spot_img
spot_img

ಪುಡಿ ಉಪ್ಪು ಎಂಬುದು ಉಪ್ಪಲ್ಲ, ಬಿಳಿ ವಿಷ !!

Must Read

- Advertisement -

ಈ ಮಾತನ್ನು ನಾವೆಲ್ಲರೂ ನಂಬಲೇಬೇಕು, ಹಾಗೂ ಬಲವಂತವಾಗಿಯಾದರೂ ಒಪ್ಪಲೇಬೇಕು.

ಸ್ನೇಹಿತರೇ,
ಸಾಮಾನ್ಯವಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲೂ ಪುಡಿ ಉಪ್ಪನ್ನು ಬಳಸುತ್ತೇವೆ. ಬಳಸಲೇಬೇಕು ಕೂಡ. ಯಾಕೆ ಅಂದ್ರೆ ಉಪ್ಪು ಇಲ್ಲದೆ ಆಹಾರ ರುಚಿ ಇರುವುದಿಲ್ಲ. ಅದಕ್ಕೇ ಅಲ್ಲವೇ ಹೇಳೋದು,
“ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ” ಅಂತ. ಈ ಗಾದೆಮಾತು ಉಪ್ಪಿನ ಮಹತ್ವವನ್ನು ಅದೆಷ್ಟು ಚೆನ್ನಾಗಿ ತಿಳಿಸುತ್ತದೆ ನೋಡಿ. ಈ ಉಪ್ಪು ನಮ್ಮ ದೈನಂದಿನ ಆಹಾರದಲ್ಲಿ ಅನಿವಾರ್ಯವಾದ ಭಾಗವಾಗಿಬಿಟ್ಟಿದೆ. ಅಲ್ಲದೇ ನಮ್ಮ ದೇಹದಲ್ಲಿ ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು, ಮೂಳೆಯ ಸಾಂದ್ರತೆ, ಸರಿಯಾದ ರಕ್ತಪರಿಚಲನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ಉಪ್ಪು ಬಹಳ ಸಹಕಾರಿ.
ಈ ಉಪ್ಪಿನಲ್ಲೂ ಬಹಳ ವಿಧಗಳಿವೆ. ಕಲ್ಲುಪ್ಪು, ಪುಡಿಉಪ್ಪು (ಟೇಬಲ್‌ ಸಾಲ್ಟ್‌), ಕಪ್ಪು ಉಪ್ಪು, ಸಾವಯವ ಉಪ್ಪು, ಸೈಂದವ ಲವಣ ಉಪ್ಪು, ಕೆಂಪು ಹವಾಯಿಯನ್ ಸಾಲ್ಟ್, ಸಾಲ್ಟ್ ಫ್ಲ್ಯೂರ್ ಡಿ ಸೆಲ್ ಹೀಗೆ ಅನೇಕ ವಿಧಗಳಿವೆ. ಆದರೆ ಕೆಲವು ಉಪ್ಪು ನಮ್ಮ ಆರೋಗ್ಯದ ಮೇಲೆ ನಿಧಾನ ವಿಷದಂತೆ ಪರಿಣಾಮ ಉಂಟು ಮಾಡುತ್ತಿವೆ.
ಇದರಲ್ಲಿ ಬಹುಮುಖ್ಯವಾಗಿ ನಮಗೆ ಅತೀ ಹೆಚ್ಚು ಹಾನಿಕಾರಿಯಾಗಿರುವುದು ಪುಡಿ ಉಪ್ಪು (ಟೇಬಲ್‌ ಸಾಲ್ಟ್‌).!!

ಯಾಕೆ ಅಂತೀರಾ ?
1. ಪುಡಿಉಪ್ಪನ್ನು ಹೇಗೆ ತಯಾರಿಸಲಾಗುತ್ತದೆ?
ಪುಡಿಉಪ್ಪನ್ನು ಸೋಡಿಯಂ ಕ್ಲೋರೈಡ್‌ನಿಂದ ತಯಾರಿಸುತ್ತಾರೆ. ಈ ಉಪ್ಪು ನೈಸರ್ಗಿಕವಾಗಿ ಸಿಗುವ ಸಮುದ್ರದ ಉಪ್ಪು, ಕಲ್ಲು ಉಪ್ಪು ಮತ್ತು ಸ್ಫಟಿಕ ಉಪ್ಪಿನಂತೆಯೇ ಕಂಡರೂ, ಪುಡಿ ಉಪ್ಪು ಇದರ ನೈಸರ್ಗಿಕವಾದ ಯಾವುದೇ ಅಂಶವನ್ನು ಹೊಂದಿಲ್ಲ, ಬದಲಾಗಿ ಕೇವಲ ಅದರ ರುಚಿಯನ್ನು ಮಾತ್ರ ಅನುಕರಿಸುತ್ತದೆ. ಪುಡಿಉಪ್ಪನ್ನು ಕಚ್ಚಾ ತೈಲದ ಸಾರದಿಂದ ತಯಾರಿಸುತ್ತಾರೆ.

