spot_img
spot_img

ದ ಸಂ ಸ(ಅಂಬೇಡ್ಕರವಾದ) ಸಿಂದಗಿ ಹಾಗೂ ಆಲಮೇಲ ತಾಲೂಕುಗಳ ಪದಾಧಿಕಾರಿಗಳ ಆಯ್ಕೆ

Must Read

- Advertisement -

ಸಿಂದಗಿ : ಪಟ್ಟಣದ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಸಿಂದಗಿ ಹಾಗೂ ಆಲಮೇಲ ತಾಲೂಕುಗಳ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಪ್ರಧಾನ ಸಂಚಾಲಕ ಸಂಜು .ವಾಯ್. ಕಂಬಾಗಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಸಂಜು .ವಾಯ್. ಕಂಬಾಗಿ ಮಾತನಾಡಿ, ನೂತನವಾಗಿ ಆಯ್ಕೆಯಾದ ಪ್ರಧಾನ ಸಂಚಾಲಕರು ಹಾಗೂ ಸಹ ಸಂಚಾಲಕರಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ ರವರು ಹೇಳಿದ ತತ್ವಸಿದ್ಧಾಂತ ಮತ್ತು ಅವರ ಆಶಯಂತೆ ಕ್ರಾಂತಿಯ ಹೋರಾಟದ ತೇರನ್ನು ತಂದು ಬಿಟ್ಟಿದ್ದೇನೆ ಅದನ್ನು ಮುಂದಕ್ಕೆ ಎಳೆಯುವ ಕೆಲಸವಾಗಬೇಕು. ಇದು ಸಾಧ್ಯವಾಗದೇ ಹೋದಲ್ಲಿ ಅದನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಎಳೆಯಬೇಡಿ. ಮತ್ತು ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕರದ ಮಾವಳ್ಳಿ ಶಂಕರ ಅಣ್ಣಾವರ ಆಸೆಯಂತೆ ನೂತನ ಪದಾಧಿಕಾರಿಗಳು ತಾಲೂಕಿನಾದ್ಯಾಂತ ಸಂಚರಿಸಿ ಪ್ರತಿಯೊಬ್ಬ ಬಡವ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ, ದೀನ ದಲಿತರ ಪರವಾಗಿ ದ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಿವುಕುಮಾರ ಮೇಲಿನಮನಿ, ಶಿವು ಬಡಿಗೇರ, ಶಂಕರ ಚಲವಾದಿ, ಸಿದ್ದು ಪೂಜಾರಿ, ಶಶಿಧರ ನಾಯ್ಕೋಡಿ, ಅಶೋಕ ಭಜಂತ್ರಿ, ಗಣೇಶ ಅಣ್ಣೇನವರ ಸೇರಿದಂತೆ ಇತರರು ಮಾತನಾಡಿದರು.

- Advertisement -

ಈ ವೇಳೆ ವಿಜಯಪುರ ನಗರ ಘಟಕದ ಪ್ರಧಾನ ಸಂಚಾಲಕ ಶಂಕರ .ಎಚ್. ಚಲವಾದಿ, ನಿಕಟಪೂರ್ವ ಸಿಂದಗಿ ತಾಲೂಕ ಅಧ್ಯಕ್ಷ ಶಿವಕುಮಾರ ಮೇಲಿನಮನಿ, ಜಿಲ್ಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಸುಜಾತ ವಗ್ಗರ, ಸಿಂದಗಿ ತಾಲೂಕ ಸಹ ಸಂಚಾಲಕ ಶಿವು ಬಡಿಗೇರ, ಸಂತೋಷ ಭಾಸ್ಕರ, ಯಲ್ಲಪ್ಪ ಮಿರಗಿ, ಅಶೋಕ ಭಜಂತ್ರಿ, ಪರಶುರಾಮ ನಾಲ್ಕಮಾನ, ಶಿವಕುಮಾರ ಶರ್ಮಾ, ಏಕನಾಥ ಕಟ್ಟಿಮನಿ, ಆಶೀಫ್ ಮುಲ್ಲಾ, ಶಶಿಧರ ನಾಯ್ಕೋಡಿ, ಚಿದಾನಂದ ಕಾಂಬಳೆ, ಗಣೇಶ, ಈಶ್ವರ, ಹುಚ್ಚು ಸಿಂಗೆ, ಸಂಜು ಇಟಗಾರ, ಪ್ರಕಾಶ ಬ್ಯಾಕೋಡ, ನವೀನ ವಗ್ಗಿ, ರಾಜು ಮಾಡಬಾಳ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಸಿಂದಗಿ ಹಾಗೂ ಆಲಮೇಲ ತಾಲೂಕುಗಳ ನೂತನ ಪದಾಧಿಕಾರಿಗಳಾಗಿ ಪ್ರಧಾನ ಸಂಚಾಲಕರಾಗಿ ಸಿದ್ದು ಪೂಜಾರಿ, ಸಂಘಟನಾ ಸಂಚಾಲಕ ಸಂತೋಷ ಭಾಸ್ಕರ, ಖಜಾಂಚಿ ಶಿವು ಬಡಿಗೇರ, ಸಹ ಸಂಚಾಲಕರಾಗಿ ಯಲ್ಲು ಮಿರಗಿ, ಪರಶುರಾಮ ನಾಲ್ಕಮಾನ, ಶಿವಕುಮಾರ ಶರ್ಮಾ, ಏಕನಾಥ ಕಟ್ಟಿಮನಿ, ಅಶೋಕ ಭಜಂತ್ರಿ, ಆಸೀಫ್ ಮುಲ್ಲಾ, ಆಯ್ಕೆಯಾಗಿದ್ದರೆ. ಪ್ರಧಾನ ಸಂಚಾಲಕರಾಗಿ ಶಶಿಧರ ನಾಯ್ಕೋಡಿ, ಸಂಘಟನಾ ಸಂಚಾಲಕರಾಗಿ ಈಶ್ವರ ಮಣಗೀರಿ, ಖಜಾಂಚಿ ಗಣೇಶ ಅಣ್ಣೇನವರ, ಸಹ ಸಂಚಾಲಕರಾಗಿ ಚಿದಾನಂದ ಕಾಂಬಳೆ, ಹುಚ್ಚು ಸಿಂಗೆ, ಸಂಜು ಇಟಗಾರ,ಪ್ರಕಾಶ ಬ್ಯಾಕೋಡ, ಖಾಜು ಹಳಿಮನಿ, ಪರಶುರಾಮ ಹೊಸಮನಿ ಆಯ್ಕೆಯಾಗಿದ್ದಾರೆ

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group