spot_img
spot_img

ಭಾವಾಂತರಂಗದಲ್ಲಿ ಏನೇನೋ

Must Read

spot_img
- Advertisement -

ಕಳೆದ ಎರಡು ದಿನಗಳಿಂದ ನಂದಿನಿ ಒಂದು ಪೋನ್ ಮತ್ತು ಸಂದೇಶ ಏನೂ ಮಾಡುತ್ತಿಲ್ಲವಲ್ಲ. ಏನಾಗಿರಬಹುದು ಇವಳಿಗೆ.? ಎಂದು ವಿಜಯ್ ಯೋಚಿಸುತ್ತಿದ್ದನು. ತಾನೇ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವಲ್ಲ. ಪೋನ್ ಕಟ್ ಮಾಡ್ತಿದ್ದಾಳೆ ಏನಾದರೂ ಆಗಿದೆಯೇ.? ನಮ್ಮ ಸ್ನೇಹದ ನಡುವೆ ಬಿರುಕು ಮೂಡಿಸುವ ಘಟನೆ ಏನಾದರೂ ಜರುಗಿರಬಹುದೇ.?   ಏನೆಲ್ಲ ಆಲೋಚನೆಗಳು.

ದಿನ ರಾತ್ರಿ ಮಲಗುವ ಮುಂಚೆ ಗುಡ್ ನೈಟ್ ಎಂದು ಹೇಳುತ್ತಿದ್ದಳು. ಬೆಳಿಗ್ಗೆ ಗುಡ್  ಮಾರ್ನಿಂಗ್ ಡಿಯರ್ ಎದ್ದಿದ್ದೀರಾ.!? ಎಂದು ಕೇಳುತ್ತಿದ್ದಳು. ದಿಢೀರ್ ಯಾಕೆ ನಿಲ್ಲಿಸಿರಬಹುದು.!? ಹಾಸಿಗೆಯ ಮೇಲೆ ಹೊರಳಾಡುತ್ತ ನಂದಿನಿಯ ಸಂದೇಶ ಬರಬಹುದೇ.? ಎಂದು ಪೋನ್ ಕಡೆಗೆ ನೋಡುತ್ತ ಮಲಗಿದ.

ಮರುದಿನ ಮತ್ತೆ ಎಂದಿನಂತೆ ಪೋನ್  ನೋಡಿದರೆ ಗುಡ್ ಮಾರ್ನಿಂಗ ಕೂಡ ಇಲ್ಲ. ಏನಾಗಿದೆ.ಎಂದು ಕರೆ ಮಾಡಿದರೆ ಆ ಕಡೆಯಿಂದ ಪೋನ್ ಸ್ವಿಚ್ ಆಪ್ ಎಂಬ ಧ್ವನಿ. ದಿನವಿಡೀ ಯಾವುದೇ ಕೆಲಸ ಮಾಡಬೇಕೆಂದು ಹೊರಟರೆ ಮತ್ತೆ ನಂದಿನಿಯದೇ ನೆನಪು. ಅವಳ ಮನೆಗೆ ಹೋಗಿಬರಲೇ ಎಂದು ಯೋಚಿಸಿದ ಆದರೆ ಅದು ಆಗದು.ಸುಮ್ಮನೇ ಒಂದು ಹೆಣ್ಣಿನ ಮನಸ್ಸಿನಲ್ಲಿ ಇಲ್ಲ ಸಲ್ಲದ ಆಲೋಚನೆ ಬಂದು ತನ್ನ ಮನೆಗೆ ಬಂದ ವ್ಯಕ್ತಿತ್ವದ ಕುರಿತು ಏನಾದರೂ ಸಂದೇಹ ಮೂಡಿ ತಮ್ಮ ಸ್ನೇಹಕ್ಕೆ ಕುಂದುಂಟಾದೀತು ಎಂದು ಸುಮ್ಮನಾದ.ಮನೆಯಲ್ಲಿ ಅವನ ತಾಯಿ “ಯಾಕೋ ವಿಜಯ್ ಕಳೆದ ಎರಡು ದಿನದಿಂದ ಏನೂ ತೋಚದವನಂತೆ ಸುಮ್ಮನೇ ಗರಬಡಿದವನಂತೆ ಕುಳಿತಿರುವೆಯಲ್ಲ ಯಾಕೆ.? ಏನಾಗಿದೆ. ಯಾರಾದರೂ ನಿನಗೆ ಏನಾದರೂ ಮನಸ್ಸಿಗೆ ನೋವುಂಟು ಮಾಡಿರುವರಾ”? ಎಂದು ಕೇಳಿದಾಗ. “ಏನಿಲ್ಲ.ಯಾಕೋ ಸುಸ್ತು ಅನಿಸ್ತಿದೆ.ಕೆಲಸ ಮಾಡಲು ಮನಸ್ಸು ಬರುತ್ತಿಲ್ಲ” ಎಂದಾಗ ಹಾಗಾದರೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಾ ಏನಾಗಿದೆ ಎಂದು ವೈದ್ಯರ ಸಲಹೆ ಪಡೆದು ಒಂದೆರಡು ದಿನಗಳ ಕಾಲ ವಿಶ್ರಾಂತಿಯನ್ನಾದರೂ ಪಡೆದುಕೊಳ್ಳು ಎಂದು ಅಮ್ಮ ಹೇಳಿದಾಗ ವಿಜಯ್ ಹಾಸಿಗೆಯಲ್ಲಿ ಮಲಗಿ ತನ್ನ ಮೋಬೈಲ್ ನಲ್ಲಿ ತಾನು ಶೇಖರಿಸಿಟ್ಟುಕೊಂಡ ನಂದಿನಿಯ ಮುಖವನ್ನು ನೋಡುತ್ತ ಕನಸಿನ ಲೋಕಕ್ಕೆ ಜಾರಿದ.