- Advertisement -

ಕಚ್ಚಾ ತೈಲವನ್ನು 1200 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬಿಸಿ ಮಾಡುವ ಮೂಲಕ ಪುಡಿಉಪ್ಪು ತಯಾರಾಗುತ್ತದೆ. ಈ ತಾಪಮಾನದಲ್ಲಿ ಉಪ್ಪನ್ನು ಬಿಸಿ ಮಾಡಿದಾಗ ಅದರಲ್ಲಿರುವ ಸುಮಾರು 80% ರಷ್ಟು ಪ್ರಮುಖ ಖನಿಜಾಂಶಗಳು ತನ್ನ ಸತ್ವವನ್ನೇ ಕಳೆದುಕೊಳ್ಳುತ್ತವೆ ಎಂದರೆ ಅಚ್ಚರಿಯಲ್ಲ.

2. ಟೇಬಲ್ ಉಪ್ಪಿನಲ್ಲಿ ಏನು ಇದೆ?
ನಾವು ಮಾರುಕಟ್ಟೆಯಿಂದ ಖರೀದಿಸುವ, ರೆಸ್ಟೋರೆಂಟ್ ಗಳಲ್ಲಿ ಕಾಣಸಿಗುವ ಅಥವಾ ಹೊಟೇಲ್‌ ಸೇರಿದಂತೆ ಎಲ್ಲೆಡೆ ಬಳಸುವ ಪುಡಿ ಉಪ್ಪಿನಲ್ಲಿ ಸಂಶ್ಲೇಷಿತ ರಾಸಾಯನಿಕ (ಸಿಂಥೆಟಿಕ್‌ ಕೆಮಿಕಲ್‌) ಗಳಿವೆ. ಪುಡಿಉಪ್ಪು ಕೇವಲ ಅನಾರೋಗ್ಯಕರವಲ್ಲ, ಅವು ವಿಷಕಾರಿಯೂ ಹೌದು.

3. ಇದು ಹೇಗೆ ವಿಷಕಾರಿಯಾಗಬಹುದು?                     ನೈಸರ್ಗಿಕ ಉಪ್ಪು ಅಥವಾ ಪುಡಿ ಉಪ್ಪಿನಲ್ಲಿರುವ ನೈಸರ್ಗಿಕ ಅಯೋಡಿನ್ ಅಂಶ ಈ ಪುಡಿಉಪ್ಪಿನಲ್ಲಿ ಖಂಡಿತವಾಗಿಯೂ ಇರುವುದಿಲ್ಲ. ಪುಡಿಉಪ್ಪಿನಲ್ಲಿ ನೈಸರ್ಗಿಕ ಅಯೋಡಿನ್ ಅಂಶ ಇಲ್ಲದೇ ಇರುವುದೇ ನಿಮ್ಮ ಥೈರಾಯ್ಡ್ ಗ್ರಂಥಿಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಅಲ್ಲದೇ, ಚಯಾಪಚಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಬಹುತೇಕರು ಪುಡಿಉಪ್ಪು (ಸಿಂಥೆಟಿಕ್)ನ್ನು ಇಂದಿಗೂ ನೈಸರ್ಗಿಕ ಉಪ್ಪು ಎಂದೇ ಪರಿಗಣಿಸುತ್ತಾರೆ.

