ಸಿಂದಗಿ: ಇಂದು ಸರಕಾರಿ ಶಾಲೆಗಳಿಗೆ ನಿರ್ವಹಣೆಯ ಕೊರತೆಯಿಂದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಬಡ ಮತ್ತು ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಸರಕಾರ ಬದ್ಧವಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ವಿದ್ಯಾನಗರ ನಂ.4 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2022-23ನೇ ಸಾಲೀನ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ರೂ. 15 ಲಕ್ಷ ವೆಚ್ಚದಲ್ಲಿ ಶಾಲಾ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಹೊಸ ಕಟ್ಟಡ ಕಾಮಗಾರಿಗೆ ಅನುದಾನದ ಕೊರತೆಯಿದ್ದು ಇದ್ದ ಕಟ್ಟಡವನ್ನು ದುರಸ್ತಿ ಮಾಡಿ ಮಳೆಗಾಲದಲ್ಲಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಲಾಗಿದೆ ಅಲ್ಲದೆ ಶಾಲೆಯ ಒಳಾಂಗಣದಲ್ಲಿ ಗಟ್ಟು ಜೋಡಣೆ ಮಾಡುವುದರಿಂದ ಮಕ್ಕಳು ಗಿಡದ ನೆರಳಲ್ಲಿ ಊಟ ಮಾಡಲು ಅನುಕೂಲವಾಗುತ್ತದೆ ಕಾರಣ ಅಚ್ಚುಕಟ್ಟ ಕಾಮಗಾರಿಗೆ ಆಗಲು ಶಾಲಾ ಸಿಬ್ಬಂದಿ ಮತ್ತು ಸಾರ್ವಜನಿಕರು ಸಹಕಾರ ನೀಡಿ ಎಂದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಸೋಮನಗೌಡ ಬಿರಾದಾರ, ಗುರುಗೌಡ ಬಿರಾದಾರ, ಮಲ್ಲನಗೌಡ ಪಾಟೀಲ ಬ್ಯಾಕೋಡ, ಪುರಸಭೆ ಸದಸ್ಯೆ ಪ್ರತಿಬಾ ಕಲ್ಲೂರ, ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ಸಿದ್ದಬಸವ ಕುಂಬಾರ, ಸಾಹೇಬಗೌಡ ಪಾಟೀಲ, ಶರಣಬಸು ಲಂಗೋಟಿ, ರಾಚಪ್ಪ ಮೇಟಿ, ಶಾಲಾ ಮುಖ್ಯಗುರುಮಾತೆ ಶ್ರೀಮತಿ ಆರ್.ಎಸ್.ಸಿಂದಗಿ, ಶಿಕ್ಷಕರಾದ ಬಸವರಾಜ ಸೊಮಾಪೂರ, ನವೀನ ಕುಲಕರ್ಣಿ, ಬಿಆರ್ಪಿ ವೈ.ಎನ್. ಬಿರಾದಾರ, ಮೊರಟಗಿ ಸಿಆರ್ಪಿ ರವಿ ಬಿರಾದಾರ, ಪಿಕೆಪಿಎಸ್ ಕಾರ್ಯದರ್ಶಿ ಶೇಖರಗೌಡ ಬಿರಾದಾರ ಬ್ಯಾಕೋಡ ಸೇರಿದಂತೆ ಅನೇಕರು ಇದ್ದರು.