spot_img
spot_img

ವಿದ್ಯಾರ್ಥಿಗಳ ಜೀವನ ನಂದಾದೀಪ ವಾಗಬೇಕು: ಎಸ್ಎಸ್ ಆದಾಪುರ

Must Read

- Advertisement -

ಬಾಗಲಕೋಟೆ : ಜಗತ್ತನ್ನು ಆಳುವಂತಹ ಸಂಕಲ್ಪ ಶಕ್ತಿ ಪ್ರೀತಿಗೆ ಇದೆ. ಮಾನವನಿಗೆ ಅಸಾಧ್ಯವಾದುದು ಯಾವುದು ಇಲ್ಲ ಮನಸಿದ್ದಲ್ಲಿ ಮಾರ್ಗವಿದೆ. ವಿದ್ಯಾರ್ಥಿಗಳ ಜೀವನ ನಂದಾ ದೀಪದ ಹಾಗೆ ಬೆಳಗಲು ಒಳ್ಳೆತಯತನವನ್ನು ರೂಢಿಸಿಕೊಳ್ಳಬೇಕು ಎಂದು ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಸ್.ಎಸ್. ಆದಾಪೂರ ಹೇಳಿದರು.

ಅವರು ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಪಿಎಸ್ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡ ಗುರುವಂಧನಾ ಸಮಾರಂಭ ಹಾಗೂ ಅಭಿನಂಧನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಎಲ್ಲಾ ಕಡೆ ಸ್ಪರ್ಧೆಗಳಿದ್ದು; ತಮ್ಮ ಪರಿಶ್ರಮ ದೃಢ ನಿರ್ಧಾರಗಳಿಂದ, ಬಂಧುತ್ವದ ಮೌಲ್ಯಗಳ ಅಳಡವಡಿಕೆಯಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಇತಿಹಾಸ ಉಪನ್ಯಾಸಕ ಬಿ. ಬಿ. ಬೇವೂರ ಮಹಾವಿದ್ಯಾಲಯ, ಇಲ್ಲಿನ ಗುರು ಬಳಗದ ಮೇಲೆ ತಾವು ಇಟ್ಟುಕೊಂಡ ಪ್ರೀತಿ ಅಭಿಮಾನದ ದ್ಯೋತಕವಾಗಿ ಭಾವನಾತ್ಮಕ ಬಂಧವನ್ನು ತೋರುವ ಗುರುವಂಧನಾ ಸಮಾರಂಭ ನೇರವೇರಿಸಿದ್ದು ಸಂತಸವನ್ನು ತಂದಿದೆ ತಮ್ಮ ಮೂರು ದಶಕಗಳ ಸೇವಾ ಅವಧಿಯಲ್ಲಿ ಇದೊಂದು ಅವಿಸ್ಮರಣಿಯ ಕ್ಷಣವಾಗಿದ್ದು ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚೆಚ್ಚು ವರ್ಷಗಳ ತನಕ ಕಲಿಸಬೇಕೆಂಬ ಉತ್ಸಾಹ ಚೈತನ್ಯವನ್ನು ವಿದ್ಯಾರ್ಥಿ ಬಳಗದ ಪ್ರೀತಿ ತಂದುಕೊಟ್ಟಿದೆ ಎಂದು ಹೇಳಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಜಗದೀಶ ಗು. ಭೈರಮಟ್ಟಿ ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳು, ಭೂಮಿ ಋಣವನ್ನು ತೀರಿಸುವುದಕ್ಕೆ ಆಗೋದಿಲ್ಲ. ಒಳ್ಳೆ ಮಕ್ಕಳನ್ನು ಈ ನಾಡಿಗೆ ಆಸ್ತಿಯಾಗಿ ಕೊಡಮಾಡಿದರೆ ನಾಡಿನ ಪ್ರಗತಿಗೆ ಕಾರಣ ಎನಿಸುತ್ತದೆ. ಗುರು ಬಳಗವನ್ನು ವೈಭವದ ಮಂಗಲ ವಾದ್ಯ ಮೇಳದೊಟ್ಟಿಗೆ ಗುರುಶ್ರೇಷ್ಠರೆನಿಸಿದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಅಭಿಮಾನ ಪ್ರೀತಿಯ ದ್ಯೋತಕವಾಗಿ ತಾವೆಲ್ಲ ಸರತಿ ಸಾಲಿನಲ್ಲಿ ನಿಂತು ಗೌರವ ನಮನ ಸಲ್ಲಿಸುತ್ತಾ ಪುಷ್ಫವೃಷ್ಟಿಯ ಮೂಲಕ ವೇದಿಕೆಗೆ ಕರೆತಂದು ಭಾವನಾತ್ಮಕ ಸತ್ಕಾರ ಸನ್ಮಾನಗಳನ್ನು ಏರ್ಪಡಿಸಿದ್ದು ಮೂಕವಿಸ್ಮಿತರನ್ನಾಗಿಸಿದೆ. ತಮ್ಮ ಪ್ರೀತಿಗೆ ಅಭಿಮಾನದ ಸಮಾರಂಭಕ್ಕೆ ಕಲಾ ಮಹಾವಿದ್ಯಾಲಯದ ಸರ್ವರೂ ಸಂತಸ ಸಂಭ್ರಮದ ಹಾರೈಕೆಗಳನ್ನು ತಮಗೆ ಸಮರ್ಪಿಸುತ್ತಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಭವಿತವ್ಯದ ದಿನಗಳಲ್ಲಿ ಹುಡುಗಾಟವನ್ನು ಕಡಿಮೆಮಾಡಿಕೊಂಡು ಜ್ಞಾನ, ಸಂಸ್ಕಾರಗಳ ಹುಡುಕಾಟದತ್ತ ಮುಖ ಮಾಡಬೇಕು. ದಾನ ದಾನಗಳಲ್ಲಿ ಶ್ರೇಷ್ಠವಾದ ವಿದ್ಯಾದಾನದಿಂದ ವಜ್ರದಂತಹ ಪ್ರಕಾಶ ತಮ್ಮೆಲ್ಲರಿಗೂ ಬರಬೇಕು ಕಾಯಕ ನಿಷ್ಠರಾಗಿ ತಾವೆಲ್ಲರೂ ಬೆಳೆಯಬೇಕೆಂದು ಹಾರೈಸಿದರು.

ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಎನ್. ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಜಿ.ಎಸ್. ಗೌಡರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ. ಸಂಗಮೇಶ ಹಂಚಿನಾಳ, ಇಂಗ್ಲೀಷ ಉಪನ್ಯಾಸಕ ಡಿ.ವಾಯ್ ಬುಡ್ಡಿಯವರ, ಇತಿಹಾಸ ಉಪನ್ಯಾಸಕ ಡಾ. ಆದಪ್ಪ ಮ. ಗೊರಚಿಕ್ಕನವರ, ರಾಜ್ಯಶಾಸ್ತç ಉಪನ್ಯಾಸಕ ನಾಗಲಿಂಗೇಶ ಬೆಣ್ಣೂರ, ಬೋಧಕೇತರ ಸಿಬ್ಬಂದಿಯವರಾದ ಆರ್. ಬಿ. ಕರಡಿಗುಡ್ಡ, ಗ್ಯಾನಪ್ಪ ಶಿರೂರ, ಶಿವು ಕಟಗಿ, ಎಸ್. ಬಿ ಹೂಗಾರ ಮುಂತಾದವರು ಭಾಗಿಯಾಗಿದ್ದರು. ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ ಪರಶುರಾಮ ಅಂಬಿಗೇರ ಸ್ವಾಗತಿಸಿದರು. ಸುರೇಖಾ ಚಲವಾದಿ ಪುಷ್ಪಾರ್ಪಣೆ ಕಾರ್ಯಕ್ರಮ ನೇರವೇರಿಸಿಕೊಟ್ಟರು. ವಿದ್ಯಾರ್ಥಿನಿಯರಾದ ಪ್ರತಿಭಾ ಅಶೋಕ ಹೆಳವರ, ಪ್ರತಿಭಾ ಶೇಖಪ್ಪ ಪೂಜಾರಿ ಕನ್ನಡ ಹಾಗೂ ಇಂಗ್ಲೀಷ ದ್ವಿ ಭಾಷೆಗಳಲ್ಲಿ ನಿರೂಪಿಸಿದರು. ವಿದ್ಯಾರ್ಥಿನಿ ವಸಂತಲಕ್ಷ್ಮಿ ಸಜ್ಜನ ಸನ್ಮಾನ ಸತ್ಕಾರ ಸಮಾರಂಭವನ್ನು ನಡೆಸಿಕೊಟ್ಟರು. ಭಾಗ್ಯಶ್ರೀ ಇಜಾರದಾರ ವಂದಿಸಿದರು. ಹೃತೀಕ್ ಭಜಂತ್ರಿ ಕಾಲೇಜಿನ ವಿದ್ಯಾರ್ಥಿ ವೃಂದದವರ ಸಹಕಾರಕ್ಕೆ ಕೃತಜ್ಞಾಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಅಶ್ವಿನಿ ಗೌಡರ, ಅಶ್ವಿನಿ ಜಾನಮಟ್ಟಿ, ಸಂಗನಬಸಮ್ಮ ಕರಿಗಾರ ಸಂಗಡಿಗರು ಪ್ರಾರ್ಥಿಸಿದರು. ಸುಜಾತ ಕಡೆಮನಿ, ಸಂಗಮ್ಮ ತೆಗ್ಗಿನಮನಿ, ಭಾಗ್ಯಶ್ರೀ ಗೌಡರ ಸಂಗಡಿಗರು ಗುರುಸ್ಮರಣೆಯ ಹಾಡನ್ನು ಹಾಡಿದರು. ವಿದ್ಯಾರ್ಥಿಗಳಾದ ಪ್ರವೀಣ ಬ. ಹೀರೆಮಾಗಿ, ಆದರ್ಶ ರಂಗಾಪೂರ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

