Sindagi: ಸ್ವಹಿತಾಸಕ್ತಿಗಾಗಿ ಮಹಾ ಘಟಬಂಧನ – ಈರಣ್ಣ ರಾವೂರ

Must Read

ಸಿಂದಗಿ: ದೇಶದ ಹಿತವನ್ನು ಬಯಸದೇ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಒಬ್ಬ ದೇಶಭಕ್ತ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ವಿರೋಧಿಗಳು ಮಹಾಘಟಬಂಧನ್ ರಚಿಸಿಕೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವುರ ಕಿಡಿಕಾರಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಜನತೆಗೆ ತಿಳಿಸಿ, ಅವರೆಲ್ಲ ಕೇವಲ ಫೊಟೋ ಶೂಟ್‌ಗಾಗಿ ಒಂದೆಡೆ ಸೇರಿ ಎರಡು ದಿನದ ಟ್ರಿಪ್‌ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಇವರಿಗೆ ಯಾವುದೇ ಸಿದ್ಧಾಂತಗಳಿಲ್ಲ ಕೇವಲ, ಮೋದಿ ವಿರೋಧಿಸುವುದೆ ಇವರ ಸಿದ್ಧಾಂತ ಎಂದು ಮಹಾಘಟಬಂಧನವನ್ನು ಟೀಕಿಸಿದರು.

ಮೋದಿಯವರು 3 ನೇ ಬಾರಿಗೆ ಪ್ರಧಾನಿಯಾಗುವದು ಶತಸಿದ್ಧ ಏಕೆಂದರೆ ಇಡಿ ಜಗತ್ತಿನ ಎಲ್ಲ ದೇಶಗಳು ಮೋದಿಯೇ ವಿಶ್ವನಾಯಕನೇಂದು ಹೇಳುತ್ತಿವೆ. ಭಾರತವನ್ನು ವಿಶ್ವಗುರುವಾಗಿಸಲು ದೇಶದ ಜನತೆ ಈಗಾಗಲೆ ತೀರ್ಮಾನಿಸಿದ್ದಾರೆ. 2024 ಕ್ಕೆ ಮಗದೊಮ್ಮೆ ಮೋದಿಜಿಯೇ ದೇಶದ ಪ್ರಧಾನಿ ಇದನ್ನು ಯಾರಿಂದಲೂ

ತಪ್ಪಿಸಲು ಸಾಧ್ಯವಿಲ್ಲ. ಕೇವಲ ಅಧಿಕಾರದ ಆಸೆಗಾಗಿ ತಮ್ಮ ಸಿದ್ಧಾಂತಗಳನ್ನು ಗಾಳಿಗೆ ತೂರಿ ಒಂದಾಗುವುದನ್ನು ನೋಡಿದರೆ ಇವರಿಗೆ ದೇಶಕ್ಕಿಂತ ಅಧಿಕಾರ ಮುಖ್ಯ ಎನಿಸುತ್ತದೆ ಎಂದು ರಾವೂರ ಹರಿ ಹಾಯ್ದಿದಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group