spot_img
spot_img

ದಯಾಳು ಸಮಾಜ ಪ್ರವರ್ತಕ ಲಿಂಗೈಕ್ಯ ಶ್ರೀ ಶಿವಲಿಂಗರಾವ ದೇಶಮುಖ

Must Read

- Advertisement -

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಸಿದ್ಧಪ್ಪ. ಎಸ್. ಪಡನಾಡ ಅವರ ತಂದೆ ಲಿಂ. ಶರಣ ಸಂಗಪ್ಪ ದೂಳಪ್ಪ ಪಡನಾಡ ಹಾಗೂ ತಾಯಿ ಲಿಂ. ಶರಣೆ ಉಮ್ಮವ್ವಾ ಸಂಗಪ್ಪ ಪಡನಾಡ ಇವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸದ ಗೂಗಲ್ ಮೀಟ್ ಕಾರ್ಯಕ್ರಮ ನಡೆಯಿತು

ಶಿವಲಿಂಗರಾವ ದೇಶಮುಖ ಅವರು ಶೈಕ್ಷಣಿಕ ಹರಿಕಾರರು, ದಕ್ಷ, ಪ್ರಾಮಾಣಿಕ ಆಡಳಿತಗಾರರು ಎಂದು ಅವರ ಶ್ರೇಷ್ಠತೆಯನ್ನು ಹೇಳುತ್ತಾ ಸವಿತಾ ದೇಶಮುಖ ಅವರು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಬಿಜ್ಜಳನ ಆಸ್ಥಾನದಲ್ಲಿ ದೇಸಗತಿ ಮನೆತನವೆಂದೇ ಪ್ರಸಿದ್ದವಾಗಿದ್ದ ದೇಶಮುಖ ಮನೆತನ ಯಳಮಲಿ ಗ್ರಾಮದ ಹತ್ತಿರ 30 ಹಳ್ಳಿಗಳ ಒಡೆತನವನ್ನು ಹೊಂದಿತ್ತು.ಬ್ರಿಟಿಷ್ ಸರ್ಕಾರವಿದ್ದಾಗಲೂ ರಾಜ ಮಹಾರಾಜರ ಜೊತೆಗೆ ಇವರ ದೇಸಗತಿ ಮನೆತನಕ್ಕೂ ಬಹಳ ಪ್ರಾಮುಖ್ಯತೆಯಿತ್ತು ಎನ್ನುವುದನ್ನು ಹೇಳಿದರು.

- Advertisement -

ವಿಜಯಪುರ ಜಿಲ್ಲೆ ಕಂಡ ಶ್ರೇಷ್ಠ ಸಹಕಾರಿ ಧುರೀಣರಲ್ಲಿ ಶಿವಲಿಂಗರಾವ ದೇಶಮುಖರು ಒಬ್ಬರು. ಶ್ರೀಯುತರ ಸಹಕಾರಿ ಮನೋಭಾವದ ಪ್ರತೀಕವಾಗಿ ವಿಜಯಪುರ ಜಿಲ್ಲೆಯ ಸುಪ್ರಸಿದ್ಧ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. 1912 ರಲ್ಲಿ ರಾವ್ ಬಹಾದ್ದೂರ ಡಾ. ಫ. ಗು. ಹಳಕಟ್ಟಿ ಅವರು ಅಧ್ಯಕ್ಷರಾಗಿ ಹಾಗೂ ದಿವಾನ ಬಹಾದ್ದೂರ ಶಿವಲಿಂಗರಾವ್ ಜಗದೇವರಾವ ದೇಶಮುಖ ಇವರು ಗೌರವ ಸಂಘಟಿಕರಾಗಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ ನ್ನು ಸ್ಥಾಪನೆಗೈಯ್ದರು.  ದೇಶಮುಖರು ಬ್ಯಾಂಕಿನ ಷೇರಗಳನ್ನು ಪ್ರಥಮವಾಗಿ ಖರೀದಿಸಿ, ಇನ್ನಿತರರಿಗೆ ಮಾದರಿಯಾದರು
ಇಂತಹ ನಿಸ್ವಾರ್ಥ ಮನೋಭಾವದ ನಾಯಕರಿಂದ ಸ್ಥಾಪಿತಗೊಂಡ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ ಇಂದು ಹತ್ತಾರು ಶಾಖೆಗಳನ್ನು ಹೊಂದಿ ಆಗಸದೆತ್ತರಕ್ಕೆ ಬೆಳೆದು ನಿಂತಿದೆ ಎನ್ನುವುದನ್ನು ಸ್ಮರಿಸಿದರು.

