spot_img
spot_img

ಸಿಂದಗಿ: ಚುನಾವಣೆ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ

Must Read

- Advertisement -

ಸಿಂದಗಿ: 33 ವಿಧಾನ ಸಭಾ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಅಂತರ ಜಿಲ್ಲೆಯಿಂದ ಬರುವ ವಾಹನಗಳಲ್ಲಿ ಅಕ್ರಮ ವಸ್ತುಗಳನ್ನು ಸಾಗಿಸದಂತೆ ಮತಕ್ಷೇತ್ರದಲ್ಲಿ ಮೋರಟಗಿ, ದೇವಣಗಾಂವ, ಮತ್ತು ಗೋಲಗೇರಿ ಗ್ರಾಮಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ತಿಳಿಸಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 33 ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಮಾ 29 ರಿಂದಲೇ ಅಧಿಸೂಚನೆ ಹೊರಡಿಸಲಾಗಿದ್ದು ಏ 13ರಿಂದ 20ರವರೆಗೆ ನಾಮಪತ್ರ ಸಲ್ಲಿಸುವುದು. 21ರಂದು ನಾಮಪತ್ರ ಪರಿಶೀಲನೆ, 24 ರಂದು ನಾಮಪತ್ರ ಹಿಂಪಡೆಯುವುದು, ಮೇ 10 ರಂದು ಮತದಾನ, 13 ರಂದು ಮತ ಎಣಿಕೆ ಫಲಿತಾಂಶ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮತಕ್ಷೇತ್ರದಲ್ಲಿ 119950 ಪುರುಷ, 111789 ಮಹಿಳೆಯರು ಹಾಗೂ ತೃತೀಯ ಲಿಂಗಿ 27 ಸೇರಿ ಒಟ್ಟು 231766 ಮತದಾರರಿದ್ದಾರೆ ಪಟ್ಟಣ ಪ್ರದೇಶದಲ್ಲಿ 47, ಗ್ರಾಮೀಣ ಪ್ರದೇಶದಲ್ಲಿ 224 ಮತಗಟ್ಟೆಗಳಿವೆ. ಇದರಲ್ಲಿ ಇಂಡಿ ತಾಲೂಕಿನ 16 ಮತಗಟ್ಟೆಗಳು ಅಳವಡಿಕೆಯಾಗುತ್ತವೆ. 17 ಸೂಕ್ಷ್ಮ, 7 ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ. 

ಮನೆಯಿಂದಲೇ ಮತದಾನಕ್ಕೆ ಅವಕಾಶ:       

ಚುನಾವಣಾ ಆಯೋಗವು ಈ ಬಾರಿ ಹಿರಿಯ ನಾಗರಿಕರು, ವಿಕಲಚೇತನರು, ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು, ಕೋವಿಡ್ ಸೋಂಕಿತ ಗೈರು ಮತದಾರಿಗೆ ಅಂಚೆ ಮೇಲಿರುವ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ. 4789 ಯುವಕರು ಪ್ರಪ್ರಥಮ ಬಾರಿಗೆ ಮತದಾನ ಮಾಡುವ ಮತದಾರರಿದ್ದಾರೆ.

- Advertisement -

150 ಜನರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 3461 ಜನ 80 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದ ವೃದ್ಧರು, 2551 ವಿಕಲಚೇತನರು ಇದರಲ್ಲಿ 1542 ಪುರುಷ, 1009 ಮಹಿಳಾ ವಿಕಲಚೇತನರಿದ್ದಾರೆ, ಇವರನ್ನು ಮತದಾನಕ್ಕೆ ಮನವೊಲಿಸಲಾಗುವುದು.

27 ಜನ ತರಬೇತಿದಾರರು ಸಿಯು, ಬಿಯು ತಂಡವು ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಯಶಸ್ವಿಯಾಗಿದೆ. 9 ಜನ ಫ್ಲೈಯಿಂಗ್ ಸ್ಕ್ವಾಡ್, 9 ಎಸ್‍ಎಸ್‍ಟಿ ಟೀಮ್, 1 ವಿಡಿಯೋ ವೀಕ್ಷಣಾ ತಂಡ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಸಹಾಯಕ ಚುನಾವಣಾಧಿಕಾರಿ ವ ಸಿಪಿಐ ಡಿ.ಹುಲಿಗೆಪ್ಪ ಮಾತನಾಡಿ, ದಾಖಲೆಯಿಲ್ಲದೇ ಹಣ ತೆಗೆದುಕೊಂಡು ಹೋಗುವ ರೂ 9 ಲಕ್ಷದ ಮೌಲ್ಯದ 2 ಪ್ರಕರಣಗಳು, ಸೀರೆ ಮತ್ತು ಬಟ್ಟೆ ಸಾಗಿಸುವ 2 ಲಕ್ಷ ಮೌಲ್ಯದ 2 ಪ್ರಕರಣಗಳು, ಬಂಗಾರ, ಬೆಳ್ಳಿ  1 ಪ್ರಕರಣ ಅಬಕಾರಿ 6 ಪ್ರಕರಣದಲ್ಲಿ 2 ವಾಹನ ಸೇರಿ ಒಟ್ಟು 2129516 ವಶಕ್ಕೆ ಪಡೆದುಕೊಳ್ಳಲಾಗಿದೆ ಅಲ್ಲದೆ ಶಸಸ್ತ್ರ ಸೇವಾ ತಂಡ ಸೇರಿದಂತೆ 3 ಕಂಪನಿ ಸಶಸ್ತ್ರ ಪಡೆಗಳು ಕಾರ್ಯನಿರ್ವಹಿಸಲು ಆಗಮಿಸುತ್ತಿವೆ ಮತ್ತು ಗ್ರಾಮೀಣ ಬಾಗದಲ್ಲಿ ಪೊಲೀಸ ಸಿಬ್ಬಂದಿ ಕಾರ್ಯ ಚುರುಕು ಗೊಳಿಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ, ಆಲಮೇಲ ತಹಶೀಲ್ದಾರ ಸುರೇಶ ಚವಲಾರ, ಗ್ರೇಡ್ ತಹಶೀಲ್ದಾರ ಪ್ರಕಾಶ ಸಿಂದಗಿ, ಎಸ್.ಕೆ ಗುಗ್ಗರಿ ಇದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group