- Advertisement -

ನಂದಿನಿ ಮತ್ತು ವಿಜಯ್ ಪ್ರೀತಿಸತೊಡಗಿದ್ದು ಕಳೆದ ವರ್ಷ ಕಾಲೇಜಿನ ವಾರ್ಷಿಕೋತ್ಸವದ ನಿಮಿತ್ತ ನಾಟಕವೊಂದನ್ನು ರಿಹರ್ಸಲ್ ಮಾಡುತ್ತಿರುವಾಗ. 

ವಿಜಯ ತನ್ನ ಕಾಲೇಜಿನಲ್ಲಿ ತನಗಿಂತ ಚಿಕ್ಕವಳು ಮತ್ತು ಬಿ.ಕಾಂ ಮೊದಲ ವರ್ಷದಲ್ಲಿ ಓದುತ್ತಿರುವ ನಂದಿನಿ ಜೊತೆಗೆ ಒಂದು ಕಿರು ಪಾತ್ರದಲ್ಲಿ ರಿಹರ್ಸಲ್ ಮಾಡುವಾಗ ಪರಿಚಿತನಾಗಿದ್ದ. ಆಗ ನಂದಿನಿ ಇವನ ಜೊತೆ ಮಾತನಾಡುವಾಗ “ಏನ್ ಸರ್.” ಮುಂದಿನ ದೃಶ್ಯ ಯಾವುದು ಸರ್.? ಎಂದು ಮಾತನಾಡುತ್ತಿರುವಾಗ ಅವಳ ಮಧುರ ಮೆಲುದನಿಗೆ ಮನಸೋತಿದ್ದ. 

- Advertisement -

ಹಾಗೆಯೇ ನಾಟಕದ ರಿಹರ್ಸಲ್ ಒಂದು ವಾರಗಳ ಕಾಲ ಜರುಗಿದಾಗ ಅವಳಿಗಾಗಿ ಹಣ್ಣುಗಳನ್ನು ತಂದು ತಿನ್ನಲು ಕೊಟ್ಟಿದ್ದ. ಅದೇನೋ ಅವಳ ಮೇಲೆ ಅವನಿಗೆ ಪ್ರೇಮ ಮೂಡ ತೊಡಗಿತ್ತು. ಹೇಳಲಾರದೇ ಪರಿತಪಿಸಿದ್ದನು.

