ಮೂಡಲಗಿ ಪ್ರಿಮಿಯರ್ ಲೀಗ್ -೨೦೨೪ ಕ್ರಿಕೆಟ್ ಟೂರ್ನಿ ಉದ್ಘಾಟನೆ
ಮೂಡಲಗಿ: ‘ಕ್ರೀಡೆಗಳ ಆಯೋಜನೆಯಿಂದ ಜನರಲ್ಲಿ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್. ಸೋನವಾಲಕರ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಮೈದಾನದಲ್ಲಿ ಮೂಡಲಗಿ ಮಾರ್ನಿಂಗ್ ಸ್ಟಾರ್ ಕ್ರಿಕೆಟರ‍್ಸ್ ಮತ್ತು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಂಯುಕ್ತವಾಗಿ ಏರ್ಪಡಿಸಿದ್ದ ‘ಮೂಡಲಗಿ ಪ್ರಿಮಿಯರ ಲೀಗ್-೨೦೨೪’ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಪಿ. ಸೋನವಾಲಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
ಸಾಹಿತಿ ಮತ್ತು ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ, ಎಂಪಿಎಲ್-೨೦೨೪ ಇದು ಎರಡನೇ ಬಾರಿ ಕ್ರಿಕೆಟ್ ಟೂರ್ನಿ ಏರ್ಪಡಿಸಿದ್ದು, ಟೂರ್ನಿಯು ಮೂಡಲಗಿ ತಾಲ್ಲೂಕಿನ ಕ್ರಿಕೆಟ್ ಪ್ರತಿಭೆಗಳ ಸಂಗಮವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ, ಶಿವು ಚಂಡಕಿ, ಸಂತೋಷ ಸೋನವಾಲಕರ, ಜಯಾನಂದ ಪಾಟೀಲ, ಕಿರಣ ಪ್ರಕಾಶ ಸೋನವಾಲಕರ, ಸಂದೀಪ ಮಲ್ಲಪ್ಪ ಸೋನವಾಲಕರ, ಡಾ. ಮಹೇಶ ಶಿವರಾಯ ಕಂಕಣವಾಡಿ, ಎನ್.ಟಿ. ಪಿರೋಜಿ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ, ಪ್ರಶಾಂತ ನಿಡಗುಂದಿ, ಈರಣ್ಣ ಜಕಾತಿ, ಸುಪ್ರೀತ ಸೋನವಾಲಕರ, ಸುರೇಶ ದೇಸಾಯಿ, ಪ್ರಶಾಂತ ಸಣ್ಣಕ್ಕಿ, ಶಿವಬಸು ಸುಣಧೋಳಿ, ಸಂಪತ ಉಡುಪಿ, ಚೇತನ ಪೂಜೆರಿ, ಬಸವರಾಜ ಭುಜನ್ನವರ, ಶ್ರೀಶೈಲ್ ಲೋಕಣ್ಣವರ ಅತಿಥಿಯಾಗಿದ್ದರು.
ಟೂರ್ನಿ ಸಂಘಟಕರಾದ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ, ಸೋಮು ಮಠಪತಿ, ಸನೀತ ಸೋನವಾಲಕರ, ವಿಶ್ವನಾಥ ಬೆಲ್ಲದ, ಗಿರೀಶ ಮೇತ್ರಿ, ಪ್ರವೀಣ ಕುರಬಗಟ್ಟಿ, ಕೃಷ್ಣಾ ಕೆಂಪಸತ್ತಿ, ಲಕ್ಕಪ್ಪ ತಳವಾರ, ಶೇಖರಯ್ಯ ಹಿರೇಮಠ, ಉಸ್ಮಾನ ಮುಲ್ಲಾ, ರವಿ ಪತ್ತಾರ, ಎಂ.ಜಿ. ಗೌಡರ, ದೇವೆಂದ್ರ ಕಲಾಲ ಇದ್ದರು.
ಟೂರ್ನಿಯು ೬ರಿಂದ ನ. ೧೦ರ ವರೆಗೆ ೫ ದಿನಗಳ ವರೆಗೆ ನಡೆಯಲಿದೆ. ೮ ಒವರಗಳ ಲೀಗ್ ಹಂತದ ಟೂರ್ನಿಯಲ್ಲಿ ಎಸ್‌ಬಿಇ, ಮೂಡಲಗಿ ರಾಯಲ್ಸ್, ಮೂಡಲಗಿ ಸೂಪರ್ ಕಿಂಗ್ಸ್, ಮೂಡಲಗಿ ರಾಯಲ್ ಚಾಲೆಂಜರ್ಸ, ಮೂಡಲಗಿ ಅಡ್ವೋಕೆರ‍್ಸ್ ಮತ್ತು ಮೂಡಲಗಿ ವಾರಿಯರ್ಸ ತಂಡಗಳು ಭಾಗವಹಿಸಿವೆ.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. ೫೦ ಸಾವಿರ, ದ್ವಿತೀಯ ರೂ. ೩೦ ಸಾವಿರ ಮತ್ತು ತೃತೀಯ ಬಹುಮಾನ ರೂ. ೨೦ ಸಾವಿರ ನಗದು ಬಹುಮಾನಗಳೊಂದಿಗೆ ಟ್ರೋಫಿಗಳನ್ನು ನೀಡಲಾಗುವುದು. ಪ್ರತಿ ಪಂದ್ಯಕ್ಕೆ ಬೆಸ್ಟ್ ಬ್ಯಾಟ್ಸ್ಮನ, ಬೆಸ್ಟ್ ಬೌಲರ್ ಮತ್ತು ಕೊನೆಯಲ್ಲಿ ಮ್ಯಾನ ಆಫ್ ಸಿರೀಜ್, ಹೆಚ್ಚು ರನ್ ಗಳಿಸುವ ಮತ್ತು ವಿಕೇಟ ಪಡೆಯುವ ಆಟಗಾರರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.