spot_img
spot_img

ಸಿಂದಗಿ: ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Must Read

- Advertisement -

ಸಿಂದಗಿ: 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದರೂ ಕೂಡಾ ರಾಜ್ಯದ ಸುಗಮ ಕಾರ್ಯನಿರ್ವಹಣೆಗೆ  ಯಾವುದೇ ಪರಿಣಿತ ಮತ್ತು ರಾಜಕೀಯ ಅಧಿಕಾರವನ್ನು ಭಾರತ ಹೊಂದಿದ್ದಿಲ್ಲ. ಆ ಹೊತ್ತಿಗೆ, 1935 ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆಡಳಿತಕ್ಕೆ ತಿದ್ದುಪಡಿ ಮಾಡಲ್ಪಟ್ಟಿತು, 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವವೆನಿಸಿಕೊಂಡಿತು. ಅಲ್ಲಿಂದೀಚೆಗೆ ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಸಿಪಿಐ ಡಿ.ಹುಲುಗಪ್ಪ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡಿ, 299 ಸದಸ್ಯರನ್ನು ಹೊಂದಿರುವ ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಮೊದಲ ಸಭೆಯು ಡಿಸೆಂಬರ್ 1946 ರಲ್ಲಿ ಸಂವಿಧಾನ ಸಭೆಯನ್ನು ರಚಿಸಲಾಯಿತು. 2 ವರ್ಷ 11 ತಿಂಗಳು 18 ದಿನಗಳಲ್ಲಿ ಇದು ಅಂತಿಮವಾಗಿ 26 ನವೆಂಬರ್ 1949 ರಂದು ಪೂರ್ಣಗೊಂಡಿತು. ಇದನ್ನು 26 ಜನವರಿ 1950 ರಂದು ದೇಶಾದ್ಯಂತ ಜಾರಿಗೆ ತರಲಾಯಿತು. ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು ಎಂದರು.

ಧ್ವಜಾರೋಹಣ ನೇರವೇರಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು ಸ್ವತಂತ್ರ ತಂದು ಕೊಟ್ಟ ಗಾಂಧೀಜಿ. ಸ್ವತಂತ್ರ ನಂತರ ನಮ್ಮ ವ್ಯವಸ್ಥೆಯ ಪರಿಕಲ್ಪನೆ ರೂಪಿಸಬೇಕು ಎಂದು ಡಾ. ಅಂಬೇಡ್ಕರರವರ ನೇತೃತ್ವದಲ್ಲಿ ಕರಡು ಸಮಿತಿ ರಚಿಸಿ ಸಂವಿಧಾನ ರಚಿಸಿದ ಈ ದಿನವಾದ ಪ್ರತಿಫಲವಾಗಿ ಇಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಭಾರತದ ಪ್ರಜೆಗಳನ್ನು ಆಳುವ -ಶಾಸಕಾಂಗ, ನ್ಯಾಯ ಒದಗಿಸುವ — ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು? ಯಾವೆಲ್ಲ ನೀತಿ ನಿಯಮಗಳನ್ನು ಕಟ್ಟಳೆಗಳನ್ನು ಅವರು ಪಾಲಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಬಾರಿ ಬರಗಾಲವೆಂದು ಘೋಷಣೆಯಾದ ಈ ಕ್ಷೇತ್ರದ 43823 ರೈತರಿಗೆ ಪರಿಹಾರಕ್ಕಾಗಿ ನೊಂದಣಿ ಮಾಡಲಾಗಿದೆ. ಪಹಣಿ ತತ್ರಾಂಶದಲ್ಲಿ ಪ್ರಥಮಸ್ಥಾನದಲ್ಲಿದೆ. ಹೊಬಳಿ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಪೈಕಿ ಪಹಣಿಯಲ್ಲಿ ಹಿಂದಿದೆ. ಕಂದಾಯ ಕಾರ್ಯಾಲಯದಲ್ಲಿ ಭಾಕಿ ಉಳಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಸಂವಿಧಾನದ ಮೂಲ ಆಶಯವನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.

- Advertisement -

ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ಮನಗೂಳಿ ಮಾತನಾಡಿ,  ನಮ್ಮ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾದರು ಕೂಡಾ ಇನ್ನೂ ಅಪೂರ್ಣವಾಗಿತ್ತು ಏಕೆಂದರೆ ಆ ಸಮಯದಲ್ಲಿ ನಮ್ಮ ದೇಶವು ಅನೇಕ ತುಂಡುಗಳಾಗಿ ವಿಭಜಿಸಲ್ಪಟ್ಟಿತು, ನಮ್ಮ ದೇಶಕ್ಕೆ ತನ್ನದೇ ಆದ ಯಾವುದೇ ಲಿಖಿತ ಸಂವಿಧಾನ ಇರಲಿಲ್ಲ. ವ್ಯಕ್ತಿಯಾಗಲಿ, ದೇಶವಾಗಲಿ ಶಿಸ್ತು ಇಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ವ್ಯವಸ್ಥೆ ಇದೆ, ಜನರೇ ಜನ. ಆದ್ದರಿಂದ, ನಮ್ಮ ದೇಶದ ವ್ಯವಸ್ಥೆ ಮತ್ತು ಸಂವಿಧಾನವನ್ನು ರಕ್ಷಿಸುವುದು ಮತ್ತು ಗೌರವಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಎಂದರು.

ಈ ಸಂದರ್ಭದಲ್ಲಿ ಕವಾಯತನಲ್ಲಿ ಬಾಗ ವಹಿಸಿದ ವಿವಿಧ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ವಿವಿಧ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮೇಲಿದ್ದರು.  

ತಾಪಂ ಇಓ ರಾಮು ಅಗ್ನಿ ಸ್ವಾಗತಿಸಿದರು. ದೈಹಿಕ ನಿರ್ದೇಶಕ ರವಿ ಗೋಲಾ ನಿರೂಪಿಸಿದರು. ಬಿಇಓ ಆರೀಫ್ ಬಿರಾದಾರ ವಂದಿಸಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group