ಸಿಂದಗಿ: ಪಟ್ಟಣದ ಹರಿಜನ ಕೇರಿಗೆ ಹೊಂದಿಕೊಂಡ ನಿಯೋಜಿತ ಮಾರುಕಟ್ಟೆ ರದ್ದು ಪಡಿಸುವಂತೆ ಆಗ್ರಹಿಸಿ ಡಾ. ಬಿ.ಆರ್.ಅಂಬೇಡ್ಕರ ಸಮಾಜ ವಿಕಾಸ ಸಂಸ್ಥೆಯ ( ಜೈಭೀಮ ನಗರ) ಪದಾಧಿಕಾರಿಗಳು ತಹಶೀಲ್ದಾರ ಇಲಾಖೆಯ ಶಿರಸ್ತೆದಾರ ಶ್ರೀಮತಿ ಚವ್ಹಾಣ ಅವರ ಮೂಲಕ ಇಂಡಿ ಎಸಿ, ಸಿಪಿಐ ಸಿಂದಗಿ, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಹಳೇ ಟಿಡಿಬಿ ಗೆಷ್ಟಹೌಸಗೆ ಹೊಂದಿಕೊಂಡಿರುವ ಆಸ್ತಿ ನಂ 951/1/ಅ ಇದಕ್ಕೆ ಹೊಂದಿಕೊಂಡು ಹರಿಜನ ಕೇರಿ ಇದ್ದು ಇತ್ತಿತ್ತಲಾಗಿ ನಿಯೋಜಿತ ತರಕಾರಿ-ಹಣ್ಣು ಹಂಪಲ ಸಂತೆ ಕಟ್ಟೆ ಅಂತಾ ಅನಧಿಕೃತವಾಗಿ ಸಂತೆ ಮಾಡುತ್ತಿದ್ದು ಇದರಿಂದ ಕೇರಿಯ ಜನರ ನೆಮ್ಮದಿ, ನಿದ್ದೆ ಹಾಳು ಮಾಡಿದೆ ರಾತ್ರಿ ಹಗಲು ಎನ್ನದೇ ಕೂಗಾಟ ವಿರಾಟ ಭಾರೀ ವಾಹನಗಳ ಸದ್ದು ರಾತ್ರಿ ಹೊತ್ತು ಬಿಲ್ಡಿಂಗ ಕೆಡುವುದರಿಂದ ಕೇರಿಯ ಮಕ್ಕಳ ಓದುವುದಕ್ಕೆ ತೊಂದರೆ ಉಂಟು ಮಾಡುತ್ತಿದೆ ಮತ್ತು ವೃದ್ಧರು, ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಹೊರಗಡೆ ಬರದಂತೆ ಸ್ಥಿತಿ ಉಂಟಾಗಿದೆ.
ಸಂತೆಕಟ್ಟೆಯಿಂದ ಕೊಳೆತ ಹಣ್ಣಿನ ದುರ್ವಾಸನೆ, ಉಳಿದ ತರಕಾರಿ ಅಲ್ಲೆ ಬಿಸಾಕುವುದರಿಂದ ಅದರಿಂದ ಬರುವ ದುರ್ವಾಸನೆ ಯಿಂದ ಅನೇಕ ರೋಗಗಳ ತಾಣವಾಗಿ ನಿರ್ಮಾಣವಾಗುತ್ತಿದೆ ಕಾರಣ ಅನಧಿಕೃತವಾಗಿ ನಡೆಸುತ್ತಿರುವ ಸಂತೆಕಟ್ಟೆಯನ್ನು ರದ್ದುಗೊಳಿಸಿ ಕೇರಿಯ ನೆಮ್ಮದಿಯ ಬದುಕಿಗೆ ಸಹಕಾರ ನೀಡಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಇಲಾಖೆಗಳೆ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ಮಾನಿಂಗ ಪೂಜಾರಿ, ಶರಣಪ್ಪ ಸುಲ್ಪಿ, ಶಿವಾನಂದ ಕಾಂಬಳೆ, ವಿಠ್ಠಲ ಅಂಕಲಗಿ, ಚಂದ್ರಕಾಂತ ಜಾಬನವರ, ಶಿವಪ್ಪ ಸುಲ್ಪಿ, ಮನ್ನಪ್ಪ ಸುಲ್ಪಿ, ಬಾಸ್ಕರ ಪೂಜಾರಿ, ನಿಂಗಪ್ಪ ಸುಲ್ಪಿ, ಬಸಪ್ಪ ಕೂಚಬಾಳ, ಪ್ರಕಾಶ ಸುಲ್ಪಿ, ಶಿವಪ್ಪ ಕೊಳರಗಿ, ಪ್ರಕಾಶ ಮ್ಯಾಕೇರಿ, ಕೃಷ್ಣಾ ಡೋಣೂರ, ಹಣಮಂತ ಸುಲ್ಪಿ, ಮಹಾದೇವಪ್ಪ ಬರಗಾಲ, ಮರೇಪ್ಪ ಬರಗಾಳ, ಚಂದಪ್ಪ ಬರಗಾಲ, ಚಂದಪ್ಪ ಸರವಂದಿ, ಸಿದ್ದಪ್ಪ ಗೊರಗುಂಡಗಿ, ಬಸಪ್ಪ ಡೋಣೂರ, ಮಲ್ಲಪ್ಪ ಸುಲ್ಪಿ, ಅಶೋಕ ಸುಲ್ಪಿ, ಶಕೇಲಾ ರಿಸಾಲ್ದಾರ, ಶಿವಶರಣಪ್ಪ ಬಿಸನಾಳ, ಮಾದೇವ ಕೂಚಬಾಳ, ಹುಚ್ಚಪ್ಪ ಬಿಸನಾಳ, ಮಲಕಪ್ಪ ಮಾಣಸುಣಗಿ, ಮಲ್ಲಿಕಾರ್ಜುನ ಕೂಚಬಾಳ, ಮಿಲನ ಮಣೂರ ಸೇರಿದಂತೆ ಅನೇಕರಿದ್ದರು.