ನಾಟಕದ ದಿನ ಥಿಯೇಟರ್‌ನಲ್ಲಿ ರಿಹರ್ಸಲ್ ಇವರ ಪಾತ್ರಕ್ಕೆ ಇರಲಿಲ್ಲ. ಧೈರ್ಯ ಮಾಡಿ “ ಈ ದಿನ ಸುಮ್ಮನೇ ಬರುವಂತಾಯಿತಲ್ಲ. ನಮ್ಮ ಪಾತ್ರದ ರಿಹರ್ಸಲ್ ಇರದೇ ಹೋಗಿದ್ದರೆ ಮನೆಯಲ್ಲಿ ಇರಬಹುದಿತ್ತು”ಎಂದು ವಿಜಯ್ ತನ್ನ ವಿಚಾರವನ್ನು ಅರುಹಿದ್ದ. ಆಗ ನಂದಿನಿ “ಹೌದು. ಸುಖಾಸುಮ್ಮನೇ ನಮ್ಮನ್ನು ಬರ ಹೇಳಿ ಹೀಗೆ ಕಾಯುವಂತೆ ಮಾಡಿರುವರು.ಹೊರಗೆ ಎಲ್ಲಿಯಾದರೂ ಟೀ ಕುಡಿದು ಬರೋಣವೇ.?” ಅಂತ ಕೇಳಿದಳು.

ಇದೇ ಸುಸಂದರ್ಭ ತನ್ನ ಮನದ ಕೋರಿಕೆಯನ್ನು ಅವಳಿಗೆ ತಿಳಿಸಿ ಬಿಡಬಹುದು ಎಂದುಕೊಂಡು ಬನ್ನಿ ಹೋಗಿ ಬರೋಣ ಎಂದು ಕರೆದಿದ್ದ. ಇಬ್ಬರೂ ಸೇರಿ ಹತ್ತಿರದ ಹೊಟೇಲ್ ಒಂದಕ್ಕೆ ಹೋಗಿ ಅಲ್ಲಿ ತಿನ್ನಲು ದೋಸೆ ಹೇಳಿ ಮಾತಾಡುತ್ತ ಕುಳಿತರು.

ವಿಜಯ್ ತನ್ನ ಬದುಕಿನ ಸ್ಥಿತಿಗತಿಯನ್ನು ಹೇಳಿದ.ಅದನ್ನು ಕೇಳಿದ ನಂದಿನಿ ಇಷ್ಟೆಲ್ಲ ಸಂಗತಿಗಳು ನಿಮ್ಮ ಜೀವನದಲ್ಲಿ ಜರುಗಿವೆಯೇ.? ಎಂದು ಪ್ರಶ್ನಿಸಿದ್ದಳು. ಹೌದು. ಇದನ್ನು ತಮಗೆ ಹೇಳಬೇಕೆಂದುಕೊಂಡು ಹಲವು ದಿನಗಳಿಂದ ಕಾಯುತ್ತಿದ್ದೆ. ಆ ಸಂದರ್ಭ ಈ ದಿನ ಒದಗಿ ಬಂತು. ಎನ್ನುವಷ್ಟರಲ್ಲಿ ನನಗೆ ಹೇಳಬೇಕು ಅಂತ ನಿಮಗೆ ಯಾಕೆ.ಅನ್ನಿಸಿತು.? ಎಂದು ಕೇಳಿದಳು.

ಯಾಕೋ ಗೊತ್ತಿಲ್ಲ ರಿಹರ್ಸಲ್ ನಲ್ಲಿ ನಿಮ್ಮ ಮಾತುಗಳಿಗೆ ನಾನು ಆಕರ್ಷಿತನಾದೆ. ನನ್ನ ಭಾವನೆಗೆ ಸ್ಪಂದಿಸುವ ಹೃದಯ ನಿಮ್ಮದು ಎನಿಸಿತು.ಹೀಗಾಗಿ ಪ್ರತಿದಿನ ನಿಮಗೆ ಮೋಬೈಲ್ ನಲ್ಲಿ ಗುಡ್ ಮಾರ್ನಿಂಗ್ ಊಟ ಆಯಿತ ಮಲಗಿರುವಿರ ಏನು ಮಾಡುತ್ತಿರುವಿರಿ. ಎಂದೆಲ್ಲ ಸಂದೇಶ ಕಳಿಸತೊಡಗಿದಂತೆ ನೀವು ಕೂಡ ಸ್ಪಂದಿಸುತ್ತ ಸಾಗಿದಿರಿ. ನಂತರ ನನ್ನ ಮನದ ಭಾವಗಳನ್ನು ನಿಮ್ಮ ಬಳಿ ಹೇಳಬೇಕೆನಿಸಿತು. ಈಗ ಆ ಸಂದರ್ಭ ಒದಗಿ ಬಂತು ಹೇಳಿದೆ. ಎಂದು ಮೌನಕ್ಕೆ ಜಾರಿದ.