- Advertisement -

4. ಬಣ್ಣ.                                                                ನೈಸರ್ಗಿಕ ರೂಪದಲ್ಲಿ ನಮಗೆ ಸಿಗುವ ಉಪ್ಪು ಬಿಳಿಯಾಗಿರುವುದಿಲ್ಲ. ಬ್ಲೀಚ್ ಅನ್ನು ಬಳಸಿ ‌ಟೇಬಲ್ ಉಪ್ಪನ್ನು ಬಿಳಿಯಾಗಿ ಮಾಡಲಾಗುತ್ತದೆ. ಈ ಉಪ್ಪನ್ನು ಬಿಳಿ ಮಾಡಲು ಬಳಸುವ ವಸ್ತುವು ತೈಲ ಅಗೆಯುವಾಗ ಸಿಗುವ ಫ್ಲಾಕಿ (ಕಚ್ಚಾ) ಶೇಷವಾಗಿದೆ.

5. ಆರೋಗ್ಯ ಅಪಾಯಗಳು
ನಮ್ಮ ದೇಹದ ಜೀರ್ಣಕ್ರಿಯೆಗೆ ತೊಡಕಾಗುವ ಪ್ರತಿ ಗ್ರಾಂ ಸೋಡಿಯಂ ಕ್ಲೋರೈಡ್‌ ಜೀರ್ಣವಾಗಲು 23 ಪಟ್ಟು ಜೀವಕೋಶದ ನೀರನ್ನು ಬಳಸುತ್ತದೆ. ಆದ್ದರಿಂದ, ಸೋಡಿಯಂ ಕ್ಲೋರೈಡ್ ನಮ್ಮ ದೇಹದ ನೀರಿನಾಂಶ ಅಥವಾ ದ್ರವಾಂಶದ ಸಮತೋಲನಕ್ಕೆ ಸಾಕಷ್ಟು ತೊಂದರೆಗೊಳಿಸುತ್ತದೆ. ಅಜೈವಿಕ ಸೋಡಿಯಂ ಕ್ಲೋರೈಡ್ ಅನ್ನು ತಟಸ್ಥಗೊಳಿಸುವ ಇಂಥಾ ಪ್ರಕ್ರಿಯೆಯಲ್ಲಿ ನಮ್ಮ ದೇಹದ ಜೀವಕೋಶಗಳು ನಿರ್ಜಲೀಕರಣಗೊಂಡು ನಿಧಾನವಾಗಿ ಕೊಲ್ಲಲ್ಪಡುತ್ತವೆ.

6. ಅಪಾಯಕಾರಿ ಸಂರಕ್ಷಕಗಳನ್ನು ಒಳಗೊಂಡಿದೆ.
ಪುಡಿಉಪ್ಪು ಹೆಚ್ಚಾಗಿ ಅಪಾಯಕಾರಿ ಸಂರಕ್ಷಕ (ಪ್ರಿಸರ್ವೇಟಿವ್‌)ಗಳನ್ನು ಹೊಂದಿರುತ್ತದೆ. ಪುಡಿಉಪ್ಪು ಸುಲಭವಾಗಿ ಬಳಸಲು ಅನುಕೂಲವಾಗುವಂತೆ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಅನ್ನು ಇದಕ್ಕೆ ಸೇರಿಸಲಾಗುತ್ತದೆ. ನಮಗೆ ತಿಳಿದಿರುವಂತೆ ಅಲ್ಯೂಮಿನಿಯಂ ನಿಮ್ಮ ಮೆದುಳಿನಲ್ಲಿ ಸಂಗ್ರಹವಾಗುವ ಗುಣವನ್ನು ಹೊಂದಿದ್ದು, ಅಲ್ಲದೇ ಅಲ್‌ಜೈಮರ್ ಕಾಯಿಲೆಗೆ ಕಾರಣವಾಗುವ ಲೋಹವಾಗಿದೆ.

7.ಪುಡಿಉಪ್ಪಿನ ಇತರ ಸಮಸ್ಯೆಗಳು
ಪುಡಿಉಪ್ಪಿನ ನಿರಂತರ ಬಳಕೆಯಿಂದ ಊತ, ಪಿತ್ತಜನಕಾಂಗದ ಸಮಸ್ಯೆ, ಅಧಿಕ ರಕ್ತದೊತ್ತಡ, ಹೃದ್ರೋಗ, ಸ್ನಾಯು ಸೆಳೆತ, ಪಾರ್ಶ್ವವಾಯು, ಹೃದಯ ವೈಫಲ್ಯ, ಎಡಿಮಾ, ಪಿಎಂಎಸ್, ಆತಂಕ ಮತ್ತು ನರಮಂಡಲದ ಕಾಯಿಲೆಗಳು ಹೆಚ್ಚಾಗುವ ಅಪಾಯ ಹಾಗೂ ಸಾಧ್ಯತೆ ಇದೆ.

