ಬೆಳಗಾವಿ – ಖಾಸಭಾಗ ಕ್ಲಸ್ಟರ್ ವತಿಯಿಂದ ಕ್ಲಸ್ಟರ್ ನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ 15 ಮಲಪ್ರಭಾ ನಗರ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಭಾಗ ಕ್ಲಸ್ಟರ ಹೆಸರನ್ನು ರಾಜ್ಯ ಹಂತದವರೆಗೂ ಗುರುತಿಸಿದ ನಮ್ಮೆಲ್ಲರ ಹೆಮ್ಮೆಯ ಶಿಕ್ಷಕಿಯರಾದ ಶ್ರೀಮತಿ ಸುಶೀಲಾ ಗುರವ ಇವರನ್ನು ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಿಮಿತ್ಯ ಖಾಸಭಾಗ ಕ್ಲಸ್ಟರ ಎಲ್ಲ ಪ್ರಧಾನ ಗುರುಗಳು, ಗುರುಮಾತೆಯರು ಸೇರಿ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು KHPS no 15 ಶಾಲೆಯ ಪ್ರಧಾನ ಗುರುಗಳಾದ ಕೃಷ್ಣ ರಾವಳ ಇವರು ವಹಿಸಿದ್ದರು.
ಕ್ಲಸ್ಟರ್ ನ CRP ಗಳಾದ ಸಿ.ಟಿ ಪೂಜಾರ ಮತ್ತು ಶಿಕ್ಷಕರ ಸೊಸೈಟಿ ಅಧ್ಯಕ್ಷರಾದ ಐ. ಬಿ.ಘಟ್ಟದ , ರೂಗಿ ಸರ್, ಕ್ಲಸ್ಟರ್ ಎಲ್ಲ ಪ್ರಧಾನ ಗುರುಗಳು, ಶಾಲೆಯ ಶಿಕ್ಷಕ ಬಳಗ ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. CRP ಸಿ.ಟಿ ಪೂಜಾರ ಅವರು ಶಿಕ್ಷಕರ ಕಾರ್ಯ ಕುರಿತು ಮಾತನಾಡಿದರು.
ಕೆಜಿಸ್ 3 ಶಾಲೆಯ ಪ್ರಧಾನ ಗುರುಮಾತೆಯರಾದ ಶ್ರೀಮತಿ ಏಗನಗೌಡರ ಇವರು ಕೂಡ ತಮ್ಮ ಒಡನಾಡಿ ಶಿಕ್ಷಕಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶಾರದಾ ಲಮಾಣಿ ಶಿಕ್ಷಕಿಯರು, ಸ್ವಾಗತವನ್ನು ಶ್ರೀಮತಿ ಶ್ರೀದೇವಿ ಪಾಟೀಲ್ ಶಿಕ್ಷಕಿಯರು, ವಂದನಾರ್ಪಣೆಯನ್ನು ಕುಮಾರಿ ಆಯಿಷಾ ಶಿಕ್ಷಕಿಯರು ಮಾಡಿದರು.
ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕಿ ಸುಶೀಲಾ ಗುರವ ಇವರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.