ಯಾಕೆ ನನಗೆ ಹೇಳ್ತಿದ್ದೀರಿ ನಿಮ್ಮ ದಿನನಿತ್ಯದ ಸಂದೇಶ ನೋಡಿದಾಗ ನನಗೆ ನೀವು ಭಾವಜೀವಿ ಅನಿಸಿತು. ಅದಕ್ಕೆ ನಿಮ್ಮ ಸಂದೇಶಗಳಿಗೆ ಪ್ರತಿಕ್ರಿಯೆ ನೀಡತಾ ಹೋದೆ. ನನಗೂ ಕೂಡ ಪ್ರತಿ ದಿನ ನಿಮ್ಮ ಸಂದೇಶ ನೋಡದೇ ಹೋದರೆ ಏನೋ ಕಳೆದುಕೊಂಡ ಅನುಭವ ಯಾಕೆ ಹೀಗೆ ನಿಮ್ಮೊಂದಿಗೆ ಇಷ್ಟು ಭಾವನಾತ್ಮಕವಾಗಿ ಬೆರೆತಿರುವೆ ಅನಿಸ್ತಿದೆ. ಪರವಾಗಿಲ್ಲರೀ ನಮ್ಮ ಸ್ನೇಹ ಹೀಗೆ ಇರಲಿ”ಎಂದು ಹೇಳಿದಾಗ ಇವಳಿಗೂ ನನ್ನ ಮೇಲೆ ಪ್ರೀತಿ ಮೂಡ್ತಿದೆ ಎಂದುಕೊಂಡು ವಿಜಯ್ ಹೊಟೇಲ್ ತಿಂಡಿ ತಿಂದು ಬಿಲ್ ಕೊಟ್ಟು ಅವಳೊಡನೆ ಹರಟುತ್ತ ಹೊರಬಂದನು.

ಪ್ರತಿ ನಿತ್ಯ ಸಂದೇಶಗಳಲ್ಲಿಯೇ ತಮ್ಮ ದೈನಂದಿನ ಆಗು ಹೋಗುಗಳನ್ನು ಹೇಳಿಕೊಳ್ಳುತ್ತಿದ್ದರು.ಎರಡು ಜೀವಗಳು ಅಗತ್ಯಕ್ಕೋ ಮೋಹಕ್ಕೋ ಭಾವಕ್ಕೋ ಒಂದಾಗುತ್ತವೆ,.ನಾವೆಲ್ಲ ಅದನ್ನು ಪ್ರೀತಿ ಎಂದು ಕರೆಯುತ್ತೇವೆ.ಅನಿಸಿದ್ದನ್ನು ನೇರವಾಗಿ ಹೇಳದಿದ್ದರೂ ಸಂದೇಶಗಳ ಮೂಲಕ ವಿನಿಮಯ ಮಾಡಿಕೊಂಡು ಇಬ್ಬರೂ ಒಬ್ಬರನ್ನೊಬ್ಬರು ದೈಹಿಕವಾಗಿ ಸ್ಪರ್ಶಿಸಿದ್ದರು ಕೂಡ.

