಸುರೇಶ ದೇಸಾಯಿ, ಸಂದೀಪ ಸೋನವಾಲಕರ, ಡಾ. ಲಕ್ಷ್ಮಣ ಕಂಕಣವಾಡಿ, ಡಾ. ಪ್ರಶಾಂತ ಬಾಬನ್ನವರ, ಅಪ್ಪಣ್ಣ ಬಡಿಗೇರ ಇದ್ದರು.
೩೫೦ಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸಿದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.