1908 ರಲ್ಲಿ ಅಲಮೇಲ ಕೋ ಆಪರೇಟಿವ ಕ್ರೆಡಿಟ್ ಸೊಸೈಟಿಯನ್ನು  ಶಿವಲಿಂಗರಾವರು ಆರಂಭಿಸಿದರು. ವಿಜಯಪುರ ಜಿಲ್ಲೆಯ ಹಳ್ಳಿ ಪಟ್ಟಣಗಳನ್ನು ತಿರುಗಾಡಿ ಸಹಕಾರಿ ಸಂಘಗಳ ಮಹತ್ವವನ್ನು ಪ್ರತಿಪಾದಿಸಿದರು
1911ರಲ್ಲಿ ಅಲಮೇಲ, ವಿಭೂತಿಹಳ್ಳಿ ಮತ್ತು ಗುತ್ತರಗಿಗಳಲ್ಲಿ, ಕಾಳುಕಡ್ಡಿಗಳ ಬ್ಯಾಂಕ್ ಸ್ಥಾಪಿಸಿ, ರೈತರ ಪ್ರಗತಿಗೆ ಶ್ರಮಿಸಿದರು. ಸಹಕಾರಿ ಸಂಘದಲ್ಲಿ  ಶಿವಲಿಂಗ ರಾವ್ ದೇಶಮುಖರು ಸಲ್ಲಿಸಿದ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಸರ್ಕಾರವು ರಾವ್ ಸಾಹೇಬ್ ಎಂಬ ಪದವಿಯನ್ನು 1911 ರಲ್ಲಿ ಕೊಟ್ಟು ಗೌರವಿಸಿದರು ಎಂದು ನೆನಪು ಮಾಡಿಕೊಂಡರು.

ಇಂಗ್ಲಿಷ್ ಶಿಕ್ಷಣದ ಶ್ರೇಷ್ಠ ಅಭಿಮಾನಿ ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ  ಶಿವಲಿಂಗರಾವ್ ದೇಶಮುಖರು 1910 ರಲ್ಲಿ ವಿಜಯಪುರದ  ಜಮ್ಮಾ ಅವರ ಅಡತಿ ಅಂಗಡಿಯಲ್ಲಿ ಜಿಲ್ಲಾ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಈಗ ಈ ಸಂಸ್ಥೆಯು 96 ವರ್ಷಗಳ ಸುದೀರ್ಘ ಅವಧಿಯಲ್ಲಿ ಪ್ರೌಢಶಾಲೆಯಿಂದ ಆರಂಭಿಸಿ ಪದವಿಪೂರ್ವ ಪದವಿ ಉನ್ನತ ಶಿಕ್ಷಣ ವೃತ್ತಿ ಶಿಕ್ಷಣ ವೈದ್ಯಕೀಯ ಇಂಜಿನಿಯರಿಂಗ್ ಹೀಗೆ 80 ಅಂಗ ಸಂಸ್ಥೆಗಳನ್ನು ಹೊಂದಿ ಉತ್ತರ ಕರ್ನಾಟಕದ ಎತ್ತರದ ಶಿಕ್ಷಣ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶಿವಲಿಂಗರಾವ್ ದೇಶಮುಖರು ಹಾಗೂ ಫ.ಗು ಹಳಕಟ್ಟಿ ಅವರು ಸ್ಥಾಪಿಸಿದ ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯು ಮುಂದೆ ಬಂಥ ನಾಳ ಪೂಜ್ಯಶ್ರೀ ಸಂಗನ ಬಸವೇಶ್ವರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಹೊಂದಿ ಸಾರ್ವಜನಿಕ ಕ್ಷೇತ್ರ ದಲ್ಲಿ ಪ್ರಗತಿ ಪಥದತ್ತ ಸಾಗಿ ಬಂದಿದೆ

- Advertisement -

ಬಿ. ಎಂ ಪಾಟೀಲರ ತರುವಾಯ ಬಿ ಎಲ್ ಡಿ ಇ ಸಂಸ್ಥೆಯ ಜವಾಬ್ದಾರಿಯನ್ನು ದಿವಂಗತರ ಪುತ್ರ ಎಂ.ಬಿ ಪಾಟೀಲರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ಹಂಚಿಕೊಂಡರು.