ಆದರೆ ಇದ್ದಕ್ಕಿದ್ದಂತೆ ಮೌನವಾಗಲು ಕಾರಣ ವಿಜಯ್ ಗೆ ಗೊತ್ತಾಗುತ್ತಿಲ್ಲ. ರಾತ್ರಿ ಯಾವಾಗ ಎಚ್ಚರಗೊಳ್ಳುತ್ತಿದ್ದನೋ ಆವಾಗ ಮೋಬೈಲ್ ನೋಡಿ ನಂದಿನಿ ತನ್ನ ಸಂದೇಶ ನೋಡಿದ್ದಾಳೋ ಇಲ್ಲವೋ ಎಂದು ಮೋಬೈಲ್ ನೋಡುವುದು. ಅವಳು ನೋಡಿದ್ದು ಗೊತ್ತಾಗಿ ಮರಳಿ ಪ್ರತಿಕ್ರಿಯೆ ಬರಬಹುದಾ ಎಂದು ನಿದ್ದೆಗೆಟ್ಟು ಕಾಯ್ದು ಮತ್ತೆ ಮಲಗುವುದು. ಇದು ರೂಢಿಯಾಯಿತು.

ಮರ‍್ನಾಲ್ಕು ದಿನಗಳು ಕಳೆದಾಗಿ ಸಿಟ್ಟಿಗೆದ್ದು ತಾನೇ ಒಂದು ಸಂದೇಶ ಹಾಕಿದ. “ಇಷ್ಟು ದಿನಗಳ ಕಾಲ ನೀನು ಸುಮ್ಮನಿರಲು ಕಾರಣವಾದರೂ ಏನು.;? ನನ್ನಿಂದ ಆಗಿರುವ ತಪ್ಪನ್ನು ತಿಳಿಸು.? ನೀನು ಹೀಗೆ ಸುಖಾಸುಮ್ಮನೇ ಮೌನದೊಳಿದ್ದರೆ.ನಾ ಇನ್ಮುಂದೆ ನಿನಗೆ ಸಂದೇಶ ಹಾಕುವುದಾಗಲೀ ಪೋನ್ ಕರೆ ಮಾಡುವುದಾಗಲಿ ಏನನ್ನೂ ಮಾಡಲಾರೆ. ಇದು ನನ್ನ ಕೊನೆಯ ಸಂದೇಶ.” ಎಂದು ಸಂದೇಶ ಹಾಕಿ ಸುಮ್ಮನಾಗಿಬಿಟ್ಟನು.

ಒಂದು ತಾಸು ಕಳೆದಿತ್ತು ಅವಳಿಂದ ಮರಳಿ ಸಂದೇಶ ಬಂತು. ವಿಜಯ್ “ನೀನು ಆ ದಿನ ಬೇರೆ ಹುಡುಗಿಯೊಂದಿಗೆ ಚಲ್ಲುಚಲ್ಲಾಗಿ ವರ್ತಿಸುತ್ತ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಡೆದು ಬರುತ್ತಿರುವುದನ್ನು ನಾನು ನೋಡಿದೆ. ನಮ್ಮಿಬ್ಬರ ಮದುವೆಗೆ ಮುಂಚೆ ಈ ರೀತಿ ಮಾಡಿದರೆ ಯಾವ ಹೆಣ್ಣು ತಾನೇ ಕೋಪಿಸಿಕೊಳ್ಳಲಾರಳು.? ಯಾರಾಕೆ.?” ಎಂದು ಸಂದೇಶ ಬಂದಾಗ ವಿಜಯ್‌ನಿಗೆ ಏನೂ ತೋಚದಂತಾಯಿತು. ಕಳೆದ ನಾಲ್ಕೆöÊದು ದಿನಗಳ ಹಿಂದೆ ಯಾರು ತನ್ನ ಜೊತೆ ಮಾತಾಡಿರಬಹುದು ಎಂದೆಲ್ಲ ಜ್ಞಾಪಿಸಿಕೊಳ್ಳತೊಡಗಿದ.