8. ಟೇಬಲ್ ಉಪ್ಪು ವ್ಯಸನಕಾರಿ
ನಿಮಗೆ ಗೊತ್ತಿರಲಿ,, ಈ ಪುಡಿಉಪ್ಪು ಸತತವಾಗಿ ಬಳಸುವುದರಿಂದ ಇದೇ ನಿಮಗೆ ವ್ಯಸನಕಾರಿಯಾಗುತ್ತದೆ. ಈಗಾಗಲೇ ಬಹುತೇಕರು ಇದಕ್ಕೆ ಗಂಟುಬಿದ್ದಿರುವುದು ನಿಜಕ್ಕೂ ಆಘಾತಕಾರಿ. ಅದಕ್ಕೆ ಕಾರಣ ನೀವು ಇದನ್ನು ಬಳಸಲು ಆರಂಭಿಸಿದ ನಂತರ ನಿಮ್ಮ ದೇಹವು ಮತ್ತೆ ಮತ್ತೆ ಅದನ್ನು ಹೆಚ್ಚು ಬಳಸಿಕೊಳ್ಳುತ್ತದೆ, ಹೆಚ್ಚು ಹೆಚ್ಚು ಇದನ್ನು ಹಂಬಲಿಸುತ್ತದೆ. ಆದರೆ ನೆನಪಿರಲಿ ಪುಡಿಉಪ್ಪು ನಮ್ಮ ನರಮಂಡಲ ವ್ಯವಸ್ಥೆ ಮತ್ತು ರಕ್ತಪರಿಚಲನಾ ವ್ಯವಸ್ಥೆಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ.

9. ಸಮುದ್ರದ ಉಪ್ಪಿಗೆ ಬದಲಿಸಿ
ನೈಸರ್ಗಿಕವಾಗಿ ದೊರಕುವ ಸಮುದ್ರದ ಉಪ್ಪು ಮತ್ತು ಸೈಂದವ ಲವಣ ಉಪ್ಪು ವಾಸ್ತವವಾಗಿ ಕ್ಷಾರೀಯ ಖನಿಜಗಳಾಗಿವೆ, ಅದು ನಮ್ಮ ದೇಹದಲ್ಲಿ ಸೋಡಿಯಂ-ಪೊಟ್ಯಾಶಿಯಂ ಅನ್ನು ಸಮತೋಲನಗೊಳಿಸುವಲ್ಲಿ ಸಹಕಾರಿಯಾಗಿದೆ. ಇದು ನಮ್ಮ ದೇಹದಲ್ಲಿ ಅಗತ್ಯವಾದ ನೀರಿನಂಶ ಇರುವಂತೆ ಹೈಡ್ರೀಕರಿಸುತ್ತದೆ ಮತ್ತು ಎಲೆಕ್ಟ್ರೋಲೈಟ್‌ ಅನ್ನು ಸಹ ಸಮತೋಲನವಾಗಿ ಕಾಪಾಡಿಕೊಳ್ಳುತ್ತದೆ.

ಇಷ್ಟೇ ಅಲ್ಲದೆ, ನೈಸರ್ಗಿಕ ಉಪ್ಪು ನಾವು ತಿನ್ನುವ ಆಹಾರದಿಂದ ಪೋಷಕಾಂಶಗಳನ್ನು ಹೊರತೆಗೆಯಲು ಸಹಾಯ ಮಾಡುವ ಜೀರ್ಣಕಾರಿ ಕಿಣ್ವಗಳ ಸೃಷ್ಟಿಯನ್ನು ಹೆಚ್ಚಿಸುತ್ತದೆ. ಥೈರಾಯ್ಡ್, ರೋಗನಿರೋಧಕಶಕ್ತಿ ಮತ್ತು ಮೂತ್ರಜನಕಾಂಗದ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುವ ಖನಿಜಾಂಶಗಳು ಸಮುದ್ರದ ಉಪ್ಪಿನಲ್ಲಿದೆ.
ಹಾಗಾಗಿ ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಪುಡಿ ಉಪ್ಪಿನ ಬಳಕೆಯ ಬದಲಿಗೆ ಸಮುದ್ರದ ಉಪ್ಪನ್ನು ಬಳಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಡಾ. ಹೇಮಂತ ಚಿನ್ನು                                          ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group