ವಿಜಯಪುರ ಜಿಲ್ಲೆ ಕಂಡ ಅಪರೂಪದ ವತನದಾರರಾದ
ಶಿವಲಿಂಗ ದೇಶಮುಖ್ ಅವರು ಹಲವಾರು ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಜಯಪುರ ಜಿಲ್ಲೆಗೆ ಹಾಗೂ ಕನ್ನಡ ನಾಡಿಗೆ ಮಾದರಿಯ ವ್ಯಕ್ತಿಗಳಾಗಿದ್ದಾರೆ. ಅವರು ಕೈಕೊಂಡ ಘನ ಕಾರ್ಯಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.

1. ಸಹಕಾರಿ ಧುರೀಣರು
2. ಶೈಕ್ಷಣಿಕ ಸಂಸ್ಥೆಗಳ ರೂವಾರಿಗಳು
3. ಜಿಲ್ಲಾ ಸ್ಕೂಲ್ ಬೋರ್ಡ್ ನ ಚೇರ್ಮನ್ ರು
4. ಲೋಕಲ್ ಬೋರ್ಡ್ ನ ಅಧ್ಯಕ್ಷರು
5. ಗೌರವ ನ್ಯಾಯಾಧೀಶರಾಗಿದ್ದರು
6. ಹಡಗಿನಲ್ಲಿ ವಿದೇಶ ಪ್ರಯಾಣ

ಇತರ ಕಾರ್ಯಗಳು

1.. ನಲವತ್ತವಾಡ ವತನ ದಾರಿಕೆಯ ಸಂರಕ್ಷಣಾದಾರಿ
2.. ವನಿತಾ ಉತ್ಕರ್ಷ ಮಂಡಳಿ
3.. ದಕ್ಷಿಣ ಸರದಾರರ ದರ್ಬಾರಿಗೆ ಆಮಂತ್ರಣ ಪಡೆದದ್ದು
4.. ಹಂದಿಗನೂರು ಮಾಮ್ಲೆ ದೇಸಾಯಿ ಶಿಷ್ಯವೇತನ
5.. ಅಲಮೇಲ ದೇಶಮುಖ್ ಧರ್ಮಸ್ಥಳ ವಿಶ್ವಸ್ಥ ಮಂಡಳಿ
6.. ವೀರಶೈವ ಮಹಾಸಭೆಯ ಜಿಲ್ಲಾ ಸಂಘಟಕ
7.. ವಿಜಯಪುರದಲ್ಲಿ ಸ್ವಾತಂತ್ರ್ಯೋತ್ಸವ

ಇದರ ಜೊತೆಗೆ ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ಶಿಸ್ತು, ಸೈನ್ಯ ಕಟ್ಟುವ ಒಳ ಉದ್ದೇಶದೊಂದಿಗೆ ಸ್ಕೌಟ್ ಮತ್ತು ಗೈಡ್ ಸಂಘಟನೆಯನ್ನು ಮೊದಲ ಬಾರಿ ವಿಜಯಪುರದಲ್ಲಿ ಸ್ಥಾಪಿಸಿ,ಅದಕ್ಕೆ ಗಟ್ಟಿಮುಟ್ಟಾದ ಕಲ್ಲಿನ ಕಟ್ಟಡವನ್ನು ನಿರ್ಮಿಸಿದ ಖ್ಯಾತಿ ದೇಶಮುಖ ಅವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ, ತಮ್ಮ ದೇಶಮುಖ ಅವರ ಮನೆತನದಲ್ಲಿ ಜಗುಲಿ ಇಲ್ಲ, ಅಡಕಲು ಗಡಿಗೆ ಏರಿಸುವುದಿಲ್ಲ, ಉಡದಾರ ಧರಿಸುವುದಿಲ್ಲ.. ಎನ್ನುವ ಪದ್ಧತಿಯೊಂದಿಗೆ ಅದರ ಕಾರಣಗಳನ್ನೂ ಸಹ ತಿಳಿಸುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