ಆಗ ಅರ್ಥವಾಯಿತು. ತನ್ನ ಕ್ಲಾಸ್ ಮೇಟ್ ವಂದನಾ ಆತನಿಗೆ ನೋಟ್ಸ ಸಲುವಾಗಿ ಪರಿಪರಿಯಾಗಿ ರಸ್ತೆಯಲ್ಲಿ ಬೇಡುತ್ತ ಹರಟೆ ಹೊಡೆಯುತ್ತಿದ್ದಳು.ಅವಳು ಗಂಡುಬೀರಿ ತರಹ.ಯಾವುದೇ ಹುಡುಗರ ಜೊತೆ ಮಾತನಾಡೋದು ಹಾಗೆಯೇ. ಅದು ಅವಳ ಸ್ವಭಾವ ಕೂಡ.ಅದನ್ನು ನಂದಿನಿ ದೂರದಿಂದ ನೋಡಿರುವಳು.ಅಬ್ಬಾ ಇದಾ ವಿಷಯ ಎಂದುಕೊಂಡು ನಡೆದಿರುವ ಸಂಗತಿಯನ್ನೆಲ್ಲ ಸಂದೇಶಗಳಲ್ಲಿಯೇ ಪ್ರತಿಕ್ರಯಿಸಿದ.

ಕೊನೆಗೆ ನಾಳೇನೇ ನನ್ನ ಕಾಲೇಜಿಗೆ ಬಂದು ಅವಳ ಹೆಸರನ್ನು ಯಾರದೇ ಹುಡುಗಿಯರ ಮುಂದೆ ಪ್ರಸ್ತಾಪಿಸು ಅವಳು ಇರೋದೇ ಹೀಗೆ ಅಂತ ಹೇಳಿದರೆ ನನ್ನನ್ನು ನಂಬು ಇಲ್ಲದಿದ್ದರೆ ನಂಬಬೇಡ.ಎಂದು ಸಂದೇಶ ಹಾಕಿದ್ದನು.

‘ನಂಬಿರೋದ್ರಿಂದ ತಾನೇ ನಿನ್ನ ಸ್ನೇಹ ಮಾಡಿರೋದು ಆದರೆ ನೀನು ಹೀಗೆ ಮಾಡಬಹುದಾ.? ಯಾವ ಹೆಣ್ಣು ತಾನೇ ತನ್ನ ಭಾವೀ ಪತಿ ಮತ್ತೊಂದು ಹೆಣ್ಣಿನೊಂದಿಗೆ ಹೀಗೆ ಚಲ್ಲುಚಲ್ಲಾಗಿ ವರ್ತಿಸೋದನ್ನು ಕಂಡು ಸುಮ್ಮನೇ ಇರೋಕೆ ಸಾಧ್ಯ. ಎರಡು ದಿನಗಳಿಂದ ನನ್ನ ಪರಿಸ್ಥಿತಿ ಏನಾಗಿರಬಹುದು. ನನ್ನ ಮನಸ್ಸಿಗೆ ಎಷ್ಟು ನೋವಾಗಿರಬಹುದು ಯೋಚಿಸಿದ್ದೀಯಾ.? ನಿನಗೆ ಒಂದು ಹೆಣ್ಣಿನ ಮನಸ್ಸಿನ ಭಾವ ಅರ್ಥವಾಗೋಲ’್ಲ ಎಂದೆಲ್ಲ ಕೋಪದಿಂದ ಸಂದೇಶ ಹಾಕಿದ್ದಳು.

ಆಗ ವಿಜಯ್ ತನ್ನ ಅಸಹಾಯಕತೆ ತೋರ್ಪಡಿಸಿ ನಿನಗೆ ಇನ್ನೂ ನನ್ನ ಮೇಲೆ ಕೋಪಾನಾ.? ಎಂದು ಸಂದೇಶ ಕಳಿಸಿದ.ಆಗ ನಂದಿನಿ “ಹೂಂ ಮತ್ತೆ.” ಎಂದಾಗ.

“ಆಯಿತು. ನಿನ್ನ ಸಿಟ್ಟು ಯಾವಾಗ ಕಡಿಮೆ ಆಗತ್ತೋ ಆವಾಗಲೇ ನನ್ನ ಜೊತೆ ಮಾತಾಡು, ನಾನು ಅಲ್ಲಿವರೆಗೂ ನಿನಗೆ ಪೋನ್ ಮಾಡೋದಾಗಲೀ.ಸಂದೇಶ ಹಾಕೋದಾಗಲೀ ಮಾಡಲಾರೆ” ಎಂದು ಮೌನವಾಗಿ ಬಿಟ್ಟ. 

