spot_img
spot_img

ಸಿಂದಗಿ; ಮತ್ತೆ ಇಬ್ಬರು ಕಾಂಗ್ರೆಸ್ ಗೆ ಸೇರ್ಪಡೆ

Must Read

- Advertisement -

ಸಿಂದಗಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ರಂಗೇರುತ್ತಿದ್ದು ರಾಷ್ಟ್ರೀಯ ಪಕ್ಷಗಳ ಘಟಾನುಘಟಿಗಳು ಟಿಕೆಟ್ ವಂಚನೆಯಿಂದ ಪಕ್ಷದಿಂದ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದರೆ ಇತ್ತ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿರುವುದು ಹೊಸ ಸಂಚಲನ ಮೂಡಿಸಿದೆ.

ಹೌದು, ಕಳೆದ 14 ತಿಂಗಳ ಹಿಂದಷ್ಟೆ  ಈ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ನಡೆದಿದ್ದು ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು ಅಲ್ಲದೆ ಬಿಜೆಪಿ ಗೆಲುವು ಕೂಡಾ ಸಾಧಿಸಿತ್ತು ನಂತರ ಅದೆ ಗೆಲುವಿನ ನಗೆ ಬಿರಬೇಕೆನ್ನುವ ಮಹದಾಸೆಯಲ್ಲಿದ್ದ ಬಿಜೆಪಿ ಪಕ್ಷಕ್ಕೆ ಒಂದರಮೇಲೊಂದು ನಾಯಕರುಗಳು ರಾಜೀನಾಮೆ ನೀಡುತ್ತಾ ಶಾಕ್ ನೀಡುತ್ತಿದ್ದಾರೆ.

ರಾಜ್ಯದಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆಯಿಂದ ಸಿಂದಗಿ ಕ್ಷೇತ್ರದಲ್ಲಿಯೂ ಪಕ್ಷಾಂತರ ಪರ್ವ ಅಬ್ಬರ ಅಚ್ಚರಿ ಮೂಡಿಸಿದೆ. ಮೊನ್ನೆ ಅಷ್ಟೆ ಆಲಮೇಲ ಪಟ್ಟಣದ ಯುವ ಮುಖಂಡ ಶಶಿಧರ ಗಣಿಯಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಈಗ ಮತ್ತೊಂದು ವಿಕೆಟ್ ಪತನವಾಗಿದೆ. ಸಿಂದಗಿ ಪಟ್ಟಣದ ವಾರ್ಡ್ 12 ರ ಬಿಜೆಪಿ ಪ್ರಮುಖ ನಾಯಕರಾದ ಗುರುಪ್ರಸಾದ ಮಣೂರ ಅವರು  ಕಾಂಗ್ರೆಸ್ ಪಕ್ಷದ ಪುರಸಭೆಯ ಸದ್ಯಸರಾದ  ಸಂದೀಪ್ ಚೌರ ಹಾಗೂ ರಜತ್ ತಾಂಬೆ ಅವರ ನೇತೃತ್ವದಲ್ಲಿ  ಹಲವಾರು ಯುವಕರೊಂದಿಗೆ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿಗೆ  ಬೆಂಬಲ ಸೂಚಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು.

- Advertisement -

ಗುರುಪ್ರಸಾದ ಮಣೂರ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಮೂಲ ಕಾರ್ಯಕರ್ತರಿಗೆ ಮಣೆ ಹಾಕದೇ ಢಾಂಬಿಕ ಕಾರ್ಯಕರ್ತರು ಮಾತ್ರ ಬೆಲೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷವನ್ನು ಕೆಳಮಟ್ಟದಿಂದ ಕಟ್ಟುವುದು ನಾವು ಆಡಳಿತ ನಡೆಸುವರು ಬೇರೆಯವರು ಹೀಗೆ ನಮಗೆ ಪಕ್ಷದಲ್ಲಿ ಇರಲು ಮನಸ್ಸು ಒಪ್ಪಲಿಲ್ಲ ಅದೇ ರೀತಿ ಮನಗೂಳಿಯವರು ಯಾವಾಗ್ಗೆ ಆಯ್ಕೆಯಾಗಿದ್ದಾರೆ ಅವರಿಂದ ವಿನೂತನ ಕಾರ್ಯಕ್ರಮಗಳು ಹುಟ್ಟಿಕೊಂಡಿವೆ ವಿನಃ ಢಾಂಬಿಕ ಜೀವನ ನಡೆಸಿದಂತವರಲ್ಲ ಅದನ್ನು ಒಮ್ಮೆ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಪಕ್ಷ ಸೇರ್ಪಡೆಗೊಂಡಿರುವೆ ಎಂದರು.

ಈ ಬಾರಿ ಸಿಂದಗಿಯಲ್ಲಿ ಅಶೋಕ ಮನಗೂಳಿ ಪರ  ಆಸಕ್ತಿ ಹೆಚ್ಚಾಗುತ್ತಿದ್ದು ಬಿಜೆಪಿಯ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಸಹಸ್ರಾರು ಜನರ ತಂಡ ಹರಿದು ಬರುತ್ತಿದೆ  ಇದರಿಂದ ಈ ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್ ಪಕ್ಷದ್ದೆ ಆಗುತ್ತದೆ ಎನ್ನುವ ವಿಶ್ವಾಸದಲ್ಲಿ ಮುಳುಗಿದೆ ಜನತೆ.

ಈ ಸಂದರ್ಭದಲ್ಲಿ  ಡಾ ಸಂಧ್ಯಾ ಮನಗೂಳಿ, ನಾಗರತ್ನ ಮನಗೂಳಿ, ಪುರಸಭೆ ಸದಸ್ಯ ಶ್ರೀಶೈಲ  ಬಿರಗೊಂಡ, ಇರ್ಫಾನ್ ಭಗವಾನ್, ಕುಮಾರ್ ಬಗಲಿ, ಗೊಲ್ಲಾಳ ಬಿರಾದಾರ್, ಸಂತೋಷ, ಪರಮಾನಂದ, ಆಲಮೇಲ ಕಾಂಗ್ರೆಸ್ ಮುಖಂಡರಾದ ಜೈಭೀಮ ನಾಯ್ಕೋಡಿ,ಶಶಿಧರ ಗಣಿಯಾರ, ರವಿ ಪಾಟೀಲ, ಹಣಮಂತ ರಜಪೂತ್, ಶರಣು ಗುರಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group