spot_img
spot_img

ಎ.12 ರಿಂದ 22 ರವರಿಗೆ ಯಾದವಾಡದಲ್ಲಿ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆ

Must Read

- Advertisement -

ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಜಾತ್ರಾ ಕಮೀಟಿ ಅಧ್ಯಕ್ಷ ನ್ಯಾಮಗೌಡರ

ಮೂಡಲಗಿ: ಕೊರೋನಾ ಸಂದರ್ಭದಲ್ಲಿ ಯಾದವಾಡ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಎ.12 ರಿಂದ 22 ರವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಗ್ರಾಮೀಣ ಪ್ರದೇಶದ ಸ್ಪರ್ಧೆ ಹಾಗೂ ಜಾನುವಾರುಗಳ ಜಾತ್ರೆಯೊಂದಿಗೆ ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಅನ್ನದಾಸೋಹದೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಶಿವಪ್ಪಗೌಡ ಬ.ನ್ಯಾಮಗೌಡರ ತಿಳಿಸಿದರು.

ಅವರು ಯಾದವಾಡದಲ್ಲಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಎ.12 ರಂದು ಮುಂ 7ಗಂಟೆಗೆ ಶ್ರೀ ವರಗುರುವರೇಣ್ಯ ಚೌಕೇಶ್ವರ ಶಿವಯೋಗಿಗಳವರ ಕರ್ತೃಗದ್ದುಗೆಗೆ ಮಹಾರುದ್ರಾಭೀಷೇಕ ಮತ್ತು ರಾತ್ರಿ 8 ರಿಂದ ಗಂಟೆಗೆ ನಾಲ್ಕು ದಿವಸಗಳ ವರೆಗೆ ಸಕಲ ವಾದ್ಯ ವೈಭವಗಳೊಂದಿಗೆ “ವಾಹನೋತ್ಸವ” ಜರುಗುವುದು.

- Advertisement -

ಎ.15 ರಂದು ಮುಂ 7ಗಂಟೆಗೆ ಶ್ರೀ ಈಶ್ವರ ದೇವರ ಹಾಗೂ ಘಟ್ಟಗಿ ಬಸವೇಶ್ವರ ಮಹಾಮಸ್ತಕಾಭಿಷೇಕ, ಜಲ ಸಂಶೋಧಕ ಕಾರ್ಯಕ್ರಮ ಶ್ರೀ ವೇ.ಮೂ ಈರಯ್ಯಾ ಮಹಾಸ್ವಾಮಿಗಳು ದೇವನಾಳ ಮಠ ಶಾಸ್ತ್ರಿಗಳವರ ವೇದಘೋಷದೊಂದಿಗೆ 108 ಬಿಲ್ವಾರ್ಚನೆ ಹಾಗೂ ಪುಷ್ಪಾರ್ಚನೆ, ಪುರ ಸದ್ಭಕ್ತರಿಂದ ಮತ್ತು ಮುಂಜಾನೆ 10 ಗಂಟೆಗೆ ಮುತೈದೆಯರಿಂದ ಗ್ರಾಮದ ಅಧಿದೇವತೆಯಾದ ಶ್ರೀ ಹೊನ್ನಮ್ಮ ದೇವಿಯ ಉಡಿತುಂಬುವುದು, ರಾತ್ರಿ 9 ಗಂಟೆಗೆ ಶ್ರೀ ಚೌಕೇಶ್ವರ ಶಿವಯೋಗಿಗ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ರಥದ ಕಳಸಾರೋಹಣ ಕಾರ್ಯಕ್ರಮ ಜರುಗುವುದು.

ಎ.16ರಂದು ಸಂಜೆ 5ಗಂಟೆಗೆ ಕ್ಷೇತ್ರಾಧಿಪತಿ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮಹಾರಥೋತ್ಸವ ಜರುಗುವುದು.

ಎ.17ರಂದು ಮುಂ. 9ಕ್ಕೆ ಒಂದು ನಿಮಿಷದ ಬಂಡಿ ಸ್ಪರ್ಧೆ, ಎ.18ರಂದು ಮುಂ 9ಕ್ಕೆ ದನಗಳ ಪಾಸ ಬರೆದುಕೊಳ್ಳುವುದು, ಸಂಜೆ 5ಕ್ಕೆ ನಿಕಾಲಿ ಜಂಗಿ ಕುಸ್ತಿಗಳು ಜರುಗುವವು.

- Advertisement -

ಎ.19 ರಂದು ಮುಂ 11ಕ್ಕೆ ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆ, ಸಂಜೆ 5ಕ್ಕೆ ಟಗರಿನ ಕಾಳಗ ಸ್ಪರ್ಧೆ ಜರುಗುವವು, ಎ.20ರಂದು ಮುಂ.9ಕ್ಕೆ ತೆರೆಬಂಡಿ ಸ್ಪರ್ಧೆ, ಸಂಜೆ 5ಕ್ಕೆ ಪಾಸಾದ ದನಗಳ ಭಕ್ಷಿಸ ಕೊಡಲಾಗುವುದು.

ಎ.21 ರಂದು ಮುಂ 9ಕ್ಕೆ ಕೂಡು ಗಾಡಿ ಬಂಡಿ ಸ್ಫರ್ಧೆ 10ಕ್ಕೆ ಜೋಡು ಕುದುರೆ ಬಂಡಿ ಸ್ಪರ್ಧೆ ಜರುಗುವವು.

ಎ.22 ರಂದು ಸಂಜೆ 5ಕ್ಕೆ ಶ್ರೀ ಪ.ಪೂ ಶಿವಯೋಗಿ ದೇವರಿಂದ ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯ ಕಲ್ಮೇಶ ಗಾಣಿಗ, ಜಾತ್ರಾ ಕಮೀಟಿ ಕಾರ್ಯದರ್ಶಿಗಳಾದ ಹಣಮಂತ ಚಿಕ್ಕೇಗೌಡರ, ಗೋಲಪ್ಪ ಕಾಗವಾಡ ಮತ್ತು ಸುನೀಲ ನ್ಯಾಮಗೌಡರ, ಮಹಾದೇವ ಶೆಟ್ಟರ, ರಮೇಶ ಸಾವಳಗಿ, ಹನುಮಂತ ಹ್ಯಾಗಾಡಿ, ಚನ್ನಪ್ಪ ಕೆಂಜೋಳ ಮತ್ತಿತರರು ಇದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group