ಡಾ. ಸುಧಾ ಕೌಜಗೇರಿ ಅವರು, ದೇಶಮುಖ ಅವರು ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ಭಾಷೆಗೂ ಸಹ ಮಹತ್ವ ಕೊಟ್ಟಿದ್ದು, ಅವರ ಮನೆತನದ ಅಸಂಗ್ರಹ ಧೋರಣೆ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎನ್ನುವ ತತ್ವವನ್ನು ಪ್ರತಿಪಾದಿಸಿದ್ದು,ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ದೇವರು ನೆಲೆಸಿರುತ್ತಾನೆ ಎನ್ನುವ ಅವರ ನಂಬಿಕೆ, ಸಹಕಾರಿ ಸಂಘಗಳ ಮಹತ್ವವನ್ನು ಪ್ರಚಾರ ಮಾಡಿದ್ದು, ಮಹಿಳೆಯರಿಗೆ ಕೊಟ್ಟ ವಿಶೇಷ ಪ್ರಾಧಾನ್ಯತೆ, ಹಂದಿಗನೂರು ದೇಸಾಯಿಯವರ ವತನದಾರಿಕೆಯ ಸಂರಕ್ಷಣೆ, ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ದಾನ -ಧರ್ಮ, ತಾಯಿಯ ಹೆಸರಿನಲ್ಲಿ ಶಾಲೆ, ಹಲವು ಹಳ್ಳಿಗಳಲ್ಲಿ ನಡೆಯುವ ಜಾತ್ರೆ…ಹೀಗೆ ದೇಶಮುಖ ಅವರ ಬಗೆಗೆ ಸವಿತಾ ದೇಶಮುಖ ಅವರು ಹೇಳಿದ ಮಾತುಗಳನ್ನು ಅತ್ಯಂತ ಅಭಿಮಾನದಿಂದ ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಇನ್ನೊಮ್ಮೆ ಮೆಲುಕು ಹಾಕಿದರು.

ಡಾ. ಶಶಿಕಾಂತ ಪಟ್ಟಣ ಅವರು ಜಯದೇವರು ಮತ್ತು ಮಲ್ಲಿಬೊಮ್ಮಯ್ಯ ಅವರ ಬಗೆಗೆ ಇನ್ನೊಮ್ಮೆ ನಮಗೆಲ್ಲ ನೆನಪುಮಾಡಿಕೊಡುತ್ತ, ದೇಶಮುಖ ಅವರು BLDE ಸಂಸ್ಥೆ ಕಟ್ಟುವಲ್ಲಿ ಆರ್ಥಿಕ ಭದ್ರತೆ ಒದಗಿಸಿದ್ದಾರೆ, ಸ್ಕೌಟ್ ಮತ್ತು ಗೈಡ್ ಪರಿಚಯವನ್ನು ಮಾಡಿದ ಶ್ರೇಯಸ್ಸು, ಹೀಗೆ ಇನ್ನೂ ಹತ್ತು -ಹಲವಾರು ಸವಿತಾ ದೇಶಮುಖ ಅವರು ಮಾತನಾಡಿದ ವಿಷಯಗಳನ್ನು ಇನ್ನೊಮ್ಮೆ ಸ್ಮರಿಸಿದರು.

ದತ್ತಿ ದಾಸೋಹಿಗಳಾದ ಸಿದ್ಧಪ್ಪ ಪಡನಾಡ  ಅವರು ತಮ್ಮ ತಂದೆ -ತಾಯoದಿರ ಬಗೆಗೆ ಅಭಿಮಾನದಿಂದ ಮಾತನಾಡಿದರು. ಡಾ. ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಡಾ. ರೇಣುಕಾ ನಾಗರಾಜ ಅವರ ಸ್ವಾಗತ,ಪರಿಚಯ ಪ್ರಸ್ತಾವನೆ,
ಡಾ. ಕಸ್ತೂರಿ ದಳವಾಯಿ ಅವರ ಶರಣು ಸಮರ್ಪಣೆ, ಶರಣೆ ಬನಶ್ರೀ ಹತ್ತಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣೆ ದೀಪಾ ಜಿಗಬಡ್ಡಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group