ಆಗ ಆತನ ಪೋನ್ ರಿಂಗಾಗತೊಡಗಿತು ನಂದಿನಿಯ ಪೋನ್ ಕರೆ ಅದು ಪೋನ್ ಕರೆ ಸ್ವೀಕರಿಸಿದ. ಏನೂ ಮಾತಿಲ್ಲ ಸ್ವಲ್ಪ ಹೊತ್ತು ನೀರವ ಮೌನ ನಂತರ ನಾನು ನಿನ್ನ ಜೊತೆ ಒಳ್ಳೆಯ ರಿಲೇಶನ್ ಶಿಪ್‌ನಲ್ಲಿ ಇದ್ದೇನೆ. ನೀನು ಒಳ್ಳೆಯವ ಅಂತ ಗೊತ್ತು. ಆದರೆ ಮತ್ತೊಂದು ಹೆಣ್ಣು ನಿನ್ನ ಜೊತೆ ಇರುವಾಗ ನೀನು ನನ್ನವನಾಗಿರುವಂತೆ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ಎನ್ನುವಾಗ ಮನದಲ್ಲಿ ನೋವಿನ ಛಾಯೆ. ಅವಳ ಭಾವನೆ ಅರ್ಥ ಮಾಡಿಕೊಂಡ ವಿಜಯ್ “ಹೇ ನಂದಿನಿ ಈ ಹೃದಯವು ನಿನ್ನದು. ಅದು ಯಾವತ್ತೂ ಬೇರೆಯವರ ಪಾಲಾಗದು.ಈ ಹೃದಯ ಮಿಡಿತ ನಂದಿನಿ ನಂದಿನಿ ಅಂತ ಹೇಳುತ್ತೇ ವಿನಹ ಬೇರೆ ಅಲ್ಲ ಕಣೇ. ಸಾಕುಬಿಡು ನಿನ್ನ ನೋವಿನ ಛಾಯೆ. ನನಗೆ ನನ್ನ ನಂದಿನಿ ಬೇಕು. ವಿಡಿಯೋ ಕಾಲ್ ಮಾಡು” ಎಂದಾಗ ಪೋನ್ ಕರೆ ಶಾಂತ ಮಾಡಿ ವಿಡಿಯೋ ಕರೆ ಮಾಡಲು ತಿಳಿಸಿದಾU   ಮುನಿಸಿಕೊಂಡಿದ್ದ ನಂದಿನಿ ವಿಜಯ್ ಗೆ ಕರೆ ಮಾಡಲು  ‘ನಂದಿನಿಯ ಮುಖ ವಿಜಯ್ ವಿಜಯ್ ಮುಖ ನಂದಿನಿ ಪರಸ್ಪರ ನೋಡಿಕೊಂಡು ನಮ್ಮ ಪ್ರೀತಿ ಶಾಶ್ವತ’ ಎನ್ನುವಾಗ ಅದೇನೋ ಸಂಭ್ರಮ. ಕಳೆದ ಎರಡು ದಿನಗಳ ಕಾಲ ನಡೆದ ಕಹಿ ಎರಡು ಕ್ಷಣಗಳಲ್ಲಿ ಮಾಯವಾಗಿತ್ತು. 

ಇದು ಭಾವನೆಗಳ ತಾಕಲಾಟ. ಪ್ರೀತಿಸುವ ಹೃದಯವು ಯಾವತ್ತೂ ತನ್ನ ಪ್ರೀತಿಯನ್ನು ತನ್ನ ಪ್ರಾಣದ ಹಾಗೆ ಹಿಡಿದಿಟ್ಟುಕೊಳ್ಳುವ ಭಾವಾಂತರಂಗದ ಸನ್ನಿವೇಶದಲ್ಲಿ ಅರಳುವ ಪ್ರೇಮ ಕಾವ್ಯ.

(ಬರಹಕ್ಕೆ ಪೂರಕ ರೇಖಾಚಿತ್ರ – ರೇಖಾ ಮೊರಬ)


ವೈ.ಬಿ.ಕಡಕೋಳ

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group