- Advertisement -

ವಾದ್ಯಮೇಳದ ಮೆರುಗು : ಕಾಲೇಜಿನ ಆವರಣದ ದ್ವಜ ಕಟ್ಟೆಯಿಂದ ಕಾರ್ಯಕ್ರಮದ ಸಭಾಂಗಣದ ತನಕ ಶಹನಾಯಿ, ಹಲಗೆ ಮಜಲಿನ ವಾದ್ಯಮೇಳ ನಡುವೆ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರ ಎಡ ಬಲದಲ್ಲಿ ವಿದ್ಯಾರ್ಥಿಗಳು ಗುರುಬಳಗಕ್ಕೆ ನಮನ ಸಲ್ಲಿಸುತ್ತಾ ಪುಷ್ಫವೃಷ್ಟಿ ಸಮರ್ಪಿಸುತ್ತಾ ಸಾಗಿದ್ದು ಅಕ್ಷರ ಅರಿವು ಜ್ಞಾನ ನೀಡಿದ ಗುರುವೃಂದದವರು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು. ಸಂಗಮೇಶ ಭಜಂತ್ರಿ, ಗೋಪಾಲ ಮಾದಾರ, ನಿಂಗಣ್ಣ ವಾಲೀಕಾರ, ಸಂತೋಷ ಮೇಟಿ, ಸಂಗಮೇಶ ಚಲವಾದಿ, ರೇವಣಶಿದ್ದಮಾಗಿ, ಬಸವರಾಜ ಚಲವಾದಿ, ಕಿರಣಕುಮಾರ ಎಸ್.ಎ, ಗೋಪಾಲ ಮಾದಾರ, ಸಲ್ಮಾ ನಧಾಪ, ಮಂಗಲಾ ಆಲೂರ, ಭಾಗ್ಯಾ ರ‍್ಯಾಗಿ, ರೇಷ್ಮಾ ಹಳ್ಳೂರ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಮೆರವಣಿಗೆಯ ನೇತೃತ್ವವನ್ನು ವಹಿಸಿಕೊಂಡು ಗುರುಬಳಗವನ್ನು ವೇದಿಕೆಯತ್ತ ಕರೆತಂದು ಗೌರವದ ನಮನ ಸಲ್ಲಿಸಿದರು.

ವಿದ್ಯಾರ್ಥಿಗಳೆ ತಯಾರಿಸಿದ ಪುಷ್ಪಗುಚ್ಚಗಳು : ಕಾರ್ಯಕ್ರಮದ ನಿಮಿತ್ತವಾಗಿ ವಿದ್ಯಾರ್ಥಿ ಪಾಂಡುರಂಗ ಸಂದಿಮನಿ ನೇತೃತ್ವದಲ್ಲಿ ಕಿರಣಪತ್ತಾರ ಚನ್ನಬಸು ಹುನಗುಂದ, ಪ್ರಜ್ಚಲ ಕುರಿ, ಮಲ್ಲಿಕಾರ್ಜುನ ಕಂಬಾರ ರವಿ ಮಾದಾರ ಮುಂತಾದವರು ತಯಾರಿಸಿದ ಪುಷ್ಫಗುಚ್ಚಗಳು ಆಕರ್ಷಣಿಯ ಎನಿಸಿ ವಿದ್ಯಾರ್ಥಿಗಳ ಸೃಜನಶೀಲತೆಗೆ ಅಭಿನಂಧಿಸಲಾಯಿತು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group